ಇವತ್ತು ಮಧ್ಯಾಹ್ನ ಇನ್ ಸ್ಟಾಗ್ರಾಂ ಕೈಕೊಟ್ರೆ ಬೈಕೋಬೇಡಿ!
ನವದೆಹಲಿ, ಜನವರಿ 29: ಫೇಸ್ ಬುಕ್ ಒಡೆತನದ ಫೋಟೋ ಮತ್ತು ವಿಡಿಯೋ ಶೇರಿಂಗ್ app ಇನ್ ಸ್ಟಾಗ್ರಾಂ ಇಂದು ಮಧ್ಯಾಹ್ನ ವಿಶ್ವದಾದ್ಯಂತ ಡೌನ್ ಆಗಲಿದೆ ಎಂದು ಇನ್ ಸ್ಟಾಗ್ರಾಂ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ವಾರವಷ್ಟೆ ಫೇಸ್ ಬುಕ್ ಒಡೆತನದ ವಾಟ್ಸಾಪ್ ಮೆಸೆಂಜರ್ ಡೌನ್ ಆಗಿ ಬಳಕೆದಾರರಿಗೆ ತಾಪತ್ರಯವನ್ನುಂಟು ಮಾಡಿತ್ತು. ಇದೀಗ ಇನ್ ಸ್ಟಾಗ್ರಾಂ ಸರದಿ.

"ಇನ್ ಸ್ಟಾಗ್ರಾಂ app ಕಾರ್ಯನಿರ್ವಹಣೆಯಲ್ಲಿ ಕೆಲವು ಸಮಸ್ಯೆ ಉಂಟಾಗಿರುವ ಬಗ್ಗೆ ನಮಗೆ ತಿಳಿಸಿದೆ. ಈ ಕಾರಣದಿಂದ ಜ.29 ರಂದು ಮಧ್ಯಾಹ್ನ ಇನ್ ಸ್ಟಾಗ್ರಾಂ ಬಳಕೆದಾರರು ಕೊಂಚ ಕಿರಿಕಿರಿ ಅನುಭವಿಸಬೇಕಾಗಬಹುದು. ಇದರಿಂದ ಬಳಕೆದಾರರಿಗೆ ಸಮಸ್ಯೆಯಾಗುತ್ತದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ" ಎಂದು ಇನ್ ಸ್ಟಾಗ್ರಾಂ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.
ಭಾರತೀಯ ಕಾಲಮಾನ ಇಂದು ಬೆಳಿಗ್ಗೆ 5:51 ರ ವೇಳೆಗೂ ಇನ್ ಸ್ಟಾಗ್ರಾಂ ಕಾರ್ಯದಲ್ಲಿ ವ್ಯತ್ಯಯವಾಗಿತ್ತು. ಸುಮಾರು 32000 ಬಳಕೆದಾರರು ಕಿರಿಕಿರಿ ಅನುಭವಿಸಿದ್ದರು.












Click it and Unblock the Notifications