ಎಂಟು ಉಗ್ರಗಾಮಿಗಳನ್ನು ಹೊಡೆದುರುಳಿಸಿದ ರಕ್ಷಣಾ ಪಡೆ
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ರಕ್ಷಣಾ ಪಡೆಯ ಸಿಬ್ಬಂದಿ ಎಂಟು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾರೆ. ವರದಿಗಳ ಪ್ರಕಾದ ಶೋಪಿಯಾನ್ ನ ಕಚ್ ದೂರ ಹಾಗೂ ದ್ರಾಗಡ್ ಹಳ್ಳಿಯಲ್ಲಿ ಕಾರ್ಯಾಚರಣೆ ಮುಂದುವರಿದಿತ್ತು.
ರಕ್ಷಣಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಜಮ್ಮು- ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಒಬ್ಬ ಉಗ್ರನನ್ನು ಕೊಂದು ಹಾಕಿ, ಮತ್ತೊಬ್ಬನನ್ನು ಬಂಧಿಸಲಾಗಿತ್ತು. ಅನಂತ್ ನಾಗ್ ನ ದಯಲ್ ಗಾಮ್ ಎಂಬಲ್ಲಿ ಗುಂಡಿನ ಚಕಮಕಿ ನಡೆದಿತ್ತು.
ಎಎನ್ ಐ ಸುದ್ದಿ ಸಂಸ್ಥೆ ವರದಿ ಪ್ರಕಾರ, ಭಾನುವಾರ ಬೆಳಗಿನ ಜಾವ ಗುಂಡಿನ ಚಕಮಕಿ ಆರಂಭವಾಯಿತು. ಆ ವೇಳೆ ಒಬ್ಬ ಉಗ್ರನನ್ನು ಕೊಂದು ಹಾಕಿ, ಹೊಸದಾಗಿ ನೇಮಕಗೊಂಡಿದ್ದ ಮತ್ತೊಬ್ಬ ಉಗ್ರನನ್ನು ಬಂಧಿಸಲಾಯಿತು. ಗುಂಡಿನ ಚಕಮಕಿ ವೇಳೆ ರಕ್ಷಣಾ ಪಡೆಯ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಮತ್ತೊಂದು ಘಟನೆಯಲ್ಲಿ ಅಹ್ಗಾಂ ಪ್ರದೇಶದಲ್ಲಿ ಉಗ್ರಗಾಮಿಗಳು ದಾಳಿ ನಡೆಸಿದ್ದರು.

ಫೆಬ್ರವರಿ ಹತ್ತರಂದು ಉಗ್ರಗಾಮಿಗಳ ಗುಂಪೊಂದು ಸುಂಜವಾನ್ ಸೈನಿಕ ಕ್ಯಾಂಪ್ ಮೇಲೆ ದಾಳಿ ನಡೆಸಿತ್ತು. ಆ ವೇಳೆ ಐವರು ಯೋಧರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು. ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಲಾಗಿತ್ತು.












Click it and Unblock the Notifications