12-17 ವರ್ಷದವರ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರಿದ J&J

ನವದೆಹಲಿ, ಆಗಸ್ಟ್‌ 20: ಅಮೆರಿಕದ ಬೃಹತ್ ಔಷಧ ಉತ್ಪಾದನಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಭಾರತದಲ್ಲಿ ಮಕ್ಕಳ ಮೇಲೆ ತನ್ನ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಕದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.

12-17 ವರ್ಷದ ಮಕ್ಕಳಿಗೆ ಜಾನ್ಸನ್ ಅಂಡ್ ಜಾನ್ಸನ್ ಏಕ ಡೋಸ್ ಲಸಿಕೆಯ ಪ್ರಯೋಗ ನಡೆಸಲು ಕಂಪನಿ ಮಂಗಳವಾರ ಕೇಂದ್ರೀಯ ಔಷಧ ನಿಯಂತ್ರಕ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ.

'ಭಾರತದಲ್ಲಿ 12-17 ವಯಸ್ಸಿನವರಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕೊರೊನಾ ಲಸಿಕೆಯ ಪ್ರಯೋಗ ನಡೆಸಲು ನಾವು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದೇವೆ' ಎಂದು ಜೆ ಅಂಡ್ ಜೆ ಇಂಡಿಯಾ ವಕ್ತಾರರು ಮಾಹಿತಿ ನೀಡಿದ್ದಾರೆ.

J&J Applies For Corona Vaccine Trial In India For 12 To 17 Age Group

"ಅಂತಿಮವಾಗಿ 'ಹರ್ಡ್ ಇಮ್ಯುನಿಟಿ' ಸಾಧಿಸಲು ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗಗಳು ನಡೆಯುವ ಅಗತ್ಯವಿದೆ. ನಮ್ಮ ಕೊರೊನಾ ಲಸಿಕೆ ಎಲ್ಲಾ ವಯೋಮಾನದವರಿಗೂ ಸಮನಾಗಿ ಲಭ್ಯವಾಗುವಂತೆ ಮಾಡಲು ಅಗತ್ಯ ಕಾರ್ಯವನ್ನು ನಡೆಸಲು ನಾವು ಬದ್ಧರಾಗಿದ್ದೇವೆ' ಎಂದು ಕಂಪನಿ ಹೇಳಿಕೆ ಪ್ರಕಟಿಸಿದೆ.

ಆಗಸ್ಟ್‌ 7ರಂದು ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ 18 ವರ್ಷ ಮೇಲ್ಪಟ್ಟವರಿಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಮಾಡೆರ್ನಾ ನಂತರ ದೇಶದಲ್ಲಿ ತುರ್ತು ಬಳಕೆಯ ಅನುಮೋದನೆ ಪಡೆದ ಎರಡನೇ ವಿದೇಶಿ ನಿರ್ಮಿತ ಲಸಿಕೆ ಇದಾಗಿದೆ.

ಈಗ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಪ್ರಯೋಗಕ್ಕೆ ಅನುಮತಿ ದೊರೆತರೆ, ಭಾರತದಲ್ಲಿ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ ಪಡೆದ ಮೂರನೇ ಲಸಿಕೆ ಇದಾಗಲಿದೆ. ಮಕ್ಕಳ ಮೇಲೆ ಸದ್ಯ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಝೈಡಸ್ ಕ್ಯಾಡಿಲಾದ ZyCov-D ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗವು 525 ಮಕ್ಕಳ ಮೇಲೆ ನಡೆಯುತ್ತಿದ್ದರೆ, ಝೈಡಸ್ ಕ್ಯಾಡಿಲಾ ಲಸಿಕೆಯ ಪ್ರಯೋಗವು 12-18ರ ವಯೋಮಾನದವರ ಮೇಲೆ ನಡೆಯುತ್ತಿದ್ದು, 1000 ಸ್ವಯಂಸೇವಕರನ್ನು ಒಳಗೊಂಡಿದೆ.

J&J Applies For Corona Vaccine Trial In India For 12 To 17 Age Group

ಜಾನ್ಸನ್ ಅಂಡ್ ಜಾನ್ಸನ್ ಈ ವರ್ಷದ ಆರಂಭದಲ್ಲಿ ಹೈದರಾಬಾದ್ ಮೂಲದ ಬಯಲಾಜಿಕಲ್ ಇ ಜೊತೆ ಕ್ಲಿನಿಕಲ್ ಪ್ರಯೋಗ ಹಾಗೂ ಲಸಿಕಾ ಉತ್ಪಾದನೆ ಸಂಬಂಧ ಒಪ್ಪಂದ ಮಾಡಿಕೊಂಡು ಪಾಲುದಾರನಾಗಿದೆ.

ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯು ಕೊರೊನಾದಿಂದಾಗುವ ಮಧ್ಯಮದಿಂದ ತೀವ್ರತರವಾದ ಅನಾರೋಗ್ಯ ತಡೆಗಟ್ಟುವಲ್ಲಿ 66% ಪರಿಣಾಮಕಾರಿಯಾಗಿದೆ ಮತ್ತು ತೀವ್ರತರವಾದ ಪ್ರಕರಣಗಳ ವಿರುದ್ಧ 85%ರಷ್ಟು ಪರಿಣಾಮಕಾರಿಯಾಗಿರುವುದಾಗಿ ಅಧ್ಯಯನಗಳು ತಿಳಿಸಿವೆ.

ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ಮಕ್ಕಳ ಮೇಲೆ ಪ್ರಭಾವ ತೋರುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತವೆ. ಈ ಅವಧಿಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಆದರೆ ಈ ಸಾಧ್ಯತೆಯನ್ನು ಹಲವು ತಜ್ಞರು ತಳ್ಳಿಹಾಕಿದ್ದಾರೆ. ಇದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಪ್ರಯೋಗಗಳನ್ನು ಚುರುಕುಗೊಳಿಸಲಾಗಿದೆ.

Janssen ಎಂಬ ಲಸಿಕೆಯನ್ನು ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿದೆ. ಈ ವರ್ಷಾಂತ್ಯದ ವೇಳೆಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಏಕಡೋಸ್ ಕೊರೊನಾ ಲಸಿಕೆ ಭಾರತಕ್ಕೆ ಪೂರೈಕೆಯಾಗುವ ನಿರೀಕ್ಷೆಯಿದೆ. ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಅನುಮತಿ ನೀಡುವುದರೊಂದಿಗೆ ಭಾರತದಲ್ಲಿ ಐದು ಕೊರೊನಾ ಲಸಿಕೆಗಳ ಬಳಕೆಗೆ ಅನುಮೋದನೆ ಸಿಕ್ಕಂತಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಪ್ರಕಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+