RCB vs CSK ಪಂದ್ಯಕ್ಕಿಂತಲೂ RCB vs PBKS ಪಂದ್ಯ ವೀಕ್ಷಿಸಿದವರ ಸಂಖ್ಯೆ 61 ಕೋಟಿ..
RCB Victory Parade: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ IP 2025 ನಲ್ಲಿ ಭರ್ಜರಿ ಜಯಗಳಿಸಿದ ನಂತರ ಬೆಂಗಳೂರಿಗೆ ಆಗಮಿಸಲಿದೆ. ಇಂದು ಸಂಜೆ ಓಪನ್ ಬಸ್‌ನಲ್ಲಿ ಬೆಂಗಳೂರಿನಲ್ಲಿ ಮೆರವಣಿಗೆ ಮಾಡಲಿದ್ದಾರೆ. ವಿರಾಟ್ ಕೊಹ್ಲಿ ಟೀಂ ಪ್ರೈವೆಟ್ ಜೆಟ್‌ನಲ್ಲಿ ಆಗಮಿಸಲಿದ್ದಾರೆ. ನೆನ್ನೆ ನಡೆದ ಪಂದ್ಯ ವೇಳೆ ಗಮನಿಸಬೇಕಾದ ಅಂಶವೆಂದರೆ ಸದರಿ ಐಪಿಎಲ್‌ನಲ್ಲಿ ಆರ್‌ಸಿಬಿ ಆಡಿದ ಪಂದ್ಯಾವಳಿಗಿಂತಲೂ ಫೈನಲ್ ಪಂದ್ಯವನ್ನು 61 ಕೋಟಿ ಜನರು ವೀಕ್ಷಣೆ ಮಾಡಿರುವುದು ದಾಖಲೆಯಾಗಿದೆ.
ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೆನ್ನೈ ಸೂಪರ್ ಕಿಂಗ್ (CSK) ಜೊತೆಗೆ ಆಡಿದ್ದಕ್ಕಿಂತಲೂ ಪಂಜಾಬ್ ಟೀಂ ಜೊತೆಗೆ ಆಡಿದ್ದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಆರ್‌ಸಿಬಿ ಚೆನ್ನೈ ಟೀಂ ಜೊತೆಗೆ ಆಡುವ ಪ್ರತಿ ಪಂದ್ಯಾವಳಿಯು ಅಭಿಮಾನಿಗಳನ್ನು ಹುಬ್ಬೇರುವಂತೆ ಮಾಡುತ್ತದೆ. ಈ ಸಲ ಎರಡು ಬಾರಿ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಾವಳಿ ನಡೆದಾಗ ಕ್ರಮವಾಗಿ 36 ಕೋಟಿ ಹಾಗೂ 37 ಕೋಟಿ ಜನರು ಲೈವ್ ವೀಕ್ಷಣೆ ಮಾಡಿದ್ದಾರೆ.

ಸದ್ಯ ಪಂಜಾಬ್ ಜೊತೆಗೆ ನಡೆದ ಆರ್‌ಸಿಬಿ ಫೈನಲ್ ಮ್ಯಾಚ್ ಅನ್ನು 61 ಕೋಟಿ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಈ ಹಿಂದೆ ಆರ್‌ಸಿಬಿ vs ಕೆಕೆಆರ್ (ಕೊಲ್ಕತ್ತ ನೈಟ್ ರೈಡರ್) ಪಂದ್ಯ ನಡೆದಾಗ 42 ಕೋಟಿ ಮಂದಿ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಆರ್‌ಸಿಬಿ vs ಎಂಐ (ಮುಂಬೈ ಇಂಡಿಯನ್ಸ್) ತಂಡಗಳು ಆಡುವಾಗ 35 ಕೋಟಿ ಮಂದಿ ಲೈವ್ ವೀಕ್ಷಣೆ ಮಾಡಿದ್ದರು.
IPL 2025 ಫೈನಲ್ ಮ್ಯಾಚ್ ಎಂದ ಮೇಲೆ ಎಲ್ಲ ಟೀಂಗಳ ಅಭಿಮಾನಿಗಳು ಕ್ರೇಜ್ ಹೆಚ್ಚಾಗಿಯೇ ಇರುತ್ತದೆ. ಅದರಲ್ಲಿ ಬಹುಪಾಲು ಆರ್‌ಸಿಬಿ ಫ್ಯಾನ್ಸ್‌ಗಳದ್ದೆ ಹವಾ ಆಗಿರುತ್ತದೆ. ಅಹಮದಬಾದ್ ಕ್ರಿಕೇಟ್ ಸ್ಟೇಡಿಯಂನಲ್ಲಿ ಶೇಕಡಾ 80ರಷ್ಟು ಮಂದಿ ಆರ್‌ಸಿಬಿ ಅಭಿಮಾನಿಗಳು ತುಂಬಿಕೊಂಡಿದ್ದಾರೆ. ಐಪಿಎಲ್ ಇತರ ಪಂದ್ಯಕ್ಕಿಂತಲೂ ಈ ಅಂತಿಮ ಪಂದ್ಯವನ್ನು ಪ್ರತಿ ವರ್ಷ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತದೆ ಎಂದು ವಿಶೇಷ.












Click it and Unblock the Notifications