30 ವರ್ಷ ದಾಟಿದ ಮಹಿಳಾವಾದಿಗೆ ಎಂಥಾ ವರ ಬೇಕಂತೆ ನೋಡಿ!
ಹುಡುಗ ಬೆಳ್ಳಗಿರಬೇಕು, ಎತ್ತರವಿರಬೇಕು, ದಪ್ಪ ಇರಬಾರದು, ಒಳ್ಳೆಯ ಸಂಬಳವಿರಬೇಕು ಎಂದು ಮ್ಯಾಟ್ರಿಮೊನಿಯಲ್ಲಿ ಬರೆಯುವುದು ನೋಡಿದ್ದೀರಿ ಆದರೆ ಇಲ್ಲೊಬ್ಬ ಮಹಿಳೆ ಮದುವೆಯಾಗುವ ವರ ಹೇಗಿರಬೇಕು ಎಂದು ಜಾಹೀರಾತು ನೀಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಆಂಗ್ಲ ಪತ್ರಿಕೆಯೊಂದರಲ್ಲಿ ವರ ಬೇಕು ಎಂದು ನೀಡಿರುವ ಜಾಹೀರಾತಿನಲ್ಲಿ ವರ 25-28 ವರ್ಷದೊಳಗಿನವನಾಗಿರಬೇಕು, ಆತನಿಗೆ ಅಡುಗೆ ಮಾಡಲು ಬರಬೇಕು, ಆತ ತೇಗಬಾರದು, ಆತ ಹೂಸು ಬಿಡಬಾರದು ಎನ್ನುವ ಬೇಡಿಕೆಗಳನ್ನು ಮಹಿಳೆ ಇರಿಸಿದ್ದಾರೆ.
ಇವೆಲ್ಲಾ ಕಂಡೀಷನ್‌ಗಳನ್ನು ನೋಡಿದರೆ ಯುವಕರು ಮದುವೆಯೇ ಬೇಡ ಎಂಬ ನಿರ್ಧಾರಕ್ಕೆ ಬರುವುದರಲ್ಲಿ ಆಶ್ಚರ್ಯವೇ ಇಲ್ಲ. ಕಟ್ಟರ್ ಮಹಿಳಾವಾದಿಯಾಗಿರುವ 30 ವರ್ಷ ಮೇಲ್ಪಟ್ಟ ಗಿಡ್ಡ ತಲೆಕೂದಲಿನ, ಬಂಡವಾಳಶಾಹಿಗಳ ವಿರುದ್ಧ ಹೋರಾಡುವ ಸಾಮಾಜಿಕ ಕಾರ್ಯಕರ್ತೆಗೆ ಸೂಕ್ತ ವರ ಬೇಕಾಗಿದ್ದಾರೆ ಎನ್ನುವ ಜಾಹೀರಾತು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.

ಸಾಮಾನ್ಯವಾಗಿ ಮಹಿಳೆಯರು ಜಾತಿ, ಗುಣ, ಬಣ್ಣ, ಆಸ್ತಿ ವಿಚಾರದಲ್ಲಿ ಹಲವು ಕಂಡೀಷನ್‌ಗಳನ್ನು ಇಟ್ಟುಕೊಂಡರೆ ಈ ಮಹಿಳೆಯ ಕಂಡೀಷನ್ ಬೇರೆಯದ್ದೇ ಆಗಿದೆ.
ವರನ ವಯಸ್ಸು ಕಡ್ಡಾಯವಾಗಿ 25ರಿಂದ 28ವರ್ಷದೊಳಗೆ ಇರಬೇಕು, ಅತ್ಯುತ್ತಮ ಮನೆಯನ್ನು ಹೊಂದಿರಬೇಕು. ಆತನ ತಂದೆ-ತಾಯಿಗೆ ಅವನು ಒಬ್ಬನೇ ಮಗನಾಗಿರಬೇಕು.

ಕನಿಷ್ಠ 20 ಎಕರೆ ಜಾಗ, ತೋಟದ ಮನೆ ಇರಬೇಕು. ಉದ್ಯಮಿಯಾಗಿದ್ದು, ಅಡುಗೆ ಮಾಡಲು ಬಲ್ಲವನಾಗಿರಬೇಕು ಎಂದು ತಿಳಿಸಲಾಗಿದೆ. ಬಹುಶಃ ಇದಿಷ್ಟೂ ಬೇಡಿಕೆಗಳಿಗೆ ಸೂಕ್ತನಾದವನು ಅಪ್ಪಿತಪ್ಪಿ ಸಿಗಬಹುದು ಆದರೆ, ತೇಗದ, ಹೂಸು ಬಿಡದ ವ್ಯಕ್ತಿ ಸಿಗುವುದು ಕಷ್ಟ ಎಂದು ಎಲ್ಲರೂ ಹಾಸ್ಯ ಮಾಡಿದ್ದಾರೆ.












Click it and Unblock the Notifications