ತನಿಖಾ ವರದಿ: 5,600 ಕೋಟಿ ಡ್ರಗ್‌ ವಶ, ಕಾಂಗ್ರೆಸ್ ಸುತ್ತಲಿನ ರಾಜಕೀಯ ಬಿರುಗಾಳಿ

ಮಾದಕ ವಸ್ತು ವಿರುದ್ಧ ಭಾರತದಲ್ಲಿ ಬಹುದೊಡ್ಡ ಕಾರ್ಯಾಚರಣೆ ಇತ್ತೀಚೆಗೆ ನಡೆದಿದೆ. ದೆಹಲಿಯಲ್ಲಿ ಸುಮಾರು 5,600 ಕೋಟಿ ರೂ. ಮೊತ್ತದ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಇದರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಯುವ ನಾಯಕ ಹಸ್ತಕ್ಷೇಪವಿದೆ ಎಂದು ಆರೋಪಿಸಿದೆ, ಇದು ಗಂಭೀರವಾದ ಪ್ರಶ್ನೆಗಳನ್ನು ಎತ್ತಿದೆ. ಕಾಂಗ್ರೆಸ್ ಈ ಆರೋಪಗಳನ್ನು ನಿರಾಕರಿಸಿದೆ, ಆದರೆ ಬಿಜೆಪಿ ತೀವ್ರವಾದ ಟೀಕೆಗಳನ್ನು ಮಾಡುತ್ತಿದ್ದು, ಐತಿಹಾಸಿಕ ಪಕ್ಷದಿಂದ ಹೊಣೆಗಾರಿಕೆಗಾಗಿ ಒತ್ತಾಯಿಸುತ್ತಿದೆ.

ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆದಿರುವುದು ಕಾನೂನಿನ ಸಮರ್ಪಕ ಜಾರಿಯಾಗಿದೆ. ಅಂತರಾಷ್ಟ್ರೀಯ ಜಾಲವನ್ನು ಪತ್ತೆ ಹಚ್ಚಿ ಸುಮಾರು 560 ಕೆಜಿ ಕೊಕೈನ್ ಮತ್ತು 40 ಕೆಜಿ ಗಾಂಜಾವನ್ನು ದಕ್ಷಿಣ ದೆಹಲಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ಈ ಮಾದಕ ವಸ್ತು ಜಾಲದ ಮಾಸ್ಟರ್ ಮೈಂಡ್‌ ಎಂದು ತುಷಾರ್ ಘೋಯಲ್ ಬಂಧಿಸಲಾಯಿತು. ಬಿಜೆಪಿ ವಕ್ತಾರರ ಪ್ರಕಾರ ಘೋಯಲ್ ಅಪರಾಧ ಉದ್ಯಮದ ಜೊತೆ ಜೈ ಜೋಡಿಸಿದ್ದಾನೆ. ಇಲ್ಲಿರುವ ಸ್ಫೋಟಕ ಅಂಶ ಎಂದರೆ ಘೋಯಲ್ ದೆಹಲಿ ಪ್ರದೇಶ ಕಾಂಗ್ರೆಸ್ ಯುವ ಕಾಂಗ್ರೆಸ್ ಆರ್‌ಟಿಐ ಸೆಲ್‌ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಣೆ ಮಾಡಿದ್ದ.

Investigative Report The Rs 5 600 Crore Drug Bust A Political Storm Brewing Around Congress

ಈ ಸಂಪರ್ಕವೇ ರಾಜಕೀಯ ಬಿರುಗಾಳಿಯ ಕಿಡಿಯನ್ನು ಹೊತ್ತಿಸಿದೆ, ಬಿಜೆಪಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಹಿರಂಗವಾಗಿಯೇ ಕಾಂಗ್ರೆಸ್‌ನ ಕೈವಾಡದ ಕುರಿತು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಆರೋಪಿಸಿರುವ ಪ್ರಧಾನಿ ಮೋದಿ, "ಯುವಕರನ್ನು ಮಾದಕ ವಸ್ತುಗಳ ಕಡೆಗೆ ಸೆಳೆದು ಆ ಹಣವನ್ನು ಚುನಾವಣೆ ಗೆಲ್ಲಲು ಬಳಕೆ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

ನೇರವಾಗಿ ಟೀಕೆಗಳನ್ನು ಮಾಡಿರುವ ಬಿಜೆಪಿ, ಮಾದಕ ವಸ್ತುವಿನ ಹಣವನ್ನು ಹರ್ಯಾಣ ವಿಧಾನಸಭೆ ಚುನಾವಣೆಗೆ ಬಳಕೆ ಮಾಡಲಾಗುತ್ತಿತ್ತೆ ಎಂದು ಪ್ರಶ್ನಿಸಿದ್ದು, ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ ಮತ್ತು ಅವರ ರಾಜಕೀಯ ಜಾಲದ ಕಡೆ ಪ್ರಶ್ನೆ ಮಾಡಿದೆ. ನಾಲ್ಕು ರಾಜ್ಯಗಳ ಚುನಾವಣೆಗೆ ಕೆಲವೇ ದಿನಗಳ ಹಿಂದೆ ಈ ಜಾಲ ಪತ್ತೆ ಹಚ್ಚಿದ್ದು ಒಳಸಂಚು ಎಂದು ಹೇಳಲಾಗುತ್ತಿದೆ.

ಮುಖ್ಯ ಪ್ರಶ್ನೆಗಳು: ಮಾದಕ ವಸ್ತು ಜಾಲ ಸಿಂಡಿಕೇಟ್‌ ಜೊತೆ ಕಾಂಗ್ರೆಸ್ ಸಂಪರ್ಕ?

ಬಿಜೆಪಿ ಎತ್ತಿರುವ ನೇರ ಪ್ರಶ್ನೆಗಳು ಘೋಯಲ್ ಮತ್ತು ಕಾಂಗ್ರೆಸ್ ಪಕ್ಷದ ಸಂಪರ್ಕದ ಸುತ್ತಲೇ ಇವೆ. ಬಿಜೆಪಿ ನಾಯಕರು ಉತ್ತರಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ, ಪಕ್ಷದಲ್ಲಿ ಘೋಯಲ್ ಪಾತ್ರದ ಬಗ್ಗೆ ವಿವರವಾಗಿ ಪರಿಶೀಲಿಸಿ ಎಂದು ಸಲಹೆ ನೀಡಿದೆ. ಘೋಯಲ್ ಕೆಲವು ವರ್ಷಗಳ ಹಿಂದೆ ಅಂದರೆ 2022ರಲ್ಲಿ ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಆರ್‌ಟಿಐ ಸೆಲ್ ಅಧ್ಯಕ್ಷರಾಗಿದ್ದರು. ಪ್ರಮುಖ ಕಾಂಗ್ರೆಸ್ ನಾಯಕರ ಜೊತೆ ಘೋಯಲ್ ಚಿತ್ರಗಳು ಈ ಆರೋಪಗಳಿಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ.

Investigative Report The Rs 5 600 Crore Drug Bust A Political Storm Brewing Around Congress

ಡ್ರಗ್ ಹಣ ಚುನಾವಣೆಗೆ ಬಳಕೆ?

ಮುಂಬರಲಿದ್ದ ಹರ್ಯಾಣ ವಿಧಾನಸಭೆ ಚುನಾವಣೆಗೆ ಮಾದಕ ವಸ್ತುವಿನ ಹಣವನ್ನು ಮೀಸಲಾಗಿ ಇಡಲಾಗಿತ್ತೆ? ಎಂದು ಬಿಜೆಪಿ ಪ್ರಶ್ನಿಸಿದೆ. ಇದು ನಿಜವೇ ಆಗಿದ್ದರೆ ರಾಜಕೀಯ ಮತ್ತು ಸಂಘಟಿತ ಅಪರಾಧ ಆಳವಾದ ನಂಟು ಹೊಂದಿದೆ ಎನ್ನಬಹುದು. ಈ ವರ್ಷ ನಾಲ್ಕು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ, ಈ ಆರೋಪ ಬಹಳಷ್ಟು ಮಹತ್ವವನ್ನು ಪಡೆದಿದೆ.

ಆರೋಪ ಮತ್ತು ಕಾಂಗ್ರೆಸ್ ಪ್ರತಿಕ್ರಿಯೆ

ತುಷಾರ್ ಘೋಯಲ್ ಜೊತೆ ನಂಟಿನ ಕುರಿತಂತೆ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಇದೊಂದು ಪ್ರಚಾರ ತಂತ್ರ ಎಂದು ಹೇಳಿದೆ. ದೆಹಲಿ ಪೊಲೀಸರ ವಿಶೇಷ ಘಟಕ ಈ ಅಂತರಾಷ್ಟ್ರೀಯ ಮಾದಕ ವಸ್ತು ಜಾಲದಲ್ಲಿ ಘೋಯಲ್ ಪಾತ್ರದ ಬಗ್ಗೆ ತನಿಖೆಯನ್ನು ನಡೆಸುತ್ತಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಘೋಯಲ್ ಮಧ್ಯಪ್ರಾಚ್ಯದ ಜಾಲದ ಜೊತೆ ನಂಟು ಹೊಂದಿದ್ದಾನೆ ಮತ್ತು ಭಾರತದಲ್ಲಿ ಮಾದಕ ವಸ್ತುಗಳ ವಿತರಣೆಯಲ್ಲಿ ಪ್ರಮುಖ ವ್ಯಕ್ತಿ ಎಂದು ನಂಬಲಾಗಿದೆ. ಕಾಂಗ್ರೆಸ್ ಪಕ್ಷದ ಜೊತೆ ಆತನ ನಂಟು ಕುರಿತು ಮಾಹಿತಿ ಹೊರಬಂದರೆ ಪಕ್ಷಕ್ಕೆ ಮುಜುಗರವಾಗಲಿದೆ, ಅದರಲ್ಲೂ ಮುಂಬರುವ ಚುನಾವಣೆಗಳ ಹಿನ್ನಲೆಯಲ್ಲಿ ರಾಜಕೀಯ ಹೋರಾಟಕ್ಕೆ ಸಿದ್ಧವಾಗುತ್ತಿರುವಾಗ ಹಿನ್ನಡೆ ಆಗಲಿದೆ.

ಕೇಂದ್ರ ಸಚಿವ ಅಮಿತ್ ಶಾ ಸಹ ಈ ವಿಚಾರದ ಕುರಿತು ಮಾತನಾಡಿದ್ದಾರೆ, ಜನರಿಗೆ ಮಾದಕ ವಸ್ತುಗಳು ಎಂದರೆ ಇದು ಕಾಂಗ್ರೆಸ್ ಆಡಳಿತ ಇರುವ ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ಬೆಳದಿದ್ದು ಎಂದು ನೆನಪಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅವಧಿಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಕುರಿತು ಅಮಿತ್ ಶಾ ವಿವರಿಸಿದ್ದಾರೆ, ಬಿಜೆಪಿ ಈ ಸಮಸ್ಯೆ ಪರಿಹರಿಸಲು ಸಾಕಷ್ಟು ಶ್ರಮಿಸಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ನಡೆಯುತ್ತಿರುವ ತನಿಖೆಗೆ ಮತ್ತಷ್ಟು ಬಲ ತಂದಿದೆ ಮತ್ತು ಕಾಂಗ್ರೆಸ್ ವಿರುದ್ಧ ರಾಜಕೀಯ ಟೀಕೆಗೆ ದಾರಿ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+