ಐತಿಹಾಸಿಕ ದಿನ: ದಕ್ಷಿಣ ಏಷ್ಯಾ ರಾಷ್ಟ್ರಗಳ ಉಪಗ್ರಹ ಉಡಾಯಿಸಿದ ಇಸ್ರೋ

ದಕ್ಷಿಣ ಏಷ್ಯಾ ದೇಶಗಳ ಮೊದಲ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಶ್ರೀಹರಿಕೋಟಾ, ಮೇ 5: ದಕ್ಷಿಣ ಏಷ್ಯಾ ದೇಶಗಳ ಮೊದಲ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮೆರೆದಿದೆ.

GSAT-9 ಹೆಸರಿನ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 4.57 ನಿಮಿಷಕ್ಕೆ ಉಡಾವಣೆ ಮಾಡಲಾಯಿತು.[ಭಾರತದ ಸಖತ್ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ ಪಾಕ್]

Successful launch of South Asian Satellite is a historic moment – Narendra Modi

ಪ್ರಧಾನಿ ಅಭಿನಂದನೆ

ಯಶಸ್ವೀ ಉಪಗ್ರಹ ಉಡಾವಣೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. "ದಕ್ಷಿಣ ಏಷ್ಯಾ ದೇಶಗಳ ಉಪಗ್ರಹ ಉಡಾವಣೆ ಒಂದು ಐತಿಹಾಸಿಕ ಕ್ಷಣ. ದಕ್ಷಿಣ ಏಷ್ಯಾ ದೇಶಗಳ ನಡುವೆ ಹೊಸ ಭ್ರಾತೃತ್ವ ಆರಂಭವಾಗಿದೆ," ಎಂದು ಅವರು ಬಣ್ಣಿಸಿದ್ದಾರೆ.

ಇನ್ನು ಉಡಾವಣೆ ನಂತರ ಸಂಭ್ರಮಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಭೂತಾನ್ ಪ್ರಧಾನ ಮಂತ್ರಿಗಳ ಜತೆ ಲೈವ್ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

ಇದರಲ್ಲಿ ಮಾತನಾಡಿದ ಪ್ರಧಾನಿ, "ನಾವೆಲ್ಲಾ ದಕ್ಷಿಣ ಏಷ್ಯಾದ ದೇಶಗಳು ಒಗ್ಗಟ್ಟಾಗಿದ್ದೇವೆ. ಶಾಂತಿ, ಸಹಬಾಳ್ವೆ, ಅಭಿವೃದ್ಧಿ ವಿಚಾರಗಳಲ್ಲಿ ನಾವು ಒಟ್ಟಾಗಿರಲಿದ್ದೇವೆ. ಉಪಗ್ರಹ ಉಡಾವಣೆ ದಕ್ಷಿಣ ಏಷ್ಯಾ ದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+