MM Naravane: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ ಎಂ ನರವಣೆ ಪುಸ್ತಕದಲ್ಲೇನಿದೆ: ರಾಜೇಂದ್ರ ಪ್ರಸಾದ್ ಬರಹ
MM Naravane: ಭಾರತೀಯ ಸೇನೆಯ ಮಾಜಿ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಪುಸ್ತಕದ ವಿಚಾರವು ಹೆಚ್ಚು ಚರ್ಚೆ ಆಗುತ್ತಿದೆ. ಈ ವಿಷಯದ ಬಗ್ಗೆ ಸಾಹಿತಿ, ಬರಹಗಾರ ರಾಜೇಂದ್ರ ಪ್ರಸಾದ್ ಅವರ ಬರಹ ಇಲ್ಲಿದೆ.
ಭಾರತೀಯ ಸೇನೆಯ ಮಾಜಿ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಪುಸ್ತಕದ ವಿಚಾರವು ಈಗ ಸುದ್ದಿಯಲ್ಲಿದೆ. ಇದು e-ಪುಸ್ತಕವಾಗಿ 2024ರಲ್ಲೇ ಹೊರಬಂದಿದೆ. ಆದರೆ ಅದರ ಮುದ್ರಿತ ಆವೃತ್ತಿಯು ಬಂದಿಲ್ಲ. ಈ ಕುರಿತು ಕಾರ್ಯಕ್ರಮ ಒಂದರಲ್ಲಿ ಸೇನಾಪಡೆಯ ಅಧಿಕಾರಿಯೊಬ್ಬರು ನರಾವಣೆ ಅವರನ್ನು 'ನಿಮ್ಮ ಮೊದಲ ಪುಸ್ತಕ ಯಾಕಿನ್ನು ಪ್ರಿಂಟ್ ಆಗಿಲ್ಲ' ಎಂದು ಕೇಳಿದಾಗ, 'ನನಗೂ ಅದೇ ಪ್ರಶ್ನೆ ಇದೆ! ಪ್ರಕಾಶಕರು MOD (ರಕ್ಷಣಾ ಸಚಿವಾಲಯ)ದಿಂದ ಅನುಮತಿಗೆ ಕಾದಿದ್ದಾರೆ. ಇನ್ನೂ ಸಿಕ್ಕಿಲ್ಲ.' ಎನ್ನುತ್ತಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪುಸ್ತಕ ಉಲ್ಲೇಖವನ್ನು ಲೋಕಸಭೆಯಲ್ಲಿ ನೀಡಿದ್ದರಿಂದ ಅಲ್ಲಿ ಕೋಲಾಹಲವೇ ಏರ್ಪಟ್ಟಿತು. ಆದರೆ ಯಾಕೆ?! ವಿಷಯ ಸರಳವಾಗಿದೆ. ಚೀನಾದ ಸೈನಿಕರು ಗಾಲ್ವನ್ ಕಣಿವೆಯನ್ನು ಮುತ್ತುವರಿಯಲು ಆರಂಭಿಸಿದ್ದನ್ನು ಗಮನಿಸಿದ ಸೇನಾಪಡೆ ಮೇಜರ್ ನರಾವಣೆ ಅವರ ಗಮನಕ್ಕೆ ತರುತ್ತದೆ. ಅದನ್ನು ಪ್ರಧಾನಿ, ರಕ್ಷಣಾ ಮಂತ್ರಿಗಳ ಗಮನಕ್ಕೆ ತಂದು ಅವರ ಆದೇಶದಂತೆ ನಡೆಯುವುದು ನಿಯಮ. ಅದಕ್ಕಾಗಿ ನರಾವಣೆ ಅವರು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ, ವಿಷಯದ ತುರ್ತನ್ನು ತಿಳಿಸುತ್ತಾರೆ. ಅದಕ್ಕೆ ಸ್ಪಂದಿಸಲು ಪ್ರಧಾನಿಗಳು ಮತ್ತು ರಕ್ಷಣಾ ಮಂತ್ರಿ ತುಂಬಾ ಸಮಯ ತೆಗೆದುಕೊಂಡು ನಂತರ ರಕ್ಷಣಾ ಮಂತ್ರಿಗಳಾದ ರಾಜನಾಥ್ ಸಿಂಗ್ ಅವರು ಮೇಜರ್ ನರಾವಣೆ ಅವರಿಗೆ ಕರೆ ಮಾಡಿ 'ನಿಮಗೆ ಹೇಗೆ ಸರಿ ಅನಿಸತ್ತೋ ಅದನ್ನು ಮಾಡಿ' ಎಂದು ಮಾತು ಮುಗಿಸುತ್ತಾರೆ.
ಇದಿಷ್ಟನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಅವರು ದೇಶದ ರಕ್ಷಣೆಯ ವಿಚಾರದಲ್ಲಿ ಮೋದಿ ಸರ್ಕಾರವು ಎಷ್ಟು ನಿರ್ಲಕ್ಷ್ಯ ಮತ್ತು ಉಡಾಫೆತನಗಳನ್ನು ಮೈಗೂಡಿಸಿಕೊಂಡಿದೆ ಎಂಬುದನ್ನು ಸಂಸತ್ತಿನ ಮತ್ತು ಜನತೆಯ ಗಮನಕ್ಕೆ ತರಬಯಸುತ್ತಾರೆ. ಆದರೆ ಅದಕ್ಕೆ ಸಭಾಪತಿಗಳು ಸೇರಿದಂತೆ ಆಡಳಿತ ಪಕ್ಷದ ಮಂತ್ರಿಗಳು, ಸಂಸದರೆಲ್ಲಾ ದೊಡ್ಡ ಗಲಾಟೆ ಎಬ್ಬಿಸಿ 'ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ ಮತ್ತು ಮೋದಿ.. ಈ ಪುಸ್ತಕದ ಉಲ್ಲೇಖ' ಎಲ್ಲವನ್ನೂ ಕಡತಕ್ಕೆ ಸೇರಿಸಿದಂತೆ ಮಾಡುತ್ತಾರೆ. ತದನಂತರದಲ್ಲಿ ರಾಹುಲ್ ಗಾಂಧಿ ಅವರು ಈ ಪುಸ್ತಕದ ಪ್ರತಿಯನ್ನು ಸಂಸತ್ತಿಗೆ ತರುತ್ತಾರೆ. ಆದರೆ ಪ್ರಧಾನಿ ಮೋದಿಯವರು ಬರುವುದೇ ಇಲ್ಲ!!
ಶ್ರೀಸಾಮಾನ್ಯನಾದ ನನ್ನದೊಂದು ಸಂದೇಹ ಇಲ್ಲಿದೆ. ಪುಲ್ವಾಮಾ ದಾಳಿ, ಪೆಹಲ್ಗಾಮ್ ದಾಳಿ ಮತ್ತು ಗಾಲ್ವನ್ ಆಕ್ರಮಣ ಈ ರಾಷ್ಟ್ರ ಸಂರಕ್ಷಣೆಯ ವಿಚಾರಗಳಲ್ಲಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಪಾರದರ್ಶಕತೆಯನ್ನು ಉಳಿಸಿಕೊಂಡಿಲ್ಲ. ದೇಶವನ್ನು ಜೋಪಾನ ಮಾಡುವಲ್ಲಿ ಪದೇ ಪದೇ ಸೋತಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಡೆಸಿದ ಬಾಲಾಕೊಟ್ ವೈಮಾನಿಕ ದಾಳಿ ಮತ್ತು ಪೆಹಲ್ಗಾಮ್ ದಾಳಿಗರ ಪ್ರತಿಯಾಗಿ ನಡೆದ ಅಪರೇಷನ್ ಸಿಂಧೂರ್ ಹಾಗೂ ಗಾಲ್ವಾನ್ ವಿಚಾರದಲ್ಲಿ ಇವತ್ತಿಗೂ ಸ್ಪಷ್ಟವಾದ ಚಿತ್ರಣವನ್ನು ಒಕ್ಕೂಟ ಸರ್ಕಾರ ನೀಡಿಯೇ ಇಲ್ಲ. ಹಾಗಿದ್ದರೆ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಬಿಜೆಪಿ, ಮೋದಿ ಇಷ್ಟು ದಿನ ಮಾಡಿದ ಭಾಷಣಗಳು ಬರಿ ಬೊಗಳೆಗಳೆಯೇ ?! ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳು ಹೆದರುತ್ತಿರುವುದು ಯಾವುದಕ್ಕೆ?! ಅವರ ಯೋಗ್ಯತೆ ಬಯಲಾಗುತ್ತಿರುವುದಕ್ಕೋ ಅಥವಾ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ರಾಜಿಯಾಗಿರುವುದಕ್ಕೋ?!












Click it and Unblock the Notifications