ಜಯಾ ಪ್ರಕರಣ: 76 ಸಾಕ್ಷಿಗಳು ಉಲ್ಟಾ ಹೊಡೆದಿದ್ದು ಯಾಕೆ?

Subscribe to Oneindia Kannada

ನವದೆಹಲಿ, ಮಾರ್ಚ್, 15:"ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಜ್ಯದ ವಾದವನ್ನು ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸುತ್ತಿರುವ ಬಿವಿ ಆಚಾರ್ಯ ಪ್ರಕರಣವನ್ನು ಜಾಲಾಡುತ್ತಿದ್ದಾರೆ.

ಜಯಲಲಿತಾ ಪ್ರಕರಣದಲ್ಲಿ 76 ಸಾಕ್ಷಿಗಳು ಉಲ್ಟಾ ಹೊಡೆದಿದ್ದು ಹೇಗೆ? ಪ್ರಕರಣ ನಿಧಾನವಾಗುತ್ತದೆ ಎಂಬುದನ್ನು ಮೊದಲೇ ಅರಿತುಕೊಂಡ ಅವರಿ 2001 ರ ನಂತರ ಎರಡು ಸಾರಿ ತಮಿಳುನಾಡು ಮುಖ್ಯಮಂತ್ರಿಯಾದರು. ಇಲ್ಲಿಯೂ ತಂತ್ರ ಅನುಸರಿಸಿದರು ಎಂದು ಆಚಾರ್ಯ ವಾದಿಸಿದ್ದಾರೆ.[ಗಡಿಬಿಡಿಯಲ್ಲಿ ಜಯಾ ಪ್ರಕರಣಕ್ಕೆ ಕುಮಾರಸ್ವಾಮಿ ಮೊಳೆ ಜಡಿದರೆ?]

 jayalalalithaa

ಪ್ರಕರಣದ ವಿಚಾರಣೆ ನಿಧಾನವಾಗಲು ಜಯಲಲಿತಾ ಅನೇಕ ಕ್ರಮಗಳನ್ನು ಅನುಸರಿಸಿದರು. ಸಾಕ್ಷಿಗಳ ಮೇಲೆಯೂ ಪ್ರಭಾವ ಬೀರಿದರು ಎಂದು ಆಚಾರ್ಯ ತಮ್ಮ ವಾದವನ್ನು ಮಂಡಿಸಿದರು.[ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಟೈಮ್ ಲೈನ್]

ಒಂದು ಕೋಟಿಯ ಪ್ರಕರಣವಾದರೂ ಅದು ಅಕ್ರಮ ಆಸ್ತಿ ಸಂಪಾದೆನೆಯ ಅಡಿಯಲ್ಲಿಯೇ ಬರುತ್ತದೆ. ಅಂತಹುದರಲ್ಲಿ ಇಷ್ಟು ದೊಡ್ಡ ಪ್ರಕರಣದಲ್ಲಿ ಹೈಕೋರ್ಟ್ ಕೇವಲ ಲಿಖಿತ ಹೇಳಿಕೆಗಳನ್ನು ಮಾತ್ರ ಪಡೆದುಕೊಂಡಿತು. ನಮಗೆ ಸಂಪೂರ್ಣ ವಾದ ಮಂಡಿಸಲು ಕರ್ನಾಟಕ ಹೈಕೋರ್ಟ್ ನಲ್ಲಿ ಅವಕಾಶ ಸಿಗಲೇ ಇಲ್ಲ. ನಾವು ಅವಕಾಶ ಕೇಳಿದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಲಿಲ್ಲ ಎಂದು ಆಚಾರ್ಯ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
B V Acharya, special public prosecutor for Karnataka commences arguments in Jayalalithaa D A case. He tells the Supreme Court that Jayalalithaa did everything to delay the case. All efforts were made to delay the case as much as possible and now there should not be any further delay.
Please Wait while comments are loading...