Breaking News: ಉಪ್ರಹಗಳನ್ನು ಹೊತ್ತೊಯ್ದ ಪಿಎಸ್‌ಎಲ್‌ವಿ ರಾಕೆಟ್ 4ನೇ ಹಂತದಲ್ಲಿ ನಾಪತ್ತೆ, ಉಡಾವಣೆ ವಿಫಲ
ISRO: ಶ್ರೀಹರಿಕೋಟಾದಿಂದ ಇಂದು (ಜನವರಿ 12) ಅದ್ಭುತ ಉಡಾವಣೆಯೊಂದಿಗೆ ಹೊರಟಿದ್ದ ಇಸ್ರೋನ ಪಿಎಸ್‌ಎಲ್‌ವಿ-ಸಿ62 ಮಿಷನ್ ವಿಫಲವಾಗಿದ್ದು, ಭಾರತದ ಬಾಹ್ಯಾಕಾಶ ಕನಸುಗಳಿಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಈ ಮಿಷನ್‌ನಲ್ಲಿ ಹೊತ್ತೊಯ್ಯಲಾಗಿದ್ದ ಎಲ್ಲಾ 16 ಉಪಗ್ರಹಗಳು ನಾಪತ್ತೆಯಾಗಿವೆ. ಇಸ್ರೋ ಅಧ್ಯಕ್ಷ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
260 ಟನ್ ತೂಕದ ಪಿಎಸ್‌ಎಲ್‌ವಿ-ಡಿಎಲ್ ರೂಪಾಂತರವು ಬೆಳಗ್ಗೆ 10:17ಕ್ಕೆ (ಭಾರತೀಯ ಕಾಲಮಾನ) ಗಗನಕ್ಕೆ ಹಾರಿದ್ದು, ಮೊದಲ ಎರಡು ಹಂತಗಳ ಕಾರ್ಯಾಚರಣೆ ಸಮರ್ಪಕವಾಗಿ ನೆರವೇರಿತು. ಈ ಅದ್ಭುತ ಕ್ಷಣ ದೇಶದಾದ್ಯಂತ ವೀಕ್ಷಕರನ್ನು ಗಮನ ಮಂತ್ರಮುಗ್ಧಗೊಳಿಸಿತು. ಆದಾಗ್ಯೂ, ಮೂರನೇ ಹಂತದಲ್ಲಿ ಇದರ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದರೆ, ನಾಲ್ಕನೇ ಹಂತದಲ್ಲಿ ಎಲ್ಲಾ 16 ಉಪಗ್ರಹಗಳು ನಾಪತ್ತೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಕಳೆದ ವರ್ಷದ PSLV-C61 ಕಕ್ಷೆಯ ಅಳವಡಿಕೆಯ ವೈಫಲ್ಯವನ್ನು ಮರುಕಳಿಸಿತು.

ಇಸ್ರೋ ಅಧ್ಯಕ್ಷ ಹೇಳಿದ್ದೇನು?: "ಮೂರನೇ ಹಂತದ ಅಂತ್ಯದಲ್ಲಿ ರಾಕೆಟ್‌ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ, ಅದರ ಬಳಿಕ ಹಾರಾಟದ ಮಾರ್ಗದಲ್ಲಿ ಅಡಚಣೆ ಕಂಡುಬಂದಿತು. ನಾವು ಈಗ ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಯಯನ್ನು ಶೀಘ್ರದಲ್ಲೇ ತಿಳಿಸುತ್ತೇವೆ," ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ದೃಢಪಡಿಸಿದರು.
The PSLV-C62 mission encountered an anomaly during end of the PS3 stage. A detailed analysis has been initiated.
— ISRO (@isro) January 12, 2026












Click it and Unblock the Notifications