ಡಿಸೆಂಬರ್ 2021 ರಿಂದ ಮಾಹಿತಿ ಸಚಿವಾಲಯವು 635 ವೆಬ್ ಲಿಂಕ್‌ಗಳನ್ನು ನಿರ್ಬಂಧಿಸಿದೆ: ಅನುರಾಗ್ ಸಿಂಗ್ ಠಾಕೂರ್
ನವದೆಹಲಿ,ಜುಲೈ 21: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಸೆಂಬರ್ 2021ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 URL ಗಳನ್ನು ಸಾರ್ವಜನಿಕ ಪ್ರದೇಶದಿಂದ ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ( ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಸಂಬಂಧಿತ ವಿಭಾಗದ ಅಡಿಯಲ್ಲಿ ಸಚಿವಾಲಯವು ಎಷ್ಟು ವೆಬ್ ಸೈಟ್ ಗಳು, URL ಗಳು ಮತ್ತು ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಿದೆ ಎಂದು ಕೇಳಿದ ಪ್ರಶ್ನೆಗೆ ಅನುರಾಗ್ ಸಿಂಗ್ ಠಾಕೂರ್ ಉತ್ತರಿಸಿದ್ದಾರೆ.

ಮಾಹಿತಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷದ ಜೂನ್ ವರೆಗೆ ಸಚಿವಾಲಯ ಮತ್ತು ಅದರ ವಿವಿಧ ಮಾಧ್ಯಮ ಘಟಕಗಳು ಹಾಗೂ ಸಂಸ್ಥೆಗಳಲ್ಲಿ 1,841 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ 94 ಹುದ್ದೆಗಳನ್ನು ಸೃಷ್ಟಿಸಿದ್ದು, ಬ್ಯಾಗ್ ಲಾಗ್ ಹುದ್ದೆಗಳು ಸೇರಿದಂತೆ ಕಳೆದ ಐದು ವರ್ಷಗಳಲ್ಲಿ 446 ಹುದ್ದೆಗಳನ್ನ ಭರ್ತಿ ಮಾಡಲಾಗಿದೆ.












Click it and Unblock the Notifications