ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: 3 ಉಗ್ರರ ಹತ್ಯೆ
ಶ್ರೀನಗರ, ನವೆಂಬರ್ 01: ಜಮ್ಮು ಕಾಶ್ಮೀರದ ಬುದ್ಗಾಮ್ ನ ಜಾಗೂ ಅರಿಜಲ್ ಎಂಬಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ ಭಾರತೀಯ ಸೇನೆ ಎರಡರಿಂದ ಮೂರು ಭಯೋತ್ಪಾದಕರನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಅಕ್ಟೋಬರ್ 23ರಂದು ಪೂಂಛ್ ಮತ್ತು ಝಲ್ಲಾಸ್ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಪಾಕಿಸ್ತಾನದ ಸೇನೆಯ ಆಡಳಿತಾತ್ಮಕ ಹೆಡ್ ಕ್ವಾರ್ಟರ್ ಮೇಲೆ ಭಾರತೀಯ ಸೇನೆ ತೀವ್ರ ದಾಳಿ ನಡೆಸಿತ್ತು. ಇದನ್ನು ಮಿನಿ ಸರ್ಜಿಕಲ್ ದಾಳಿ ಎಂದೇ ಕರೆಯಲಾಗುತ್ತಿತ್ತು.

ಇದಕ್ಕೂ ಮುನ್ನ ಅ.21 ರಂದು ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೈನಿಕರು ಹಾಗೂ ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಅ.18 ರಂದು ಪುಲ್ವಾಮದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.
{document1}












Click it and Unblock the Notifications