ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಇಸ್ರೋದಿಂದ ಮಹತ್ವದ 'ಬದಲಿ' ಉಪಗ್ರಹ ಉಡಾವಣೆ

By Sachhidananda Acharya
|
Google Oneindia Kannada News

ಬೆಂಗಳೂರು, ಆಗಸ್ಟ್ 30: ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್‌) ಸರಣಿಯ 8ನೇ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಅಂದರೆ ಗುರುವಾರ ಉಡಾವಣೆ ಮಾಡಲಿದೆ.

ಇಸ್ರೋದಿಂದ ಈ ಮಾಸಾಂತ್ಯಕ್ಕೆ ಮತ್ತೊಂದು ಮಹತ್ವದ ಉಪಗ್ರಹ ಉಡಾವಣೆಇಸ್ರೋದಿಂದ ಈ ಮಾಸಾಂತ್ಯಕ್ಕೆ ಮತ್ತೊಂದು ಮಹತ್ವದ ಉಪಗ್ರಹ ಉಡಾವಣೆ

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಗುರುವಾರ ಸಂಜೆ 7ಕ್ಕೆ ಉಪಗ್ರಹದ ಉಡಾವಣೆ ನಡೆಯಲಿದೆ.

ಎಕ್ಸ್ ಎಲ್ ಸರಣಿಯ 'ಪಿಎಸ್‌ಎಲ್‌ವಿ-ಸಿ39 'ರಾಕೆಟ್‌ ಮೂಲಕ 1,425 ಕೆಜಿ ತೂಕದ 'ಐಆರ್‌ಎನ್‌ಎಸ್‌ಎಸ್‌- 1ಎಚ್‌' ಉಪಗ್ರಹದ ಉಡಾವಣೆಯನ್ನು ಇಸ್ರೋ ನಡೆಸಲಿದೆ.

 ಬದಲಿ ಉಪಗ್ರಹ

ಬದಲಿ ಉಪಗ್ರಹ

'ಐಆರ್‌ಎನ್‌ಎಸ್‌ಎಸ್‌- 1ಎಚ್‌' ಉಪಗ್ರಹವನ್ನು 'ಐಆರ್‌ಎನ್‌ಎಸ್‌ಎಸ್‌-1ಎ' ಉಪಗ್ರಹದ ಬದಲಿಗೆ ಉಡಾವಣೆ ಮಾಡಲಾಗುತ್ತಿದೆ. ಈ ಹಿಂದೆ ಉಡಾವಣೆಯಾಗಿದ್ದ 'ಐಆರ್‌ಎನ್‌ಎಸ್‌ಎಸ್‌-1ಎ' ಉಪಗ್ರಹದ 'ಅಟಾಮಿಕ್‌ ಕ್ಲಾಕ್‌' ವಿಫಲಗೊಂಡಿತ್ತು. ಇದಕ್ಕೀಗ ಬದಲಿಯಾಗಿ 8ನೇ ಉಪಗ್ರಹ ಉಡಾವಣೆಗೊಳ್ಳಲಿದೆ.

 ಅಮೆರಿಕಾದ ಜಿಪಿಎಸ್ ಗೆ ಸಡ್ಡು

ಅಮೆರಿಕಾದ ಜಿಪಿಎಸ್ ಗೆ ಸಡ್ಡು

ಅಮೆರಿಕಾ ಮೂಲದ ಜಿಪಿಎಸ್‌ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ರೀತಿಯಲ್ಲಿಯೇ ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ 'ನಾವಿಕ್'ನ್ನು ಜಾರಿಗೆ ತರುವ ಪ್ರಯತ್ನವನ್ನು ಬಹಳ ಹಿಂದೆಯೇ ಇಸ್ರೋ ಆರಂಭಿಸಿತ್ತು.

ಇದಕ್ಕೆ ಒಟ್ಟು 9 ಉಪಗ್ರಹಗಳ ಅಗತ್ಯವಿತ್ತು. ಈಗಾಗಲೇ 7 ಉಪಗ್ರಹಗಳನ್ನು ಕಕ್ಷೆಗೆ ರವಾನಿಸಲಾಗಿತ್ತು. ಆದರೆ ಇದರಲ್ಲಿ ಒಂದು ಉಪಗ್ರಹದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬದಲಿಯಾಗಿ 8ನೇ ಉಪಗ್ರಹವನ್ನು ರವಾನಿಸಬೇಕಾಗಿ ಬಂದಿದೆ.

 ಇನ್ನೂ ಎರಡು ಉಡಾವಣೆ ಬಾಕಿ

ಇನ್ನೂ ಎರಡು ಉಡಾವಣೆ ಬಾಕಿ

ಸದ್ಯಕ್ಕೆ ನಾಳೆಯ ಉಪಗ್ರಹವೂ ಸೇರಿ ಒಟ್ಟು 7 ಉಪಗ್ರಹಗಳು ಉಡಾವಣೆಯಾಗಲಿದ್ದು, ಈ ಯೋಜನೆ ಸಂಪೂರ್ಣವಾಗಲು ಇನ್ನೂ ಎರಡು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಬೇಕಿದೆ. ನಂತರ ಈ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.

ಸ್ವಂತ ಜಿಪಿಎಸ್ ಹೊಂದುವ ಈ ಯೋಜನೆ ರೂಪಾಯಿ 1,420 ಕೋಟಿ ವೆಚ್ಚದ ಯೋಜನೆಯಾಗಿದ್ದು, 2018ರ ಏಪ್ರಿಲ್ ನಲ್ಲಿ ಮುಂದಿನ ಉಪಗ್ರಹದ ಉಡಾವಣೆ ನಡೆಯಲಿದೆ.

 ಉಪಯೋಗ

ಉಪಯೋಗ

ಸಾರಿಗೆ ಸಂಪರ್ಕ ನಿಯಂತ್ರಣ, ರೈಲುಗಳ ಸಂಚಾರ ನಿಯಂತ್ರಣ, ಮೀನುಗಾರರಿಗೆ ಗಡಿ ಭಾಗ ದಾಟದಂತೆ ಎಚ್ಚರಿಕೆ ರವಾನೆ, ಸಮುದ್ರಯಾನ, ವಾಯುಯಾನ ಮತ್ತಿತರ ಕಾರ್ಯಗಳಿಗೆ ಈ ಜಿಪಿಎಸ್ ನೆರವಾಗಲಿದೆ.

English summary
Indian Space Research Organisation (ISRO) will launch its navigation satellite IRNSS-1H on August 31st to augment the existing seven satellites of NavIC constellation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X