ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳೇ ಐಸಿಸ್ ಗುರಿ!
ನವದೆಹಲಿ, ಅಕ್ಟೋಬರ್ 26: ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನುಮಾನದ ಮೇಲೆ ಬಂಧಿಸಲಾಗಿದ್ದ ಕೇರಳದ ಮೂಲದ ಮೂವರು ಶಂಕಿತ ಭಯೋತ್ಪಾದಕರು, "ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದರು" ಎಂಬ ಆಘಾತಕಾರಿ ಅಂಶ ಬಂಧಿತರ ವಿಚಾರಣೆಯ ನಂತರ ತಿಳಿದುಬಂದಿದೆ.
ಶಂಕಿತರನ್ನು ರಷೀದ್, ರಜಾಖ್, ಮಿಥಿಲಾಜ್ ಎಂದು ಗುರುತಿಸಲಅಗಿದ್ದು ಮೂವರೂ ಕೇರಳದ ಚಕ್ಕರಕ್ಕಳ್ ನವರಾಗಿದ್ದಾರೆ. ಸಿರಿಯಾದತ್ತ ತೆರಳುತ್ತಿದ್ದ ಇವರನ್ನು ಟರ್ಕಿಯಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇವರನ್ನು ಬಂಧಿಸಿದ ನಂತರವೂ, ಸಾಮಾಜಿಕ ಮಾಧ್ಯಮಗಳ ಮೂಲಕ ಬೇರೊಂದು ತಂದ ಇವರಿಗೆ ವಹಿಸಿದ್ದ ಕೆಲಸವನ್ನು ತಾನೇ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬುದೂ ಗುಪ್ತಚರ ಇಲಾಖೆಗೆ ತಿಳಿದುಬಂದಿದೆ.












Click it and Unblock the Notifications