ಜಿಯೋ IPO ಸಕ್ಸಸ್ ಬೆನ್ನಲ್ಲೇ ಮತ್ತೆ ವೈರಲ್ ಆಯ್ತು ಅಂಬಾನಿ ಫ್ಯಾಮಿಲಿಯ ಆ ಸೀಕ್ರೆಟ್: ಅಮ್ಮನ ಹಾದಿಯಲ್ಲೇ ಸಾಗಿದ ಇಶಾ
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಯ ಐಪಿಓ ಭಾರಿ ಯಶಸ್ಸು ಕಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ಇಂದಿನ ಬಹುತೇಕ ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ಮುಖೇಶ್ ಅಂಬಾನಿ ಅವರ ಮಕ್ಕಳಾದ ಅನಂತ, ಇಶಾ ಮತ್ತು ಆಕಾಶ್ ಅಂಬಾನಿ ಅವರ ಫೋಟೋಗಳೇ ರಾರಾಜಿಸುತ್ತಿವೆ.
ವ್ಯಾಪಾರ ಜಗತ್ತಿನಲ್ಲಿ ಅಂಬಾನಿ ಕುಟುಂಬದ ಈ ಹೊಸ ಸಾಧನೆ ಭಾರಿ ಚರ್ಚೆಯಾಗುತ್ತಿರುವಾಗಲೇ, ಸೋಶಿಯಲ್ ಮೀಡಿಯಾದಲ್ಲಿ ಇಶಾ ಅಂಬಾನಿ ಅವರ ವೈಯಕ್ತಿಕ ಜೀವನದ ಅಚ್ಚರಿಯ ವಿಚಾರವೊಂದು ಮತ್ತೆ ಮುನ್ನೆಲೆಗೆ ಬಂದು ವೈರಲ್ ಆಗುತ್ತಿದೆ. ಅದುವೇ ಅಂಬಾನಿ ಕುಟುಂಬದ ಐವಿಎಫ್ ಜರ್ನಿ.

ನೀತಾ ಅಂಬಾನಿ ಐವಿಎಫ್ ಜರ್ನಿ
ಇತ್ತೀಚೆಗೆ ಇಶಾ ಅಂಬಾನಿ ತಮ್ಮ ಕುಟುಂಬದ ಸೂಕ್ಷ್ಮ ಹಾಗೂ ಖಾಸಗಿ ವಿಚಾರವಾದ ಪಿತೃತ್ವದ ಹಾದಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಈ ಕಥೆ ಶುರುವಾಗುವುದು ಅವರ ತಾಯಿ ನೀತಾ ಅಂಬಾನಿ ಅವರಿಂದ. ಮುಖೇಶ್ ಹಾಗೂ ನೀತಾ ದಂಪತಿಗೆ ಮದುವೆಯಾದ ಆರಂಭದಲ್ಲಿ ಮಕ್ಕಳಾಗುವ ವಿಚಾರದಲ್ಲಿ ಸಾಕಷ್ಟು ತೊಂದರೆಗಳಿದ್ದವು. ನೀತಾ ಅಂಬಾನಿ ಅವರಿಗೆ ಕೇವಲ 23 ವರ್ಷ ವಯಸ್ಸಾಗಿದ್ದಾಗ, ಸಹಜವಾಗಿ ಗರ್ಭಧರಿಸುವುದು ಬಹುತೇಕ ಸಾಧ್ಯವಿಲ್ಲ ಎನ್ನುವ ಆಘಾತಕಾರಿ ಸುದ್ದಿಯನ್ನ ಡಾಕ್ಟರ್ ನೀಡಿದ್ದರು.
ಆದರೆ, ತಾಯಿಯಾಗಲೇಬೇಕು ಎಂಬ ಬಲವಾದ ಇಚ್ಛೆ ಹೊಂದಿದ್ದ ನೀತಾ, ವಿಜ್ಞಾನದ ಮೊರೆ ಹೋದರು. ಆ ಕಾಲದಲ್ಲಿ ಅಷ್ಟಾಗಿ ಜನಪ್ರಿಯವಾಗಿರದ, ಜನರಿಗೆ ಹೆಚ್ಚಾಗಿ ಪರಿಚಯವೇ ಇಲ್ಲದ ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಅಂದರೆ ಕೃತಕ ಗರ್ಭಧಾರಣೆ ಚಿಕಿತ್ಸೆಯನ್ನ ಪಡೆಯಲು ನಿರ್ಧರಿಸಿದರು.
ಈ ಯಶಸ್ವಿ ಐವಿಎಫ್ ಚಿಕಿತ್ಸೆಯ ಫಲವಾಗಿ ನೀತಾ ಅಂಬಾನಿ ಅವರು ಇಶಾ ಮತ್ತು ಆಕಾಶ್ ಅಂಬಾನಿ ಎಂಬ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆ ಮೂಲಕ ವೈದ್ಯರ ಮಾತುಗಳನ್ನು ಮೀರಿ ತಮ್ಮ ಮಾತೃತ್ವದ ಕನಸನ್ನ ನನಸು ಮಾಡಿಕೊಂಡರು.
ಇಶಾ ಅಂಬಾನಿ ಅವಳಿ ಮಕ್ಕಳು
ತಾಯಿ ನೀತಾ ಅಂಬಾನಿ ಅವರು ತೆಗೆದುಕೊಂಡಿರುವ ಈ ಕಠಿಣ ಹಾದಿ ಇಶಾ ಅವರಿಗೆ ಮೊದಲಿನಿಂದಲೂ ತಿಳಿದಿತ್ತು. ತಾನು ಮತ್ತು ತನ್ನ ಸಹೋದರ ಆಕಾಶ್ ಇಬ್ಬರೂ ಐವಿಎಫ್ ಮೂಲಕವೇ ಜನಿಸಿದ್ದು ಎಂಬ ಸತ್ಯ ಇಶಾ ಅವರಿಗೆ ಹೆಮ್ಮೆಯ ವಿಷಯವಾಗಿತ್ತು.
ವೈದ್ಯರು ಐವಿಎಫ್ ಅನಿವಾರ್ಯ ಎಂದಾಗ ನೀತಾ ಅಂಬಾನಿ ತೆಗೆದುಕೊಂಡ ದಿಟ್ಟ ನಿರ್ಧಾರ ಇಶಾ ಅವರಿಗೆ ಸ್ಫೂರ್ತಿಯಾಗಿತ್ತು. ದಶಕಗಳ ಬಳಿಕ, ಆನಂದ್ ಪಿರಾಮಲ್ ಅವರನ್ನ ವಿವಾಹವಾದ ಇಶಾ ಅಂಬಾನಿ ಕೂಡ ತಾಯಿಯ ಹಾದಿಯಲ್ಲೇ ಸಾಗಲು ನಿರ್ಧರಿಸಿದರು.
ಎಲ್ಲಿಯೂ ಈ ವಿಷಯವನ್ನಾ ಮುಚ್ಚಿಡದಾ ಇಶಾ ಕೂಡ ಐವಿಎಫ್ ತಂತ್ರಜ್ಞಾನದ ನೆರವಿನಿಂದಲೇ ತಮ್ಮ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣನಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗಳಿಬ್ಬರೂ ಒಂದೇ ರೀತಿಯ ವೈದ್ಯಕೀಯ ಚಿಕಿತ್ಸೆಯಿಂದ ಅವಳಿ ಮಕ್ಕಳನ್ನು ಪಡೆದಿರುವುದು ಅಂಬಾನಿ ಕುಟುಂಬದ ವಿಶೇಷ ಹಾಗೂ ಭಾವನಾತ್ಮಕ ಕಥೆಯಾಗಿದೆ.
ಇದೀಗ ಜಿಯೋ ಐಪಿಓ ಯಶಸ್ಸಿನ ಕಾರಣದಿಂದ ಇಶಾ ಅಂಬಾನಿ ಮತ್ತೆ ಸುದ್ದಿಯಲ್ಲಿರುವಾಗ, ಅವರ ಈ ಸ್ಟೋರಿ ಕೂಡ ಮುನ್ನೆಲೆಗೆ ಬಂದಿದೆ.
IVF is not something to hide, so I openly share that after mother Nita Ambani, Isha Ambani herself also became a mother through IVF.Isha Ambani revealed that she and her brother Akash Ambani were born through IVF.Because the doctors had told Nita Ambani at the age of 23 itself ...View more
— Bebo (@Itsbebo__) October 27, 2026
ಐವಿಎಫ್ ಬಗ್ಗೆ ಜಾಗೃತಿ ಮೂಡಿಸಿದ ಅಂಬಾನಿ ಫ್ಯಾಮಿಲಿ
ನಮ್ಮ ಸಮಾಜದಲ್ಲಿ ಇಂದಿಗೂ ಐವಿಎಫ್ ಮೂಲಕ ಮಕ್ಕಳನ್ನ ಪಡೆಯುವ ವಿಚಾರವನ್ನ ಮುಚ್ಚಿಡುವ ಅಭ್ಯಾಸ ಬಹಳಷ್ಟಿದೆ. ಇನ್ನೂ ಈ ಕೃತಕ ಗರ್ಭಧಾರಣೆ ಬಗ್ಗೆ ಹಲವರಲ್ಲಿ ಇಂದಿಗೂ ಮುಜುಗರವಿದೆ. ಆದರೆ, ಭಾರತದ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ಅಂಬಾನಿ ಕುಟುಂಬ ಈ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಂಡಿದೆ.
ಇಷ್ಟೊಂದು ದೊಡ್ಡ ಕುಟುಂಬದಿಂದ ಬಂದರೂ, ನೀತಾ ಅಂಬಾನಿ ನಂತರ ಇಶಾ ಅಂಬಾನಿ ಕೂಡ ತಾವು ಐವಿಎಫ್ ಮೂಲಕವೇ ತಾಯಿಯಾದೆವು ಎಂದು ಸಾರ್ವಜನಿಕವಾಗಿ, ಹೆಮ್ಮೆಯಿಂದ ಹೇಳಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.
ಸದ್ಯ ಎಕ್ಸ್ (X) ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸ್ಟೋರಿ ಸಖತ್ ಟ್ರೆಂಡ್ ಆಗುತ್ತಿದೆ. "ಮುಚ್ಚಿಟ್ಟರೆ ಐವಿಎಫ್ ಸತ್ಯ ಅಡಗುವುದಿಲ್ಲ, ಅಂಬಾನಿ ಕುಟುಂಬದಿಂದ ಕಲಿಯಿರಿ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮಕ್ಕಳಾಗದ ಎಷ್ಟೋ ದಂಪತಿಗಳಿಗೆ ಅಂಬಾನಿ ಕುಟುಂಬದ ಈ ಸ್ಟೋರಿ ದೊಡ್ಡ ಮಟ್ಟದ ಸ್ಫೂರ್ತಿ ನೀಡುತ್ತದೆ. ಆರ್ಥಿಕ ಯಶಸ್ಸಿನ ಜೊತೆಗೆ ಸಾಮಾಜಿಕ ಕಳಂಕಗಳನ್ನ ಹೊಡೆದೋಡಿಸುವಲ್ಲಿಯೂ ಅಂಬಾನಿ ಕುಟುಂಬ ಮಾದರಿಯಾಗಿದೆ.


Click it and Unblock the Notifications
