ಮತ್ತೊಂದು ದಾಖಲೆ ಬರೆಯಲು ಸಜ್ಜಾದ ಇಸ್ರೋ

ಚೆನ್ನೈ, ಮೇ 14 : ದಕ್ಷಿಣ ಏಷ್ಯಾ ದೇಶಗಳ ಮೊದಲ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸುತ್ತಿದೆ.

ಕಳೆದ ಮೇ ತಿಂಗಳಿನಲ್ಲಿ GSAT-9 ಹೆಸರಿನ ಉಪಗ್ರಹವನ್ನು ಉಡಾವಣೆ ಮಾಡಿ ಐತಿಹಾಸಿಕ ಸಾಧನೆ ಮೆರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಇದೀಗ 640 ಟನ್ ಭಾರೀ ತೂಕದ GSLV Mark-III ಎಂಬ ರಾಕೆಟನ್ನು ತಯಾರಿಸುತ್ತಿದೆ.[ಐತಿಹಾಸಿಕ ದಿನ: ದಕ್ಷಿಣ ಏಷ್ಯಾ ರಾಷ್ಟ್ರಗಳ ಉಪಗ್ರಹ ಉಡಾಯಿಸಿದ ಇಸ್ರೋ]

ISRO's Heaviest Rocket, GSLV Mark-III, Set For Maiden Launch In June

GSLV Mark-III ರಾಕೆಟನ್ನು ಚೆನ್ನೈನ ಬಾಹ್ಯಾಕಾಶ ವಿಜ್ಞಾನಿಗಳ ಅಭಿವೃದ್ಧಿಪಡಿಸಿದ್ದು ಜೂನ್ ತಿಂಗಳಲ್ಲಿ ಉಡಾವಣೆ ಮಾಡಲು ಇಸ್ರೋ ತಯಾರಿ ನಡೆಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ. ಸಿವನ್ ಅವರು, "ನಮ್ಮ 12 ವರ್ಷಗಳ ಶ್ರಮ ಈ ಜೂನ್ ನಲ್ಲಿ ಫಲ ನೀಡಲಿದೆ. ಜೆಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಸಂವಹನ ಉಪಗ್ರಹ ಜಿಸ್ಯಾಟ್-19 ಕೊಂಡೊಯ್ಯಲಿದೆ.

ಈ ಮಿಷನ್ ಯಶಸ್ವಿಯಾಗುವುದೆಂಬ ನಂಬಿಕೆ ಇದೆ. ಈಗಾಗಲೇ ಎಲ್ಲಾ ಪರೀಕ್ಷೆಗಳು ಮುಗಿದಿವೆ. ಶ್ರೀಹರಿಕೋಟಾದಿಂದ ಜೂನ್ ಮೊದಲ ವಾರ ಉಡಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+