36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
ಬೆಂಗಳೂರು, ಮಾರ್ಚ್ 26; ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆನ್ ವೆಬ್ ಸಹಯೋಗದೊಂದಿಗೆ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಭಾನುವಾರ ದಾಖಲೆ ನಿರ್ಮಾಣ ಮಾಡಿದೆ. 36 ಉಪಗ್ರಹಗಳು 5805 ಟನ್ ತೂಕವನ್ನು ಹೊಂದಿದ್ದವು. ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ನಡೆದಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಗ್ಗೆ ಉಪಗ್ರಹಗಳ ಉಡಾವಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ಇಸ್ರೋ ಮತ್ತು ಕಡಿಮೆ ಭೂಮಿಯ ಕಕ್ಷೆಯ ಉಪಗ್ರಹ ಸಂವಹನ ಕಂಪನಿಯಾದ ಆನ್ ವೆಬ್ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ದಾಖಲೆ ಬರೆದವು.

ಈ ಜಂಟಿ ಉಡಾವಣೆಗಾಗಿ ಇಸ್ರೋ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಡಾವಣಾ ಶುಲ್ಕ ವಿಧಿಸಿದೆ. ಇದು ಇಸ್ರೋದ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾಗಿತ್ತು. 43.5 ಮೀಟರ್ ಎತ್ತರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ 2ನೇ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಚಂದ್ರಯಾನ-2 ಮಿಷನ್ ಸೇರಿದಂತೆ ಐದು ಯಶಸ್ವಿ ಹಾರಾಟಗಳನ್ನು ಪೂರ್ಣಗೊಳಿಸಿರುವ ಇಸ್ರೋದ ಅತ್ಯಂತ ಭಾರವಾದ ಉಡಾವಣಾ ವಾಹನ 36 ಉಪಗ್ರಹಗಳನ್ನು ಹೊತ್ತು ನಭಕ್ಕೆ ನೆಗೆದಿದೆ.

ಈ ಯೋಜನೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಎರಡನೇ ಮೀಸಲು ವಾಣಿಜ್ಯ ಉಪಗ್ರಹ ಮಿಷನ್ ಆಗಿದೆ. ಇದನ್ನು ಬ್ರಿಟಿಷ್ ಕಂಪನಿಯಾದ ಅದರ ಕ್ಲೈಂಟ್ ಎಂಎಸ್ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಎಂಎಸ್ ಆನ್‌ವೆಬ್)ಗಾಗಿ ನಡೆಸಲಾಗುತ್ತಿದೆ. ಇಸ್ರೋದ LVM-3 ಅತ್ಯಂತ ಭಾರವಾದ ಉಡಾವಣಾ ವಾಹನ GSLVMK-3ನ ಹೊಸ ಹೆಸರು, ಇದು ಅತ್ಯಂತ ಭಾರವಾದ ಉಪಗ್ರಹಗಳನ್ನು ಸ್ಥಿರ ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
#WATCH | Andhra Pradesh: The Indian Space Research Organisation (ISRO) launches India’s largest LVM3 rocket carrying 36 satellites from Sriharikota
— ANI (@ANI) March 26, 2023
(Source: ISRO) pic.twitter.com/jBC5bVvmTy
ಏನಿದು ಯೋಜನೆ; ಇಸ್ರೋ ಅತ್ಯಂತ ಭಾರವಾದ ಉಡಾವಣಾ ವಾಹನ ವೆಹಿಕಲ್ ಮಾರ್ಕ್-3 (ಎಲ್‌ವಿಎಂ3) ಬ್ರಿಟನ್ ಮೂಲದ ಒನ್ ವೆಬ್ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತು ಭಾನುವಾರ ಬೆಳಗ್ಗೆ ನಭಕ್ಕೆ ಹಾರಿತು. ಇಸ್ರೋ ವಾಣಿಜ್ಯ ಘಟಕ ಎನ್‌ಎಸ್‌ಐಎಲ್ ಬ್ರಿಟನ್ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್‌ವೆಬ್ ಗ್ರೂಪ್ ಕಂಪನಿ) ಸಂಸ್ಥೆಯೊಂದಿಗೆ ಒಪ್ಪಂದದಂತೆ ನಡೆಸಿದ 2ನೇ ಉಡಾವಣೆ ಕಾರ್ಯ ಇದಾಗಿದೆ.
ಶನಿವಾರ ಇಸ್ರೋ ಎಲ್‌ವಿಎಂ-3/ಒನ್‌ವೆಬ್ ಇಂಡಿಯಾ-2 ಮಿಷನ್ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ ಎಂದು ಹೇಳಿತ್ತು. ಒನ್‌ವೆಬ್ ಗ್ರೂಪ್ ಕಂಪನಿ ಒಟ್ಟು 72 ಉಪಗ್ರಹಗಳನ್ನು ಕೆಳಮಟ್ಟದ ಭೂಮಿ ಕಕ್ಷೆ (ಎಲ್‌ಇಒ) ಉಡಾವಣೆ ಮಾಡಲು ಇಸ್ರೋ ವಾಣಿಜ್ಯ ವಿಭಾಗದ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. 2022ರ ಅಕ್ಟೋಬರ್‌ನಲ್ಲಿ 36 ಉಪಗ್ರಹಗಳನ್ನು ಹಾರಿಸಲಾಗಿತ್ತು.
ಜಾಗತಿಕ ಸಂವಹನ ನೆಟ್‌ವರ್ಕ್ ಹೊಂದಿರುವ ಒನ್‌ವೆಬ್ ಸರ್ಕಾರ ಮತ್ತು ವ್ಯವಹಾರಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಭಾರ್ತಿ ಎಂಟಪ್ರೈಸಸ್ ಅನ್ನು ಪ್ರಮುಖ ಹೂಡಿಕೆದಾರರಾಗಿ ಕಂಪನಿಯು ಹೊಂದಿದೆ. 2022ರ ಅಕ್ಟೋಬರ್‌ನಲ್ಲಿ ಮೊದಲ ಸೆಟ್‌ನ 36 ಉಪಗ್ರಹಗಳನ್ನು ಹಾರಿಸಲಾಗಿತ್ತು. ಮಾರ್ಚ್ 26ರ ಭಾನುವಾರ ಈ ಯೋಜನೆಯ ಎರಡನೇ ಉಡಾವಣೆ ನಡೆದಿದೆ.
ಭಾನುವಾರ ನಡೆದ ಉಡಾವಣೆ ಈ ವರ್ಷದ 3ನೇ ಮತ್ತು ಒಟ್ಟಾರೆ 18ನೇ ಉಡಾವಣೆಯಾಗಿದೆ. ಫೆಬ್ರವರಿಯಲ್ಲಿ ಎಸ್‌ಎಸ್‌ಎಲ್‌ವಿ-ಡಿ2/ಇಒಎಸ್‌ಒ 7 ಮಿಷನ್‌ನ ಉಡಾವಣೆ ನಡೆದಿತ್ತು. ಇಂದು ನಡೆದ ಉಡಾವಣೆ 2023ರಲ್ಲಿ ಇಸ್ರೋ ಕೈಗೊಂಡ 2ನೇ ಉಡಾವಣೆ ಯೋಜನೆಯಾಗಿದೆ. 616 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ 2023ರ ಕೊನೆಯಲ್ಲಿ ಜಾಗತಿಕ ಸೇವೆಗಳನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಒನ್‌ವೆಬ್ ಹೇಳಿದೆ.
ಇಸ್ರೋ ಇಂದಿನ ಉಡಾವಣೆಯಲ್ಲಿ 5,805 ಕೆಜಿ ತೂಕದ 36 ಮೊದಲ ತಲೆಮಾರಿನ ಉಪಗ್ರಹಗಳನ್ನು 87.4 ಡಿಗ್ರಿ ಕೋನದಲ್ಲಿ 450 ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಿಸುತ್ತದೆ. ಫೆಬ್ರವರಿಯಲ್ಲಿ ಮೂರು ಸಣ್ಣ ಉಪಗ್ರಹಗಳನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತ್ತು.












Click it and Unblock the Notifications