Get Updates
Get notified of breaking news, exclusive insights, and must-see stories!

ಬಿಸಿಯೂಟದ ಮಕ್ಕಳಿಗೆ ಆಧಾರ್ : ಸುಪ್ರೀಂ ಆದೇಶದ ಉಲ್ಲಂಘನೆಯೆ?

ನವದೆಹಲಿ, ಮಾರ್ಚ್ 06 : ಮಧ್ಯಾಹ್ನದ ಬಿಸಿಯೂಟ ಮಾಡುವ ಬಡ ಮಕ್ಕಳಿಕೆ ಜುಲೈ 1ರಿಂದ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯೆ?

ಹೌದು ಎಂದು ಹೇಳುತ್ತದೆ 2014ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಒಂದು ತೀರ್ಪು. ಅದರ ಪ್ರಕಾರ, ಆಧಾರ್ ಕಾರ್ಡ್ ಹೊಂದುವುದನ್ನು ಕಡ್ಡಾಯ ಮಾಡಬಾರದು ಮತ್ತು ಆಧಾರ್ ಕಾರ್ಡ್ ಗೆ ಯಾರೇ ಆಗಲಿ ಅರ್ಹರಿದ್ದರೂ, ಅವರ ಬಳಿ ಆಧಾರ್ ಇಲ್ಲದಿದ್ದರೆ ಅವರಿಗೆ ಯಾವುದೇ ರೀತಿಯ ಸೇವೆಯನ್ನು ನಿರಾಕರಿಸಬಾರದು ಎಂದಿತ್ತು ತೀರ್ಪು.

ಕಳೆದ ವಾರ, ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿರುವ ಆದೇಶದಂತೆ, ಜೂನ್ 30ರೊಳಗೆ ದೇಶದಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವ ಎಲ್ಲ ಮಕ್ಕಳು, ಅವರಿಗೆ ಆಹಾರ ತಯಾರಿಸುವ, ನೀಡುವ ಸಿಬ್ಬಂದಿ ವರ್ಗದವರು ಕೂಡ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.

Is making Aadhar mandatory for midday meal scheme violates of SC directive?

ಸುಪ್ರೀಂ ಕೋರ್ಟ್ ಹೊರಡಿಸಿರುವ ಮೇಲಿನ ತೀರ್ಪಲ್ಲಗೆ, 2015ರಲ್ಲಿ ಮತ್ತೊಂದು ಆದೇಶವನ್ನೂ ನೀಡಿತ್ತು. ಅದೇನೆಂದರೆ, ಆಧಾರ್ ಕಾರ್ಡ್ ಹೊಂದುವುದು ಐಚ್ಛಿಕವಾಗಿರಬೇಕು ಮತ್ತು ಮುಂದಿನ ಅಂತಿಮ ತೀರ್ಪು ಹೊರಡಿಸುವವರೆಗೆ ಕಡ್ಡಾಯ ಮಾಡಬಾರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+