ಇನ್ ಸ್ಟಾವಾಣಿ ಸಮೀಕ್ಷೆ: ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ
ನವದೆಹಲಿ, ಜ. 16 : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಕಾವು ಏರುತ್ತಿದೆ. ಜತೆಗೆ ಪಕ್ಷಾಂತರ ಪರ್ವವೂ ಆರಂಭವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕಡೆ ಅನೇಕರು ವಲಸೆ ಹೋಗುತ್ತಿದ್ದಾರೆ.
ಈ ನಡುವೆ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಸುಮಾರು 30 ಪ್ರಶ್ನೆಗಳನ್ನು ಇಟ್ಟುಕೊಂಡು ಸರ್ವೆ ನಡೆಸಿರುವ 'ಇನ್ ಸ್ಟಾವಾಣಿ' ಶುಕ್ರವಾರ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಪ್ರಕಟ ಮಾಡಿದ್ದು ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ. [ದೆಹಲಿ ಅಸೆಂಬ್ಲಿ ಚುನಾವಣೆ : ಹೊರಬಿತ್ತು ಸಮೀಕ್ಷೆ]

ಗೆಲುವಿನ ಸಾಧ್ಯತೆಗಳೇನು? ಭ್ರಷ್ಟಾಚಾರ, ಯಾವ ಆಧಾರದಲ್ಲಿ ಯಾರಿಗೆ ಮತ? ದೆಹಲಿಯ ಸದ್ಯದ ಸ್ಥಿತಿಗೆ ಯಾರು ಕಾರಣ? ಎಂಬ ಹಲವಾರು ಸಂಗತಿಗಳನ್ನು ಇಟ್ಟುಕೊಂಡು ಸರ್ವೆ ಮಾಡಲಾಗಿದೆ. ಫೆಬ್ರವರಿ 7ರಂದು ಮತದಾನ ನಡೆಯಲಿದ್ದು ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಿರತವಾಗಿವೆ. ಅದರಲ್ಲೂ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗಳ ಅಬ್ಬರ ಜೋರಾಗಿದೆ.
ಸಮೀಕ್ಷೆಯಲ್ಲಿ ಮಹಿಳೆಯರ ಭದ್ರತೆಗೆ ಮೊದಲು ಆದ್ಯತೆ ನೀಡಬೇಕು ಎಂದು ಜನ ಆಗ್ರಹಿಸಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಅಧಿಕಾರಕ್ಕೆ ಬಂದ ಪಕ್ಷದ ಮೊದಲ ಆದ್ಯತೆ ರಾಜಧಾನಿಯ ಮಹಿಳೆಯರ ಭದ್ರತೆ ಆಗಿದೆ.[ಮೋದಿ ಸೆಳೆತಕ್ಕೆ ಸಿಲುಕಿ ಬಿಜೆಪಿ ವಶವಾದವರು...]
ಗೆಲುವಿನ ಲೆಕ್ಕಾಚಾರದಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿಗಿಂತಲೂ ಮುಂದಿದೆ. ಒಟ್ಟು 800 ಕ್ಕೂ ಅಧಿಕ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಆಮ್ ಆದ್ಮಿ ಶೇ. 49 ಮತ ಗಳಿಸಿಕೊಂಡಿದೆ.
ಆದ್ಯತೆಯ ಪ್ರಶ್ನೆ ಬಂದಾಗ ಮಹಿಳಾ ಸುರಕ್ಷತೆಗೆ ಶೇ. 33, ಭ್ರಷ್ಟಾಚಾರ ತಡೆ ಮತ್ತು ಕಾನೂನು ಸುವ್ಯವಸ್ಥೆಗೆ ಶೇ. 27, ವಿದ್ಯುತ್, ನೀರು ಪೂರೈಕೆ ಮತ್ತು ಕಸ ವಿಲೇವಾರಿಗೆ ಶೆ. 16, ಬೆಲೆ ಏರಿಕೆ ತಡೆಗೆ ಶೇ. 18, ರಸ್ತೆ ಮತ್ತು ಸಾರ್ವಜನಿಕ ಸಾರಿಗೆಗೆ ಶೇ. 5 ಅಂಕ ಬಂದಿದೆ.












Click it and Unblock the Notifications