Chandrayaan 3 Soft Landing: ಇಸ್ರೋಗೆ ಶುಭಾಶಯ, ಮೀಮ್‌, ಜೋಕ್‌ಗಳ ಮಹಾಪೂರ!

ಇಸ್ರೋದ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಇಸ್ರೋ ಅಭಿವೃದ್ಧಿಪಡಿಸಿದ ಈ ಕಾರ್ಯಾಚರಣೆಯು ವಿಕ್ರಮ್ ಎಂದು ಕರೆಯಲ್ಪಡುವ ಲ್ಯಾಂಡರ್ ಮಾಡ್ಯೂಲ್ ಅನ್ನು ಒಳಗೊಂಡಿದೆ, ಸಂಸ್ಕೃತದಲ್ಲಿ "ಶೌರ್ಯ" ಎಂದು ಅರ್ಥ ಬರುತ್ತದೆ. ಪ್ರಗ್ಯಾನ್ ಹೆಸರಿನ ರೋವರ್ ಕೂಡ ಇಳಿಯಲಿದೆ ಇದಕ್ಕೆ ಸಂಸ್ಕೃತದಲ್ಲಿ "ಬುದ್ಧಿವಂತಿಕೆ" ಎಂದು ಅರ್ಥ ಬರುತ್ತದೆ.

ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವ ಕಾರ್ಯಾಚರಣೆಯಲ್ಲಿದೆ, ಅದು ಸಾಧಿಸಿದರೆ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತದ ನೌಕೆ ಲ್ಯಾಂಡಿಂಗ್ ಮಾಡಲಿದ್ದು, ಇದನ್ನು ಮಾಡುವ ಮೊದಲ ದೇಶ ಎನಿಸಿಕೊಳ್ಳಲಿದೆ.

 Internets Response to Chandrayaan 3 Moon Landing: Memes, Jokes, Prayers for ISRO

ಚಂದ್ರಯಾನ 3 ಬಗ್ಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಕುತೂಹಲ ಹೊಂದಿವೆ. ಇಡೀ ದೇಶದ ಸಾಮಾನ್ಯ ಜನ ಕೂಡ ಭಾರತದ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನೆಟಿಜನ್‌ಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್)ನಲ್ಲಿ ಉತ್ಸಾಹದಿಂದ ತಮ್ಮನ್ನು ಮೀಮ್‌ಗಳು, ಜೋಕ್‌ಗಳ ಜೊತೆ ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್‌ಗಾಗಿ ಕಾಯುತ್ತಿರುವ ಇಸ್ರೋ ತಂಡಕ್ಕೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಇಸ್ರೋ ಭಾರತದ ಹೆಮ್ಮೆ

ಟ್ವೀಟ್‌ನಲ್ಲಿ ಬಳಕೆದಾರರು ಇಂದು ಚಂದ್ರನ ಮೇಲೆ ವಿಕ್ರಮ್ ರೋವರ್ ಇಳಿಯುವುದನ್ನು ನಿರೀಕ್ಷಿಸುತ್ತಿರುವ ಭಾರತೀಯ ಯುವಕರಲ್ಲಿ ತೀವ್ರ ಆಸಕ್ತಿ ಇದೆ ಎಂದು ಸೂಚಿಸಿದೆ.

ಇನ್ನೊಬ್ಬ ಬಳಕೆದಾರರು ಚಂದ್ರನ ಮೇಲ್ಮೈಯಲ್ಲಿ ಭಾರತೀಯ ಧ್ವಜ ಹಾರುತ್ತಿರುವ ಎಡಿಟೆಡ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅವರು ಅದನ್ನು "ನಾಳೆ ಸಂಜೆ" ಇದು ಆಗಲಿದೆ ಎನ್ನುವ ಅರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ.

ಇಸ್ರೋದ ಚಂದ್ರಯಾನ 3 ಇಂದು ಚಂದ್ರನ ಮೇಲೆ ಇಳಿಯಲು ಬಳಕೆದಾರರಲ್ಲಿ ಒಬ್ಬರು ಶುಭಾಶಯಗಳನ್ನು ವ್ಯಕ್ತಪಡಿಸಿದರು. ಇನ್ನೊಬ್ಬ ಬಳಕೆದಾರರು, "ಏನೇ ಆಗಲಿ ನಾನು ಜೊತೆ ಇರುತ್ತೇನೆ" ಎಂದು ರೋವರ್‌ನ ಲ್ಯಾಂಡಿಂಗ್ ಬಗ್ಗೆ ಉತ್ಸಾಹ ತೋರಿದ್ದಾರೆ.

ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲು ಪ್ರಾರ್ಥನೆಗಳು ಮತ್ತು ಉತ್ಸಾಹವು ದೇಶಾದ್ಯಂತ ಪ್ರತಿಧ್ವನಿಸುತ್ತಿರುವಾಗ, ಬಳಕೆದಾರರು "ಚಂದ್ರಯಾನ-3 ಸುರಕ್ಷಿತ ಲ್ಯಾಂಡಿಂಗ್ಗಾಗಿ ಪ್ರಾರ್ಥಿಸುತ್ತಿದ್ದಾರೆ" ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಬಳಕೆದಾರರು ಶಾರುಖ್ ಖಾನ್ ಫೋಟೊವನ್ನು ಹಂಚಿಕೊಂಡಿದ್ದು. "ಗ್ರೇಟ್ ಗೋಯಿಂಗ್ ಟೀಮ್ ISRO" ಎಂದು ಶೀರ್ಷಿಕೆ ನೀಡಿದ್ದಾರೆ.

"ಇದು 23 ಆಗಸ್ಟ್ 2023 , ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸುವ ಮೂಲಕ ಗ್ರೇಟ್ ಭಾರತವರ್ಷ ಇತಿಹಾಸವನ್ನು ರಚಿಸುವ ದಿನಾಂಕ. ಶುಭಾಯಗಳು ಇಸ್ರೋ, 1.4 ಬಿಲಿಯನ್ ಭಾರತೀಯರು ಮೈನಸ್ ಪ್ರಕಾಶ್ ರಾಜ್ ನಿಮ್ಮೊಂದಿಗೆ ಇದ್ದಾರೆ." ಎಂದು ಪ್ರಕಾಶ್ ರಾಜ್ ಕಾಲೆಳೆದಿದ್ದಾರೆ.

ವೀಕ್ಷಕರು ಇಸ್ರೋ ವೆಬ್‌ಸೈಟ್, ಇಸ್ರೋದ ಯೂಟ್ಯೂಬ್ ಚಾನೆಲ್, ಇಸ್ರೋದ ಫೇಸ್‌ಬುಕ್ ಪುಟ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ಚಾನೆಲ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಲೈವ್ ಆಗಿ ವೀಕ್ಷಿಸಬಹುದು. ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿಯೂ ವೀಕ್ಷಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+