Israel-Iran War: ನ್ಯೂಕ್ಲಿಯರ್ ಬಾಂಬ್ ಬಳಸುತ್ತಾ ಇರಾನ್? ಇಸ್ರೇಲ್ & ಅಮೆರಿಕದ ಚಿಂತೆ ಏನು?

ಇಸ್ರೇಲ್ ಸೇನೆ ಮಾರಣಾಂತಿಕ ದಾಳಿ ನಡೆಸುತ್ತಿದ್ದು, ಎಲ್ಲೆಲ್ಲೂ ಆತಂಕ ಮನೆಮಾಡಿದೆ. ಈ ಸಂಬಂಧ ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಮೀಟಿಂಗ್ ನಡೆಯುತ್ತಿದೆ. ವಿಶ್ವಸಂಸ್ಥೆ ಈ ವಿಚಾರದಲ್ಲಿ ಸಾಕಷ್ಟು ಅಲರ್ಟ್ ಆಗಿದ್ದು, ಯುದ್ಧ ನಡೆಯದಂತೆ ತಡೆಯಲು ಈಗ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆದರೂ ಇರಾನ್ ವಿರುದ್ಧ ಇದೀಗ ರೊಚ್ಚಿಗೆದ್ದಿರುವ ಇಸ್ರೇಲ್ ತನ್ನ ಮೇಲಿನ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾಗಿದೆ. ಇಂತಹ ಸಮಯದಲ್ಲೇ ಪರಮಾಣು ಅಂದ್ರೆ ನ್ಯೂಕ್ಲಿಯರ್ ಬಾಂಬ್ ಬಳಸುತ್ತಾ ಇರಾನ್? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಬನ್ನಿ.

ಜಗತ್ತಿನಲ್ಲಿ ಅತ್ಯಂತ ವಿನಾಶಕಾರಿ ಬಾಂಬ್ ಅಂತಾ ಇರುವುದು ನ್ಯೂಕ್ಲಿಯರ್ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಮಾತ್ರ. ಇವೆರಡೂ ತೋರಿಕೆಯಲ್ಲಿ ಒಂದೇ ರೀತಿಯ ಬಾಂಬ್‌ಗಳು ಅಂತಾ ಕಂಡರೂ, ನ್ಯೂಕ್ಲಿಯರ್ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ನಡುವೆ ದೊಡ್ಡ ವ್ಯತ್ಯಾಸ ಇದೆ. ನ್ಯೂಕ್ಲಿಯರ್ ಬಾಂಬ್ ಬಿದ್ದರೆ ನಾಶ, ಅದೇ ಹೈಡ್ರೋಜನ್ ಬಾಂಬ್ ಹಾಕಿ ದಾಳಿ ಮಾಡಿದರೆ ಸರ್ವನಾಶ. ಹೀಗೆ ಎರಡೂ ಬಾಂಬ್‌ಗಳ ಬಗ್ಗೆ ಭಾರಿ ದೊಡ್ಡ ಭಯ ಕೂಡ ಇದೆ. ಹೀಗಿದ್ದಾಗಲೇ ದಿಢೀರ್ ಇರಾನ್ ಬಗ್ಗೆ ನ್ಯೂಕ್ಲಿಯರ್ ಬಾಂಬ್ ದಾಳಿಯ ಭಯ ಕೂಡ ಹುಟ್ಟಿಕೊಂಡಿದೆ. ಹಾಗಾದ್ರೆ ಇರಾನ್ ಬಗ್ಗೆ ಪರಮಾಣು ಬಾಂಬ್ ಭಯ ಏಕೆ? ಮುಂದೆ ಓದಿ.

Israel-Iran Conflict Is Raised Concerns About Nuclear War

ಇರಾನ್ ಬಳಿ ಪರಮಾಣು ಬಾಂಬ್?

ಅಂದಹಾಗೆ ಮಧ್ಯಪ್ರಾಚ್ಯ ದೇಶಗಳ ಪೈಕಿ ಇರಾನ್ ಹತ್ತಿರ ಪರಮಾಣು ಬಾಂಬ್ ಇದೆ ಎಂಬ ಭಯ ಮೊದಲಿನಿಂದ ಕೂಡ ಇದೆ. ಯಾಕಂದ್ರೆ ತನ್ನ ಪರಮಾಣು ಸ್ಥಾವರಗಳ ಒಳಗೆ ಇದೇ ಇರಾನ್ ಸೇನೆ ಪರಮಾಣು ಬಾಂಬ್‌ಗಳ ಬಗ್ಗೆ ಸಂಶೋಧನೆ ನಡೆಸಿದೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ತನ್ನ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ವಿರುದ್ಧ ಇದೀಗ ಇರಾನ್‌ನ ಸೇನೆ ಪರಮಾಣು ಬಾಂಬ್ ಬಳಕೆ ಮಾಡಿ ದಾಳಿ ಮಾಡುತ್ತಾ? ಎಂಬ ಆತಂಕ ಈಗ ಆವರಿಸಿ ಚರ್ಚೆಗೆ ಕಾರಣವಾಗಿದೆ. ಆದರೂ ಪರಮಾಣು ಬಾಂಬ್ ಬಳಕೆ ಅಷ್ಟು ಸುಲಭದ ವಿಷಯ ಅಲ್ಲ ಎಂಬ ಧೈರ್ಯ ಕೂಡ ಇದೆ. ಹೀಗಾಗಿ ಇರಾನ್ & ಇಸ್ರೇಲ್ ಯುದ್ಧಕ್ಕೆ ಬ್ರೇಕ್ ಹಾಕಿ ಶಾಂತಿ ಸ್ಥಾಪನೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಇಸ್ರೇಲ್ ಸೇನೆಗೆ ಅಮೆರಿಕ ಅಭಯ!

ಅಮೆರಿಕದ ಬಹುತೇಕ ವಿನಾಶಕಾರಿ ಅಸ್ತ್ರಗಳು ಈಗಾಗಲೇ ಇಸ್ರೇಲ್ ಬಳಿ ಬೀಡು ಬಿಟ್ಟಿದ್ದು, ನ್ಯೂಕ್ಲಿಯರ್ ಅಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಇರುವ ಸಬ್‌ಮರೀನ್ ಕೂಡ ಓಡಾಡುತ್ತಿವೆ. ಹೀಗಿದ್ದಾಗ ಮತ್ತಷ್ಟು ಯುದ್ಧ ವಿಮಾನಗಳು & ಯುದ್ಧ ಹೆಲಿಕಾಪ್ಟರ್ ಸೇರಿದಂತೆ ಕ್ಷಿಪಣಿ ದಾಳಿ ಎದುರಿಸಬಲ್ಲ ಮಿಸೈಲ್ ಡಿಫೆಂಡರ್‌ಗಳನ್ನ ಕೂಡ ಅಮೆರಿಕ ಈಗ ಇಸ್ರೇಲ್ ನೆಲಕ್ಕೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಇರಾನ್, ಲೆಬನಾನ್ & ಸಿರಿಯಾದಲ್ಲಿ ಈ ಬಗ್ಗೆ ಭಯ ಶುರುವಾಗಿದೆ. ಒಟ್ನಲ್ಲಿ ಏನೇ ಆದರೂ ಆದಷ್ಟು ಬೇಗ ಈ ಯುದ್ಧ ನಿಂತು ಶಾಂತಿ ನೆಲೆಸಬೇಕಿದೆ ಎಂಬುದು ಭಾರತದ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+