ಇವ್ರೇ ನೋಡಿ ರಿಯಲ್ ಹೀರೋ.. ಕಸದ ಬುಟ್ಟಿಯಲ್ಲಿದ್ದ ಆಹಾರ ಸೇವಿಸುತ್ತಿದ್ದ ಬಡ ಮಕ್ಕಳ ಜೀವನ ಬದಲಿಸಿದ ಪ್ರೊಫೆಸರ್

Inspiration Story: ಚಿಕ್ಕ ಹೆಣ್ಣುಮಗಳೊಬ್ಬಳು ಕಸದ ತೊಟ್ಟಿಯಿಂದ ಬಿರಿಯಾನಿ ತೆಗೆದು ತಿನ್ನುತ್ತಿದ್ದಾಗ, ಆಕೆಯ ಸಹೋದರ ಬೀದಿ ನಾಯಿಗಳು ಹತ್ತಿರ ಬರದಂತೆ ಕೋಲು ಹಿಡಿದು ಕಾಯುತ್ತಿದ್ದ. ಇದನ್ನು ಕಂಡ ಪಶ್ಚಿಮ ಬಂಗಾಳದ ಕಾಲೇಜು ಪ್ರೊಫೆಸರ್ ಚಂದ್ರಶೇಖರ್ ಕುಂಡು ಅವರ ಮನಸ್ಸು ತೀವ್ರವಾಗಿ ಕಲುಕಿತ್ತು. ಕಣ್ಣೆದುರೇ ಕಂಡ ಆ ದೃಶ್ಯವನ್ನು ಮರೆಯದ ಅವರು, ಇಡೀ ದೇಶವೇ ಮೆಚ್ಚುವಂತಹ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ಅಂದಿನಿಂದ ಬಡ ಹಾಗೂ ಅನಾಥ ಮಕ್ಕಳ ಹಸಿವು ನೀಗಿಸುವುದು ಮತ್ತು ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ತಮ್ಮ ಜೀವನದ ಬಹುಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡ ಪ್ರೊಫೆಸರ್ ಚಂದ್ರಶೇಖರ್ ಕುಂಡು, ಇಂದು 'ಫುಡ್‌ಮ್ಯಾನ್' ಎಂದೇ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

Inspiration Story Meet West Bengal s Foodman Professor Chandrashekhar Kundu Feeding Poor Children

ಬಡ ಮಕ್ಕಳಿಗೆ ಆಸರೆಯಾದ ಪ್ರೊಫೆಸರ್ ಚಂದ್ರಶೇಖರ್

ತಮ್ಮ ದೈನಂದಿನ ಜೀವನದಲ್ಲಿ ಕಂಡ ಆ ದೃಶ್ಯ ಪ್ರೊಫೆಸರ್ ಚಂದ್ರಶೇಖರ್ ಅವರಲ್ಲಿ ತೀವ್ರ ಆಘಾತ ಸೃಷ್ಟಿಸಿತ್ತು. ಸಮಾಜದಲ್ಲಿ ಆಹಾರ ಪೋಲಾಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತುತ್ತು ಅನ್ನಕ್ಕಾಗಿ ಮಕ್ಕಳು ಕಸದ ತೊಟ್ಟಿ ಹುಡುಕುತ್ತಿರುವುದನ್ನು ಕಂಡ ಅವರು ಸುಮ್ಮನಿರಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಖಾಡಕ್ಕಿಳಿದ ಅವರು, ಹೋಟೆಲ್‌ಗಳು, ಮದುವೆ ಸಮಾರಂಭಗಳು ಮತ್ತು ಕಾಲೇಜು ಕ್ಯಾಂಟೀನ್‌ಗಳಿಂದ ಹೆಚ್ಚುವರಿಯಾಗಿ ಉಳಿಯುವ ಗುಣಮಟ್ಟದ ಆಹಾರವನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ಹಂಚಲು ಪ್ರಾರಂಭಿಸಿದರು.

ಹಸಿವು ನೀಗಿಸುವುದರ ಜೊತೆಗೆ ಉಚಿತ ಶಿಕ್ಷಣ

ಕೇವಲ ಆಹಾರ ನೀಡುವುದಕ್ಕೆ ಮಾತ್ರ ತಮ್ಮ ಸೇವೆಯನ್ನು ಸೀಮಿತಗೊಳ್ಳದ ಪ್ರೊಫೆಸರ್ ಚಂದ್ರಶೇಖರ್ ಕುಂಡು, ಬಡತನದಿಂದ ಹೊರಬರಲು ಶಿಕ್ಷಣವೇ ನಿಜವಾದ ಅಸ್ತ್ರ ಎಂಬುದನ್ನು ಅರಿತಿದ್ದರು. ಬಳಿಕ ಅವರು ಪಶ್ಚಿಮ ಬಂಗಾಳದ ಗ್ರಾಮೀಣ ಹಾಗೂ ಕೊಳಚೆ ಪ್ರದೇಶದ ಬಡ ಮಕ್ಕಳಿಗಾಗಿ ಉಚಿತ ತರಬೇತಿ ಮತ್ತು ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಿದರು.

ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉಚಿತ ಪುಸ್ತಕಗಳು, ಲೇಖನಿ ಹಾಗೂ ಶಾಲಾ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಈ ಸಾಹಸದ ಮೂಲಕ ಸಾವಿರಾರು ನಿರ್ಗತಿಕ ಮಕ್ಕಳ ಹೊಟ್ಟೆ ತುಂಬಿಸುವುದರ ಜೊತೆಗೆ, ಅವರಿಗೆ ಅಕ್ಷರ ಕ್ರಾಂತಿಯ ಬೆಳಕನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಾಜಕ್ಕೆ ಪ್ರೇರಣೆಯಾದ ಫುಡ್‌ಮ್ಯಾನ್

ಒಂದು ಸಣ್ಣ ಘಟನೆಯಿಂದ ಪ್ರೇರಿತರಾಗಿ ಪ್ರೊಫೆಸರ್ ಚಂದ್ರಶೇಖರ್ ಅವರು ಆರಂಭಿಸಿದ ಈ ಅಭಿಯಾನವು ಇಂದು ನೂರಾರು ಯುವಕರನ್ನು ಜೊತೆಗೂಡಿಸಿಕೊಂಡು ಬೃಹತ್ ಸಾಮಾಜಿಕ ಚಳವಳಿಯಾಗಿ ಬೆಳೆದಿದೆ. ಬಡತನ ಹಾಗೂ ಹಸಿವಿನ ವಿರುದ್ಧ ಹೋರಾಡುತ್ತಿರುವ ಅವರ ಈ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಆರ್ಥಿಕ ಕಷ್ಟಗಳ ಸವಾಲು ಗೆದ್ದ ಲಾರಿ ಚಾಲಕನ ಮಗಳು

ಆಂಧ್ರಪ್ರದೇಶದ ತಿರುಪತಿಯ ಸಿಂಗಲಗುಂಟಾದ ಬಡ ಕುಟುಂಬದಲ್ಲಿ ಬೆಳೆದ ದಾಸರಿ ಇಂದುಮತಿ, ತಮ್ಮ ಕಠಿಣ ಪರಿಶ್ರಮ ಮತ್ತು ಪೋಷಕರ ನಂಬಿಕೆಯಿಂದ ಯುಪಿಎಸ್‌ಸಿ ನಡೆಸುವ ಇಂಡಿಯನ್ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 75ನೇ ರ‍್ಯಾಂಕ್ ಗಳಿಸಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಸಾಮಾನ್ಯ ಲಾರಿ ಚಾಲಕನ ಮಗಳೊಬ್ಬಳು ಬಡತನವನ್ನು ಮೆಟ್ಟಿ ನಿಂತು ಸಾಧಿಸಿದ ಈ ಗೆಲುವು ಇಂದು ದೇಶಾದ್ಯಂತ ಯುವಜನತೆಗೆ ದಾರಿದೀಪವಾಗಿದೆ.

ಇಂದುಮತಿ ಅವರ ತಂದೆ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದಲ್ಲಿ ಆರ್ಥಿಕ ಕಷ್ಟಗಳು ದೈನಂದಿನ ಭಾಗವಾಗಿದ್ದವು. ಆದರೂ 'ನೀನು ಪ್ರಾಮಾಣಿಕವಾಗಿ ವ್ಯಾಸಂಗ ಮಾಡು, ನಿನ್ನ ಬೆನ್ನಿಗೆ ನಾವು ನಿಲ್ಲುತ್ತೇವೆ,' ಎಂಬ ಒಂದೇ ಮಾತಿನಿಂದ ಪೋಷಕರು ಆಕೆಗೆ ನಿರಂತರ ಪ್ರೋತ್ಸಾಹ ನೀಡಿದರು. 10ನೇ ತರಗತಿಯ ನಂತರ ಶಿಕ್ಷಕರ ಸಲಹೆಯಂತೆ ಸರ್ಕಾರಿ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್‌ಗೆ ಸೇರುವ ಮೂಲಕ ಆರ್ಥಿಕ ಹೊರೆಯಾಗದ ಪ್ರಾಯೋಗಿಕ ವಿಭಾಗವನ್ನು ಆಯ್ದುಕೊಂಡರು.

ತಮ್ಮ ಅಧ್ಯಯನದಲ್ಲಿ ಸಾಧನೆ ಮಾಡಿದ ಇಂದುಮತಿ, ಇಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಶಿಕ್ಷಣ ಪೂರ್ಣಗೊಂಡ ನಂತರ ಬೋಸ್ಟನ್ ಮೂಲದ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ವರ್ಷಕ್ಕೆ ₹10 ಲಕ್ಷ ವೇತನದ ಕೆಲಸ ಲಭಿಸಿತು. ಇದು ಅವರ ಕುಟುಂಬಕ್ಕೆ ದೊಡ್ಡ ಆರ್ಥಿಕ ನೆಮ್ಮದಿ ಮತ್ತು ಹೆಮ್ಮೆಯನ್ನು ತಂದುಕೊಟ್ಟಿತು.

ಕೇವಲ ಸಾಫ್ಟ್‌ವೇರ್ ಕೆಲಸಕ್ಕೆ ತೃಪ್ತರಾಗದ ಇಂದುಮತಿ, ದೇಶಸೇವೆಯ ದೊಡ್ಡ ಕನಸಿನೊಂದಿಗೆ ಲಕ್ಷಾಂತರ ರೂಪಾಯಿ ಸಂಬಳದ ಕೆಲಸವನ್ನು ತೊರೆದರು. ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಗಾಗಿ ದೆಹಲಿಗೆ ತೆರಳಿದರು. ಈ ಹಂತದಲ್ಲಿ ದುಬಾರಿ ಕೋಚಿಂಗ್ ಮತ್ತು ವಸತಿ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದಾಗ, ಅವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಮತ್ತು ಧರ್ಮದರ್ಶಿಗಳು ನೆರವಿಗೆ ಧಾವಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+