ಜಮ್ಮು-ಕಾಶ್ಮೀರ: ಓರ್ವ ಸೈನಿಕ ಹುತಾತ್ಮ, ಇಬ್ಬರು ಭಯೋತ್ಪಾದಕರ ಹತ್ಯೆ

ಬಡಿಪೊರ, ಜೂನ್ 14: ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ ಇಂದು(ಜೂನ್ 14) ಬೆಳಿಗ್ಗೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ.

ಬಂಡಿಪೊರದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೈನಿಕರೊಬ್ಬರನ್ನು ತಕ್ಷಣವೇ ಸೇನಾ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾದರು.

ನಿನ್ನೆ(ಜೂನ್ 13)ಯಷ್ಟೇ, ಜಮ್ಮು ಕಾಶ್ಮೀರದ ಸಾಂಬಾ ಬಳಿಯ ಚಾಬಿಯಾಲ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ್ದ ಗುಂಡಿನ ದಾಳಿಯಲ್ಲಿ ನಾಲ್ವರು ಬಿ ಎಸ್ ಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

ಈ ನಾಲ್ವರಲ್ಲಿ ಓರ್ವ ಅಸಿಸ್ಟಂಟ್ ಕಮಾಂಡಂಟ್ ಮತ್ತು ಓರ್ವ ಸಬ್ ಇನ್ಸ್ಪೆಕ್ಟರ್ ಸಹ ಇದ್ದರು.

Jammu and Kashmir: 1 Army personnel, 2 militants killed in ongoing operation

ಜೂನ್ 12 ರಂದು ಬೆಳಗ್ಗಿನ ಜಾವ ಇಲ್ಲಿನ ಪುಲ್ವಾಲ ಪೊಲೀಸ್ ಗಾರ್ಡ್ ಪೋಸ್ಟ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+