ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸುವ ಚೀನಾ ಯತ್ನಕ್ಕೆ ತಡೆ

ಚೀನಾ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಪ್ರವೇಶಿಸಲು ಮಾಡಿದ ಯತ್ನವನ್ನು ಮಂಗಳವಾರ ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಲಡಾಕ್ ನ ಪನ್ ಗಾಂಗ್ ಸರೋವರದ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಿ ಸೈನಿಕರು ಯತ್ನಿಸಿದಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಎರಡೂ ಕಡೆಯ ಜನರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೀಪಲ್ಸ್ ಲಿಬರೇಷನ್ ಆರ್ಮಿಯು (ಚೀನಾ ಸೇನೆ) ಎರಡು ಬಾರಿ ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸಲು ಯತ್ನಿಸಿದೆ. ಎರಡೂ ಸಂದರ್ಭದಲ್ಲೂ ಜಾಗೃತವಾಗಿದ್ದ ಭಾರತೀಯ ಸೇನೆಯು ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Indian Troops Foil China's Incursion Bid In Ladakh: Report

ಮಾನವ ಸರಪಳಿ ರಚಿಸುವ ಮೂಲಕ ಪ್ರಯತ್ನಕ್ಕೆ ಭಾರತದ ಯೋಧರು ತಡೆಯೊಡ್ಡಿದ ವೇಳೆ ಚೀನಾ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ಗಡಿ ಭದ್ರತಾ ಪಡೆಯಿಂದಲೂ ತಕ್ಕ ಪ್ರತ್ಯುತ್ತರ ನೀಡಲಾಗಿದೆ.

ಎರಡೂ ಕಡೆಯ ಅಧಿಕಾರಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ನವದೆಹಲಿಯಲ್ಲಿರುವ ಸೇನಾ ವಕ್ತಾರರು ನಿರಾಕರಿಸಿದ್ದಾರೆ. ಅಮೆರಿಕದಿಂದ ಖರೀದಿಸಿದ ದೋಣಿ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಹಾಯದಿಂದ ಭಾರತೀಯ ಯೋಧರು ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+