ರೈಲಿನ ಕಳಪೆ ಆಹಾರಕ್ಕೆ ಪ್ರಯಾಣಿಕರ ಆಕ್ರೋಶ; ಉಳಿದಿದ್ದನ್ನು ಟ್ರ್ಯಾಕ್ ಮೇಲೆ ಎಸೆದ ಸಿಬ್ಬಂದಿ!

ಭಾರತೀಯ ರೈಲ್ವೆಯ ಆಹಾರ ಸೇವೆಯ ಗುಣಮಟ್ಟದ ಕುರಿತು ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ. ಇತ್ತೀಚೆಗೆ ರೈಲಿನ್ ಟಾಯ್ಲೆಟ್ ಮೇಲಿಟ್ಟ ಆಹಾರ ಪಾತ್ರೆ ಬಗ್ಗೆ ಸುದ್ದಿಯಾದ ಬೆನ್ನಲ್ಲೇ, ಇದೀಗ ಮತ್ತೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ರೈಲಲ್ಲಿ ಕೊಡುವ ಆಹಾರದ ಜೊತೆ, ರೈಲು ಟ್ರ್ಯಾಕ್ ಸ್ವಚ್ಛವಾಗಿಡಬೇಕಾದ ಸಿಬ್ಬಂದಿಯ ನಡೆ ಬಗ್ಗೆ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ (ಮೊದಲು ಟ್ವೀಟರ್) ವಿಡಿಯೋವೊಂದು ವೈರಲ್ ಆಗಿದ್ದು, ಪ್ರಯಾಣಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಹಾರ ವಾಸನೆ ಬರುತ್ತಿದೆ ಹಾಗೂ ಕಳೆಪೆ ಗುಣಮಟ್ಟದಿಂದ ಕೂಡಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಉಳಿದ ಆಹಾರ ಪೊಟ್ಟಣಗಳನ್ನು ಐಆರ್‌ಸಿಟಿಸಿ (IRCTC) ಸಿಬ್ಬಂದಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಪ್ರಯಾಣಿಕರ ಗಂಭೀರ ಆರೋಪ: ಮಾಹಿತಿ ಪ್ರಕಾರ, ರೈಲಿನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಆಹಾರದಿಂದ ದುರ್ವಾಸನೆ ಬರುತ್ತಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆಹಾರದ ಗುಣಮಟ್ಟ ಕಳಪೆಯಾಗಿದ್ದ ಕಾರಣ ಅನೇಕರು ಊಟ ಖರೀದಿಸಲು ನಿರಾಕರಿಸಿದ್ದದ್ದರಿಂದ, ತಯಾರಿಸಿದ ಆಹಾರ ಹಾಗೆಯೇ ಉಳಿದಿತ್ತು.

IRCTC Viral Video

ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲ್ವೆ ಸಿಬ್ಬಂದಿ ಮಾರಾಟವಾಗದೇ ಉಳಿದಿದ್ದ ಪೂರ್ಣ ಊಟದ ಪ್ಲೇಟ್‌ಗಳನ್ನು ಸಿಬ್ಬಂದಿ ರೈಲಿನಿಂದ ಹೊರಗೆ ಎಸೆಯುತ್ತಿದ್ದು, ಸ್ವಚ್ಛ ಭಾರತ ಆಂದೋಲದ ಭಾಗವಾಗಿರುವ ರೈಲ್ವೆ ಟ್ರ್ಯಾಕುಗಳ ಮೇಲೆ ಈ ರೀತಿ ಪ್ಲಾಸ್ಟಿಕ್‌ನಿಂದ ಮುಚ್ಚಲ್ಪಟ್ಟ ಆಹಾರ ಎಸೆಯುತ್ತಿರುವುದಕ್ಕೆ ನೆಟ್ಟಿಗರು ಸಿಟ್ಟಾಗಿದ್ದಾರೆ. ಭಾರತೀಯ ರೈಲಿನಲ್ಲಿ ಕಳಪೆ ಆಹಾರ ಪೂರೈಸುವುದೇ ದೊಡ್ಡು ತಪ್ಪು. ಆಹಾರ ವೇಸ್ಟ್ ಮಾಡಿದ್ದು ಮತ್ತೊಂದು ತಪ್ಪು. ಜೊತೆಗೆ ಉಳಿದದ್ದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡೋ ಬದಲು ಟ್ರ್ಯಾಕ್ ಮೇಲೆ ಎಸೆದು ಬೇಜವಾಬ್ದಾರಿ ತೋರಿದ್ದು ಮತ್ತೊಂದು ತಪ್ಪೆಂದು ಜನರು ಹೇಳುತ್ತಿದ್ದಾರೆ. ರೈಲ್ವೆ ಇಲಾಖೆಯ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಪದ್ಧತಿ ಹಾಗೂ ಹಳಿಗಳ ಸುತ್ತಮುತ್ತಲಿರುವ ಪ್ರಾಣಿ-ಪಕ್ಷಿಗಳ ಸುರಕ್ಷತೆಯ ಕುರಿತು ಜನರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

LPGಗೆ ಗುಡ್‌ಬೈ! ಭಾರತೀಯ ರೈಲ್ವೆಯ ಹೊಸ ನಿಯಮದಿಂದ ಏನೇನು ಬದಲಾಗಲಿದೆ? ಆಹಾರದ ಬೆಲೆ ಹೆಚ್ಚುತ್ತಾ?
LPGಗೆ ಗುಡ್‌ಬೈ! ಭಾರತೀಯ ರೈಲ್ವೆಯ ಹೊಸ ನಿಯಮದಿಂದ ಏನೇನು ಬದಲಾಗಲಿದೆ? ಆಹಾರದ ಬೆಲೆ ಹೆಚ್ಚುತ್ತಾ?

ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬ ನಿಖರವಾದ ಮಾಹಿತಿ ಹಾಗೂ ದಿನಾಂಕ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದಾಗ್ಯೂ, ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ರೈಲ್ವೆ ಸೇವೆಗಳ ನೈರ್ಮಲ್ಯದ ಗುಣಮಟ್ಟ ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದ ಬಗ್ಗೆ ಚಿಂತಿಸುವಂತೆ ಮಾಡಿದೆ.

ಆರೋಗ್ಯಕ್ಕೆ ಕಂಟಕ: ಇಂತಹ ಆಹಾರವನ್ನು ಸೇವಿಸಿದರೆ ಆರೋಗ್ಯ ಹದಗೆಡುವುದು ಗ್ಯಾರಂಟಿ. ರೈಲ್ವೆ ಇಲಾಖೆಯು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಟ್ವಿಟರ್ (X) ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ X ಬಳಕೆದಾರರ ಪ್ರತಿಕ್ರಿಯೆಗಳು:

"ಪ್ರಯಾಣಿಕರ ಆರೋಗ್ಯದ ಜೊತೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು." ಎಂದು X ಬಳಕೆದಾರರು ಬರೆದುಕೊಂಡಿದ್ದಾರೆ.

"ಆಹಾರ ಕೆಟ್ಟಿದ್ದರೆ ಅದನ್ನು ಮಾರಾಟ ಮಾಡಬಾರದು, ಆದರೆ ಹೀಗೆ ಹೊರಗೆ ಎಸೆಯುವುದೂ ಸರಿಯಲ್ಲ." ಇನ್ನೊಬ್ಬರು ಕಾಮೆಂಟಿನಲ್ಲಿ ಹೇಳಿದ್ದಾರೆ.

"IRCTC ಆಹಾರದ ಗುಣಮಟ್ಟದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು." ಎಂದು ಮಗದೊಬ್ಬರು ಹೇಳಿದರೆ, "ಇದು ಆಹಾರ ವ್ಯರ್ಥ ಮಾಡುವುದಷ್ಟೇ ಅಲ್ಲ, ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ." ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಅಥವಾ ಐಆರ್‌ಸಿಟಿಸಿಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ಆಹಾರ ಸುರಕ್ಷತೆ, ಗುಣಮಟ್ಟ ನಿಯಂತ್ರಣ ಮತ್ತು ಆಹಾರ ವ್ಯರ್ಥದ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ಆಗಸ್ಟ್‌ನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಿಸ್ಟಂ ಚೇಂಜ್; 40 ವರ್ಷಗಳ ಹಳೇ ವ್ಯವಸ್ಥೆಗೆ ಬ್ರೇಕ್, ಜಾರಿಯಾಗ್ತಿದೆ AI ಮ್ಯಾಜಿಕ್
ಆಗಸ್ಟ್‌ನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಿಸ್ಟಂ ಚೇಂಜ್; 40 ವರ್ಷಗಳ ಹಳೇ ವ್ಯವಸ್ಥೆಗೆ ಬ್ರೇಕ್, ಜಾರಿಯಾಗ್ತಿದೆ AI ಮ್ಯಾಜಿಕ್

ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅನೇಕ ನೆಟ್ಟಿಗರು, ಐಆರ್‌ಸಿಟಿಸಿ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಿಂದ ಕ್ಯಾಟರಿಂಗ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದರೂ, ಗುಣಮಟ್ಟದ ಆಹಾರ ಒದಗಿಸುವಲ್ಲಿ ಪದೇಪದೆ ದೂರುಗಳು ಕೇಳಿಬರುತ್ತಿವೆ ಎಂದು ಆರೋಪಿಸಿದ್ದಾರೆ.

ವೈರಲ್ ವಿಡಿಯೋ: X ಪೋಸ್ಟ್‌

ಸೂಚನೆ: ವಿಡಿಯೋದಲ್ಲಿನ ಆರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಮಾಹಿತಿ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+