ಸಂಸ್ಥಾಪಕರ ಬಗ್ಗೆ ಗಾಳಿ ಸುದ್ದಿ, ಇನ್ಫೋಸಿಸ್ ಷೇರು ಮೌಲ್ಯದಲ್ಲಿ ಭಾರೀ ಕುಸಿತ
ಮುಂಬೈ, ಜೂನ್ 9: ದೈತ್ಯ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ನ ಸಂಸ್ಥಾಪಕರೆಲ್ಲ ತಮ್ಮ ತಮ್ಮ ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂಬ ಗಾಳಿ ಸುದ್ದಿಯ ಬೆನ್ನಿಗೆ ಕಂಪೆನಿಯ ಶೇರುಗಳ ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ.
ಶುಕ್ರವಾರ ಮುಂಬೈ ಶೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಶೇರುಗಳ ಮೌಲ್ಯ ಶೇಕಡಾ 3.5 ರಷ್ಟು ಕುಸಿದಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಕಂಪೆನಿ ಸ್ಪಷ್ಟಪಡಿಸಿದ ನಂತರ ಸ್ವಲ್ಪ ಮಟ್ಟಿಗೆ ಏರಿಕೆ ಕಂಡು ದಿನದಂತ್ಯಕ್ಕೆ ಶೇಕಡಾ 0.82 ಏರಿಕೆ ಇಳಿಕೆ ಕಂಡಿದೆ. ಒಟ್ಟಾರೆ ಶೇರು ಮೌಲ್ಯ ದಿನದಂತ್ಯಕ್ಕೆ ರೂ. 948.65 ದಾಖಲಾಗಿದೆ.
[ಇನ್ಫೋಸಿಸ್ ಸಂಸ್ಥಾಪಕರು ಶೇರು ಮಾರಾಟ ಮಾಡುತ್ತಿಲ್ಲ, ಕಂಪನಿಯಿಂದ ಸ್ಪಷ್ಟನೆ]

ಸುಮಾರು 28,000 ಕೋಟಿ ಮೌಲ್ಯದ, ಶೇಕಡ 12.75ರಷ್ಟು ಷೇರುಗಳನ್ನು ಕಂಪೆನಿಯ ಸಂಸ್ಥಾಪಕರು ಮಾರಾಟ ಮಾಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ದಿನದ ಆರಂಭದಲ್ಲಿ ಶೇರುಗಳ ಮೌಲ್ಯ ಭಾರಿ ಕುಸಿತ ಕಂಡಿತ್ತು. ನಂತರ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ ಕಂಪೆನಿ ಸ್ಪಷ್ಟನೆ ನೀಡಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ಶೇರು ಮೌಲ್ಯದಲ್ಲಿ ಮತ್ತೆ ಏರಿಕೆಯಾಗಿತ್ತು.












Click it and Unblock the Notifications