Aditya-L1: ಚಂದ್ರನ ಬಳಿಕ ಸೂರ್ಯನಿಗೆ ಟಾರ್ಚ್: ಭಾರತವೇ ಬೆಸ್ಟ್!
ಭಾರತ 'ಚಂದ್ರಯಾನ-3' ಯೋಜನೆ ಮೂಲಕ ತನ್ನ ಶಕ್ತಿ ಏನೆಂದು ಜಗತ್ತಿಗೆ ತೋರಿಸಿದೆ. ಹಾಗಂತಾ ಒಂದು ಯೋಜನೆ ಯಶಸ್ವಿಯಾದ ತಕ್ಷಣ ಸುಮ್ಮನೆ ಕೂರಲು ಆಗುತ್ತಾ? ಇಲ್ಲ, ಇಲ್ಲ. ಹೀಗಾಗಿಯೇ ಭಾರತ ಚಂದ್ರನ ಬಳಿಕ ಸೂರ್ಯನ ಟಾರ್ಗೆಟ್ ಮಾಡಿದ್ದು, ಚಂದ್ರನ ಬಳಿಕ ಸೂರ್ಯನಿಗೆ ಟಾರ್ಚ್ ಬಿಡಲು ಇಸ್ರೋ ಸಜ್ಜಾಗಿದೆ. ಇಸ್ರೋ ಮಹತ್ವದ ಯೋಜನೆ ಬಗ್ಗೆ ಇಂಚಿಂಚು ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.
ಸೂರ್ಯ.. ಭೂಮಿಯ ಮೇಲೆ ಬದುಕಿಗೂ ಆಧಾರ, ಜೀವಿಗಳ ಮೂಲ, ಸೌರಮಂಡಲದ ನಾಯಕ. ಇಂತಹ ಸೂರ್ಯನನ್ನು ಬಿಟ್ಟರೆ ನಾವು, ನೀವು ಯಾರೂ ಉಳಿಯಲ್ಲ. ಹಾಗೇ ಭೂಮಿ ಮತ್ತು ಇತರ ಗ್ರಹಗಳನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಜಗತ್ತಿನ ಪ್ರತಿಯೊಂದು ದೇಶವು ಕನಸು ಕಾಣುತ್ತೆ. ಆದರೆ ಏನು ಮಾಡೋದು, ಸೂರ್ಯನ ತಾಪಮಾನ ನಮ್ಮನ್ನು ಸುಟ್ಟುಬಿಡುತ್ತೆ. ಹೀಗಾಗಿ ಸೂರ್ಯನ ಅಧ್ಯಯನಕ್ಕೆ ಹೋದ ಬಹುತೇಕ ನೌಕೆಗಳು ಸುಟ್ಟು ಬೂದಿಯಾಗಿವೆ. ಆದರೆ ಭಾರತ ಮತ್ತೊಂದು ಸವಾಲಿಗೆ ಸಜ್ಜಾಗಿದ್ದು ಚಂದ್ರನ ದಕ್ಷಿಣ ಧ್ರುವದ ಬಳಿಕ ಇನ್ನೊಂದು ದೊಡ್ಡ ಗುರಿ ಮುಟ್ಟಲು ಹೊರಟಿದೆ.

'ಇಸ್ರೋ' ನೌಕೆ ಲಾಂಚ್ ಯಾವಾಗ?
ಹೌದು.. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದ್ರೆ ನಮ್ಮ 'ಇಸ್ರೋ' ಹೊಸ ಮಹತ್ವದ ಯೋಜನೆಗೆ ಸಿದ್ಧತೆ ಆರಂಭಿಸಿದೆ. ಸೌರ ಮಿಷನ್ ಆದಿತ್ಯ-ಎಲ್ 1 ಉಡಾವಣೆಗಾಗಿ ಸನ್ನದ್ಧವಾಗಿದೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 11:50ಕ್ಕೆ ಆದಿತ್ಯ-ಎಲ್ 1 ಲಾಂಚ್ ಆಗಲಿದೆ. ಹಾಗೇ ಆದಿತ್ಯ ಎಲ್ 1 ಮಿಷನ್ ಮೂಲಕ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು ಇಸ್ರೋ ಸಂಸ್ಥೆಯ ಗುರಿ. ಸೂರ್ಯನ ಮೇಲಿನ ವಾತಾವರಣ ಅಂದರೆ ಕ್ರೋಮೋಸ್ಫಿಯರ್ & ಕರೋನಾ ಪ್ರದೇಶದ ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ. ನಮಗೆಲ್ಲಾ ತಿಳಿದಂತೆ, ಸೂರ್ಯನ ಕರೋನಾ ಭಾಗ ಸಾಕಷ್ಟು ವಿಸ್ಮಯಗಳನ್ನ ಹೊಂದಿದೆ. ಹೀಗಾಗಿ ಕರೋನಾದ ಬಗ್ಗೆ ಇಂಚಿಂಚು ಮಾಹಿತಿ ತಿಳಿಸಲು ಇಸ್ರೋ ಮುನ್ನುಗ್ಗಲಿದೆ.
🚀PSLV-C57/🛰️Aditya-L1 Mission:
— ISRO (@isro) August 28, 2023
The launch of Aditya-L1,
the first space-based Indian observatory to study the Sun ☀️, is scheduled for
🗓️September 2, 2023, at
🕛11:50 Hrs. IST from Sriharikota.
Citizens are invited to witness the launch from the Launch View Gallery at… pic.twitter.com/bjhM5mZNrx
ಸೂರ್ಯನನ್ನು ಮುಟ್ಟಲು ಎಷ್ಟು ದಿನ?
ಭಾರತ ತನ್ನ ಚಂದ್ರಯಾನ ಯೋಜನೆಗೆ ನೌಕೆ ಹಾರಿಸಿ, ಲ್ಯಾಂಡರ್ ಇಳಿಸಲು ಸುಮಾರು 1 ತಿಂಗಳು & 11 ದಿನದ ಸಮಯ ತೆಗೆದುಕೊಂಡಿತ್ತು. ಅಂದರೆ ಹತ್ತಿರ ಹತ್ತಿರ 42 ದಿನದ ಸಮಯದಲ್ಲಿ ಚಂದ್ರನ ಅಂಗಳ ತಲುಪಿತ್ತು ಭಾರತದ ನೌಕೆ. ಈಗ ಸೂರ್ಯನ ಮುಟ್ಟಲು ಭಾರತ ಕೇವಲ 120 ದಿನಗಳನ್ನು ತೆಗೆದುಕೊಳ್ಳಲಿದೆ. ಹಾಗೇ ಸುಮಾರು 1.5 ಮಿಲಿಯನ್ ಕಿಲೋಮೀಟರ್ ಅಂದ್ರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 (Aditya-L1)ಗೆ ಸಿಗಲಿದೆ.

ಇಸ್ರೋ ನೌಕೆಗೆ ಕಾದಿದೆ 5 ಸವಾಲು!
ಸೂರ್ಯ ಹಾಗೂ ಭೂಮಿಯ ಗುರುತ್ವಾಕರ್ಷಣೆ ಬಲ ಒಂದೇ ಪ್ರಮಾಣದ ಆಕರ್ಷಣೆ ಮತ್ತು ವಿಕರ್ಷಣೆ ಇರುವ ಸ್ಥಳ ಒಂದಿದೆ. ಬಾಹ್ಯಾಕಾಶದಲ್ಲಿ ಈ ಹಂತ ದಾಟುವುದೆ ದೊಡ್ಡದಾದ ಸವಾಲು. ಇದನ್ನ ವೈಜ್ಞಾನಿಕ ಭಾಷೆಯಲ್ಲಿ ಲಾಗ್ರೇಂಜ್ ಪಾಯಿಂಟ್ ಎನ್ನಲಾಗುತ್ತದೆ. ಈ ರೀತಿಯ ಒಟ್ಟು 5 ಸ್ಥಳಗಳು ಇಸ್ರೋದ ಸೂರ್ಯನ ನೌಕೆಗೆ ಎದುರಾಗಲಿವೆ. ಈ ಹಂತದ ಮೂಲಕವೇ ಆದಿತ್ಯ-ಎಲ್ 1 (Aditya-L1) ಸೂರ್ಯನ ಬಳಿಗೆ ಹೋಗಬೇಕು. ಹೀಗಾಗಿ ಒಟ್ಟು 5 ಸವಾಲುಗಳು ಇಸ್ರೋ ನೌಕೆಗೆ ಎದುರಾಗಲಿದೆ.
ಒಟ್ನಲ್ಲಿ ಆದಿತ್ಯ ಎಲ್ 1 ಯೋಜನೆ ಮೂಲಕ ನಮ್ಮ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು ಇಸ್ರೋದ ಉದ್ದೇಶವಾಗಿದೆ. ಕ್ರೋಮೋಸ್ಪಿರಿಕ್ & ಕರೋನಲ್ ಹೀಟಿಂಗ್, ಸೌರ ಜ್ವಾಲೆಗಳ ಅಧ್ಯಯನ ಮಾಡುವುದು ಇದ್ರಿಂದ ಸಾಧ್ಯ. ಈ ಯೋಜನೆಯ ಯಶಸ್ವಿ ಪಯಣ ಮುಂದುವರಿಸಿದರೆ ಭಾರತ ಮತ್ತೊಂದು ಇತಿಹಾಸ ಬರೆಯಲಿದೆ. ಏಕೆಂದರೆ ಸೂರ್ಯನಿಗೆ ನೌಕೆ ಹಾರಿಸಿದ ಬೆರಳೆಣಿಕೆ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶ ಲೋಕವನ್ನ ಆಳುವುದು ಗ್ಯಾರಂಟಿ.












Click it and Unblock the Notifications