ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ನೆರವಾದರು: ಮೋದಿ

ಗೋಹಾನಾ(ಹರ್ಯಾಣಾ), ಅಕ್ಟೋಬರ್ 18: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರನ್ನು ಖಂಡಿಸುವ ಮೂಲಕ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ನೆರವಾದರು ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.

ಹರ್ಯಾಣದ ಗೊಹಾನಾ ಎಂಬಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಾಶ್ಮೀರದ ಕುರಿತಂತೆ ಕಾಂಗ್ರೆಸ್ ನ ಕೆಲವು ಮುಖಂದರು ನೀಡಿದ ಹೇಳಿಕೆ ಪಾಕಿಸ್ತಾನ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ನೆರವಾಯಿತು ಎಂದು ಮೋದಿ ಹೇಳಿದರು.

Jammu And Kashmir Issue: Narendra Modi In Haryana Blames Congress leaders

"ನಾವು ಯಾವಾಗ ಸ್ವಚ್ಛ ಭಾರತ, ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್ ಸ್ಟ್ರೈಕ್ ಎಂದು ಮಾತನಾಡುತ್ತೇವೋ, ಆಗೆಲ್ಲ ಕಾಂಗ್ರೆಸ್ ಗೆ ನೋವಾಗುತ್ತದೆ. ಕಾಶ್ಮೀರದ ಬಗ್ಗೆಯೂ ಹಾಗೇ ಆಯ್ತು. ಅವರು ನೀಡಿದ ಹೇಳಿಕೆ ಪಾಕಿಸ್ತಾನಕ್ಕೆ ನೆರವಾಯ್ತು. ಇಂಥ ನಡೆಯನ್ನು ಏನೆಂದು ಕರೆಯಬೇಕು?" ಎಂದು ಅವರು ಪ್ರಶ್ನಿಸಿದರು.

ಜಮ್ಮು ಕಾಶ್ಮೀರ ಮತ್ತು ಲಡಾಖ್ ಗಳ ಬೆಳವಣಿಗೆಗೆ ಅಡ್ಡಿಯಾಗಿದ್ದ ಸವಿಧಾನದ 370 ನೇ ವಿಧಿಯನ್ನು ರದ್ದು ಮಾಡಿದ್ದೇವೆ. ಇಡೀ ದೇಶ ಇದಾಗುವುದೇ ಇಲ್ಲ ಎಂದು ಭರವಸೆ ಕಳೆದುಕೊಂದಿದ್ದ ಕೆಲಸವನ್ನು ನಾವು ಮಾಡಿದ್ದೇವೆ.ಕಾಂಗ್ರೆಸ್ ನ ಆಡಳಿತದಲ್ಲಿ ಎಂದಿಗೂ ರೈತರಾಗಲೀ, ಸೈನಿಕರಾಗಲೀ ಸುರಕ್ಷಿತವಾಗಿರಲಿಲ್ಲ" ಎಂದು ಮೋದಿ ಹೇಳಿದರು.

ಹರ್ಯಾಣದಲ್ಲಿ ಅಕ್ಟೋಬರ್ 21 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+