ಇತಿಹಾಸ ಸೃಷ್ಟಿಸಲು ಸಜ್ಜಾದ ಇಸ್ರೋ, ಜಾಗತಿಕ ಬಾಹ್ಯಾಕಾಶ ಲೋಕದಲ್ಲಿ ಹೊಸ ಸಂಚಲನ!
ಭಾರತೀಯರ ಹೆಮ್ಮೆ 'ಇಸ್ರೋ' ಸಂಸ್ಥೆ ಈಗಾಗಲೇ ನೂರಾರು ಸಾಧನೆ ಮಾಡಿ, ಅಮೆರಿಕದ 'ನಾಸಾ'ಗೆ ಕೂಡ ಪೈಪೋಟಿ ನೀಡುವಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. 1969 ರಲ್ಲಿ ಸ್ಥಾಪನೆ ಆಗಿದ್ದ 'ಇಸ್ರೋ' ಸಂಸ್ಥೆ ಬಾಹ್ಯಾಕಾಶ ಲೋಕದಲ್ಲಿ ಘಟಾನುಘಟಿ ದೇಶಗಳು ಕೂಡ ಮಾಡಲು ಆಗದ ಸಾಧನೆ ಮಾಡಿದೆ. ಇತ್ತೀಚೆಗೆ ಚಂದ್ರನ ಮೇಲೆ ರೋವರ್ ಇಳಿಸಿ ಪ್ರಪಂಚದ ಗಮನ ಸೆಳೆದಿದ್ದ ಇಸ್ರೋ ಇದೀಗ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ.
' ಇಸ್ರೋ' ಇದೀಗ ಅಮೆರಿಕ, ರಷ್ಯಾ & ಚೀನಾ ಮಾಡಿರುವ ಸಾಧನೆ ಸಾಲಿಗೆ ಸೇರಲು ಸಕಲ ಸಿದ್ಧತೆ ನಡೆಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಹತ್ವದ ಉಡಾವಣೆಗೆ ಸಜ್ಜಾಗಿದೆ. ಹೀಗೆ 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಎಂಬ ಮಹತ್ವದ ಸಾಧನೆಗೆ ಇಸ್ರೋ ಸಜ್ಜಾಗಿದೆ. ಈ ಸಾಧನೆಯ ಪಟ್ಟಿಯಲ್ಲಿ ಅಮೆರಿಕ, ರಷ್ಯಾ & ಚೀನಾ ಮಾತ್ರ ಇದ್ದು, ಇದೀಗ ಭಾರತದ ಹೆಮ್ಮೆ ಇಸ್ರೋ ಕೂಡ 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಮಾಡಲು ಸಜ್ಜಾಗಿದೆ.

ಡಾಕಿಂಗ್ ಮತ್ತು ಅನ್‌ಡಾಕಿಂಗ್ ಎಂದರೇನು?
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ರಾತ್ರಿ ಇಸ್ರೋ ಮಹತ್ವದ ಉಡಾವಣೆ ಮಾಡಲಿದೆ. 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಯೋಜನೆ ಭಾಗವಾಗಿ ಒಟ್ಟು 2 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು. ಈ ಮೂಲಕ ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಕಸರತ್ತು ನಡೆಯಲಿದೆ. ಇಸ್ರೋ ಸಂಸ್ಥೆಯ ಈ ಸಾಧನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ಜಗತ್ತು ಇದೀಗ ಭಾರತದ ಇಸ್ರೋ ಕಡೆಗೆ ಗಮನ ಇಟ್ಟು ಕೂತಿದೆ.
ಬಾಹ್ಯಾಕಾಶ ನೌಕೆ ಜೋಡಿಸುವ ಕೆಲಸ!
2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನ ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗವೇ ಆಗಿದೆ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ, ರಷ್ಯಾ, ಚೀನಾ ಮಾತ್ರ ಮುನ್ನೆಲೆಯಲ್ಲಿ ಇದ್ದವು. ಆದರೆ ಇದೀಗ ಭಾರತ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದು, 'ಇಸ್ರೋ' ಸಂಸ್ಥೆಯಿಂದ ನಡೆಯುತ್ತಿರುವ ಈ ಪ್ರಯೋಗ ಭಾರತೀಯರಿಗೆ ಹೆಮ್ಮೆ ತರಿಸುತ್ತಿದೆ.
ಬಾಹ್ಯಾಕಾಶ ಪ್ರಿಯರಿಗೆ ಭರ್ಜರಿ ಸುದ್ದಿ!
ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ನಡೆಸಲು 'ಇಸ್ರೋ' ವಿಜ್ಞಾನಿಗಳು ಸಜ್ಜಾಗಿದ್ದಾರೆ. ಈ ಮೂಲಕ ಬಾಹ್ಯಾಕಾಶ ಅಂದ್ರೆ ಆಕಾಶದಲ್ಲಿ ಯಾವುದೇ ರೀತಿ ಮಾನವರ ಸಹಾಯ ಇಲ್ಲದೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಕೂಡಿಸುವುದು & ಬೇರೆ ಮಾಡುವ ಕೆಲಸವನ್ನು ಇಸ್ರೋ ಭೂಮಿ ಮೇಲಿಂದಲೇ ನಡೆಸಲಿದೆ. ಡಿಸೆಂಬರ್ 30ರ ರಾತ್ರಿ 10 ಗಂಟೆಗೆ 'ಇಸ್ರೋ' 2 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಉಪಗ್ರಹ ನಭಕ್ಕೆ ಅಂದ್ರೆ ಬಾಹ್ಯಾಕಾಶಕ್ಕೆ ಹಾರಲಿದೆ. ಇದಕ್ಕಾಗಿ ವಿಶೇಷ ತಂತ್ರಜ್ಞಾನ ಬಳಸಲು ಇಸ್ರೋ ಈಗ ಮುಂದಾಗಿದೆ.












Click it and Unblock the Notifications