ಮೋದಿ ಕನಸಿನ ಯೋಜನೆಯ ಬಡ್ಡಿ ಸಬ್ಸಿಡಿ ದರ ಹೆಚ್ಚಳ!
ಬೆಂಗಳೂರು, ಜನವರಿ 21: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಮನೆ ಕೊಳ್ಳುವವರಿಗೆ ನೆರವಾಗಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗಿದೆ. ವಿಶೇಷ ಆರ್ಥಿಕ ವಲಯದ ನಿವಾಸಿಗಳು, ಗ್ರಾಮೀಣ ಪ್ರದೇಶ, ಕೈಗಾರಿಕಾ ಪ್ರದೇಶದಲ್ಲಿ ಮನೆ ಖರೀದಿಸಿದರೂ ಹೊಸ ಸೌಲಭ್ಯ ದೊರೆಯಲಿದೆ.
ಗೃಹಸಾಲ ಪಡೆಯುವವರಿಗೆ 2.3 ಲಕ್ಷ ರೂಪಾಯಿವರೆಗೆ ಬಡ್ಡಿದರದ ಸಬ್ಸಿಡಿ ದೊರೆಯಲಿದೆ. ಸುಮಾರು 100 ನಗರಗಳಲ್ಲಿ ಈ ಯೋಜನೆಯಡಿಯಲ್ಲಿ ಮನೆ ಖರೀದಿಸಲು ಸಾಲ ಪಡೆಯಲು ಹೋದಾಗ ಇಂಟ್ರೆಸ್ಟ್ ಸಬ್ಸಿಡಿ ನೀಡಲು ಬ್ಯಾಂಕುಗಳು ನಿರಾಕರಿಸಿದ್ದರ ಬಗ್ಗೆ ಸಾರ್ವಜನಿಕರಿಂದಸ್ ದೂರಗಳು ಕೇಳಿ ಬಂದಿತ್ತು.

ಹೀಗಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಪರಿಷ್ಕರಣೆ ಮಾಡಲಾಗಿದೆ. PMAY ಗ್ರಾಮೀಣ, ನಗರ ಭಾಗದ ಎಲ್ಲರಿಗೂ ಈ ಯೋಜನೆಯ ಲಾಭ ಸಿಗಲಿದೆ.












Click it and Unblock the Notifications