Chandrayaan-3 : ಚಂದ್ರಯಾನ-3 ಉಡಾವಣೆಯೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾದ ಭಾರತ

ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3ಕ್ಕೆ ದಿನಗಣನೆ ಆರಂಭವಾಗಿದೆ. ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಲು ಇಸ್ರೋ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜುಲೈ 14 ರಂದು ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ.

ಇದುವರೆಗೂ ಚಂದ್ರನ ಮೇಲ್ಮೈನಲ್ಲಿ ಮೂರು ದೇಶಗಳು ಮಾತ್ರ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದು, ಭಾರತ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಜಿತೇಂದ್ರ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Indias Chandrayaan-3 Launch

ಈ ಬಗ್ಗೆ ಮಾತನಾಡಿದ ನಂತರ, ಜಿತೇಂದ್ರ ಸಿಂಗ್, "ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಹತ್ವದ ಒಪ್ಪಂಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಭಾರತಕ್ಕಿಂತ ಮುಂಚೆಯೇ ತಮ್ಮ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿದ ದೇಶಗಳು ಇಂದು ನಮ್ಮನ್ನು ಸಮಾನ ಸಹಯೋಗಿಯಾಗಿ ನೋಡುತ್ತಿವೆ" ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ್ದು, ಚಂದ್ರನ ಅಂಗಳದಲ್ಲಿ ಉಪಗ್ರಹ ನೌಕೆಯನ್ನು ಇಳಿಸಲು ಕಾಯುತ್ತಿದೆ" ಎಂದು ಸಚಿವರು ಹೇಳಿದ್ದಾರೆ.

14 ದಿನಗಳ ಕಾಲ ಕೆಲಸ

ಚಂದ್ರಯಾನ-3 ಚಂದ್ರಯಾನ-2 ರ ಮುಂದುವರೆದ ಭಾಗವಾಗಿದೆ. ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮತ್ತು ರೋವಿಂಗ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ಸಿಂಗ್ ಹೇಳಿದರು. ಚಂದ್ರನ ಕಕ್ಷೆಯನ್ನು ಪ್ರವೇಶಿಸಲು ಬಾಹ್ಯಾಕಾಶ ನೌಕೆಗೆ ಅಗತ್ಯವಾದ ಸಂಕೀರ್ಣ ಮಿಷನ್ ಪ್ರೊಫೈಲ್ ಅನ್ನು ಅತ್ಯಂತ ನಿಖರವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

"ಚಂದ್ರಯಾನ-3 ಅನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ, ಆರು ಚಕ್ರಗಳನ್ನು ಹೊಂದಿರುವ ರೋವರ್ ಚಂದ್ರನ ಮೇಲೆ 14 ದಿನಗಳವರೆಗೆ ಕೆಲಸ ಮಾಡುವ ನಿರೀಕ್ಷೆಯಿದೆ. ರೋವರ್‌ನಲ್ಲಿ ಬಹು ಕ್ಯಾಮೆರಾಗಳ ಬೆಂಬಲದೊಂದಿಗೆ, ನಾವು ಚಿತ್ರಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ," ಎಂದು ಹೇಳಿದರು.

"ಚಂದ್ರಯಾನ-3 ಮಿಷನ್‌ನ ಪ್ರಾಥಮಿಕ ಉದ್ದೇಶಗಳು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವುದು, ಚಂದ್ರನ ಮೇಲೆ ರೋವರ್ ರೋವಿಂಗ್ ಬಳಸಿಕೊಂಡು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುವುದು" ಎಂದು ಸಿಂಗ್ ಹೇಳಿದರು.

ಚಂದ್ರನ ಮೇಲ್ಮೈನಲ್ಲಿ ನೀರಿರುವುದನ್ನು ಕಂಡುಹಿಡಿದಿದ್ದ ಚಂದ್ರಯಾನ-1

ಚಂದ್ರಯಾನ ಮಿಷನ್‌ಗಳ ಸರಣಿಯಲ್ಲಿ ಮೊದಲನೆಯದು ಚಂದ್ರಯಾನ -1 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಉಪಸ್ಥಿತಿಯನ್ನು ಕಂಡುಹಿಡಿದ ಕೀರ್ತಿಗೆ ಪಾತ್ರವಾಗಿದೆ ಎಂದು ಸಚಿವರು ನೆನಪಿಸಿಕೊಂಡರು, ಇದು ಜಗತ್ತಿಗೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದೆ.

ಯುನೈಟೆಡ್ ಸ್ಟೇಟ್ಸ್‌ನ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ನಂತಹ ಏಜೆನ್ಸಿಗಳು ಕೂ ಇಸ್ರೋದ ಈ ಸಾಧನೆಯಿಂದ ಆಕರ್ಷಿತರಾದರು. ಚಂದ್ರಯಾನ-3 ಮುಂದಿನ ಹಂತದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು. ಬಾಹ್ಯಾಕಾಶ ನೌಕೆಯು ತನ್ನ ಉಡಾವಣೆಗೆ ಇಸ್ರೋ ಅಭಿವೃದ್ಧಿಪಡಿಸಿದ ಲಾಂಚ್ ವೆಹಿಕಲ್ ಮಾರ್ಕ್-3 ಅನ್ನು ಬಳಸುತ್ತದೆ ಎಂದರು.

ಚಂದ್ರಯಾನ-3 ರ ಉಡಾವಣೆಯ ಬಗ್ಗೆ ದೇಶಾದ್ಯಂತ ಭಾರಿ ಕುತೂಹಲವಿದೆ, ಸೆಪ್ಟೆಂಬರ್ 6, 2019 ರಂದು ಚಂದ್ರಯಾನ-2 ಮಿಷನ್ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆ ಇಳಿಯುವ ಸಂದರ್ಭದಲ್ಲಿ ಕೇವಲ 13 ನಿಮಿಷಗಳ ನಂತರ ಒಂದು ಲೋಪದಿಂದಾಗಿ ನಿರೀಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+