ಅಬ್ಬಬ್ಬಾ ಲಾಟರಿ.. ಸಾರ್ವಕಾಲಿಕ ದಾಖಲೆ ಬರೆದ ಷೇರು ಮಾರುಕಟ್ಟೆ: ಹೂಡಿಕೆದಾರರಿಗೆ ಭರ್ಜರಿ ಲಾಭ!

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆ ಬರೆದಿದೆ. ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದ್ದ ಭಾರತೀಯ ಷೇರು ಮಾರುಕಟ್ಟೆಗೆ ಜನವರಿಯಲ್ಲಿ ಆಘಾತ ಎದುರಾಗಿತ್ತು. ಅದಾನಿ ಸಮೂಹದ ಬಗ್ಗೆ ಹಿಂಡನ್ ಬರ್ಗ್ ವರದಿ ಪರಿಣಾಮ ಬೀರಿತ್ತು. ಹೀಗಾಗಿ ದಿಢೀರ್ ಭಾರತದ ಷೇರು ಮಾರುಕಟ್ಟೆ ಕುಸಿದಿತ್ತು. ಆದ್ರೆ ಈಗ ಫಿನಿಕ್ಸ್‌ನಂತೆ ಕಂಬ್ಯಾಕ್ ಮಾಡಿದೆ.

ಭಾರತ ಈಗಾಗಲೇ ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದರಲ್ಲೂ ನಮ್ಮ ದೇಶವನ್ನ ಶೀಘ್ರದಲ್ಲೇ 5 ಟ್ರಿಲಿಯನ್ ಆರ್ಥಿಕತೆ ಸ್ಥಾನಕ್ಕೆ ಕೊಂಡೊಯ್ಯಲು ಕೇಂದ್ರದಿಂದ ಪ್ರಯತ್ನಗಳು ಸಾಗಿವೆ. ಇದೇ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಭಾರಿ ಲಾಭ ಗಳಿಸಿದ್ದು, ಇಂದು ತನ್ನ ಸಾರ್ವಕಾಲಿಕ ಮಟ್ಟ ತಲುಪಿದೆ. ಭಾರತ ಬಂಡವಾಳ ಮಾರುಕಟ್ಟೆ ಪ್ರಮುಖ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್​ಎಸ್​ಇ ನಿಫ್ಟಿ (ಇದನ್ನ ನಿಫ್ಟಿ 50 ಎಂದು ಕೂಡ ಕರೆಯಲಾಗುತ್ತದೆ) ಹೊಸ ದಾಖಲೆ ಬರೆದಿವೆ. ಇದೇ ಮೊದಲನೇ ಬಾರಿಗೆ ಬಿಎಸ್​ಇ ಸೆನ್ಸೆಕ್ಸ್ 63,915ನ್ನು ತಲುಪಿದರೆ, ಎನ್​ಎಸ್​ಇ ನಿಫ್ಟಿ 18,972 ಅಂಕದ ಮೂಲಕ ವಹಿವಾಟು ಮುಗಿಸಿದೆ.

Indian Stock Market At All Time High: Sensex Cross 64000 and Nifty Touched 19000

ಅದಾನಿ ಸಂಸ್ಥೆಗೆ ಗುಡ್ ನ್ಯೂಸ್!

ಇಂದು ಬೆಳಗ್ಗೆಯೇ ಹೂಡಿಕೆದಾರರಿಗೆ ಸಿಹಿಸುದ್ದಿ ಸಿಕ್ಕಿತ್ತು, ಷೇರು ಮಾರುಕಟ್ಟೆ ಶುರುವಾದ ತಕ್ಷಣ ಗೂಳಿ ತನ್ನ ಅಬ್ಬರ ಮುಂದುವರಿಸಿತ್ತು. ನೋಡ ನೋಡುತ್ತಲೇ ಬಹುತೇಕ ಎಲ್ಲಾ ವಲಯದಲ್ಲೂ ಷೇರು ಮಾರುಕಟ್ಟೆ ಅಬ್ಬರಿಸಿತ್ತು. ಅದರಲ್ಲೂ ಅದಾನಿ ಸಮೂಹ ಸಂಸ್ಥೆ ಷೇರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಇಂದು ಷೇರು ಸೂಚ್ಯಂಕ ಹೊಸ ಇತಿಹಾಸ ಸೃಷ್ಟಿಸಿದೆ. ಅದಾನಿ ಎಂಟರ್‌ಪ್ರೈಸಸ್ 117 ಅಂಕ ಏರಿಕೆ ಕಂಡು 2,402 ಅಂಕದೊಂದಿಗೆ ವಹಿವಾಟು ಮುಗಿಸಿತು. ಇನ್ನು ಅದಾನಿ ಪೋರ್ಟ್ಸ್ ಕೂಡ ಭಾರಿ ಏರಿಕೆ ಕಂಡಿದ್ದು 756 ಅಂಕಗಳೊಂದಿಗೆ ವಹಿವಾಟು ಮುಗಿಸಿದೆ. ಇಷ್ಟು ಮಾತ್ರವಲ್ಲ ಅದಾನಿ ಸಮೂಹದ ಬಹುತೇಕ ಎಲ್ಲ ಷೇರುಗಳು ಇಂದು ಅಬ್ಬರಿಸಿವೆ.

ಎಚ್‌ಡಿಎಫ್‌ಸಿ ಷೇರುಗಳ ವಿಲೀನ ಪ್ರಕ್ರಿಯೆ

ಇಷ್ಟು ಮಾತ್ರವಲ್ಲ ನಿಫ್ಟಿ ಸೂಚ್ಯಂಕದಲ್ಲಿನ 50 ಕಂಪನಿಗಳ ಪೈಕಿ ಅದಾನಿ ಎಂಟರ್​ಪ್ರೈಸಸ್ ಆತಿಹೆಚ್ಚು ಲಾಭ ಮಾಡಿದೆ. ಅದಾನಿ ಕಂಪನಿ ಷೇರು ಬುಧವಾರ ಬೆಳಗಿನ ವಹಿವಾಟಿನಲ್ಲಿ ಶೇ. 4.6ರಷ್ಟು ಹೆಚ್ಚಾಗಿತ್ತು. ಅಂತಿಮವಾಗಿ ಶೇ. 5.15ರಷ್ಟು ಏರಿಕೆ ಕಾಣುವ ಮೂಲಕ 117 ಅಂಕ ಗಳಿಸಿ 2,402ರಲ್ಲಿ ವಹಿವಾಟನ್ನು ಭರ್ಜರಿಯಾಗಿ ಮುಗಿಸಿದೆ. ಜೊತೆಗೆ ವಿಲೀನಕ್ಕೆ ಸಿದ್ಧವಾಗಿರುವ ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕಂಪನಿಗಳ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಪರಿಣಾಮ ಕೂಡ ಇಂದು ಷೇರುಪೇಟೆ ಮೇಲೆ ಆಗಿದ್ದು, ಭಾರತದ ಬಂಡವಾಳ ಮಾರುಕಟ್ಟೆ ಇಂದು ಹೊಸ ಇತಿಹಾಸವನ್ನೇ ಬರೆದಿದೆ.

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ

1) ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಗ್ಗೆ 2022ರ ಏಪ್ರಿಲ್ 4ರಂದು ಘೋಷಣೆ.

2) ವಿಲೀನ ಪ್ರಕ್ರಿಯೆ ಮೂಲಕ ಶೇಕಡಾ 41ರಷ್ಟು ಪಾಲು ಪಡೆಯಲಿದೆ ಎಚ್‌ಡಿಎಫ್‌ಸಿ.

3) ವಿಲೀನದ ನಂತರ ಸಂಯೋಜಿತ ಕಂಪನಿ ಷೇರುಗಳು ಜುಲೈ 17ರಿಂದ ವಹಿವಾಟು ಆರಂಭ ಮಾಡಲಿವೆ.

4) ವಿಲೀನದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳಿಗೆ ಸಿಗಲಿದೆ ಎಚ್‌ಡಿಎಫ್‌ಸಿಯ 25 ಷೇರುಗಳು.

5) ಜುಲೈ 1ರಿಂದ ಎಚ್‌ಡಿಎಫ್‌ಸಿ ವಿಲೀನ ಜಾರಿಗೆ ಬರುವ ಕುರಿತು ಸಮೂಹದ ಅಧ್ಯಕ್ಷರಿಂದ ಮಾಹಿತಿ.

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆ ಕೂಡ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಹಾಗೇ ಭಾರತ ಬಂಡವಾಳ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ & ಎನ್​ಎಸ್​ಇ ನಿಫ್ಟಿ ದಾಖಲೆ ಬರೆದಿರುವುದು ವಿಶೇಷ. ಇದೇ ಮೊದಲ ಬಾರಿ ಬಿಎಸ್​ಇ ಸೆನ್ಸೆಕ್ಸ್ 63,915 ತಲುಪಿದರೆ, ಎನ್​ಎಸ್​ಇ ನಿಫ್ಟಿ 18,972 ಅಂಕದ ಮೂಲಕ ತನ್ನ ವಹಿವಾಟು ಮುಗಿಸಿದೆ. ಹಾಗೇ ಮುಂದಿನ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಇನ್ನಷ್ಟು ಜೋರಾಗುವ ನಿರೀಕ್ಷೆ ಕೂಡ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+