Indian Railway: ಪ್ರಮುಖ ಮಾರ್ಗಗಳ ರೈಲುಗಳಿಗೆ 'ಕವಚ 4.0' ಅಳವಡಿಕೆ

ನವದೆಹಲಿ, ಜನವರಿ 02: ಭಾರತಾದ್ಯಂತ ರೈಲು ಸಂಪರ್ಕ ಸಾಧಿಸಿರುವ ರೈಲ್ವೆ ಇಲಾಖೆಯು ಸುರಕ್ಷತಾ ಕಾರ್ಯಾಚರಣೆಗಾಗಿ ರೈಲು ಸಂರಕ್ಷಣಾ ವ್ಯವಸ್ಥೆಯಾದ 'ಕವಚ' 2020ರಲ್ಲಿ ಅಳವಡಿಕೆ ಆಯಿತು. ಇದೀಗ ಹೊಸ ವರ್ಷದ ಹೊತ್ತಿನಲ್ಲಿ ಇಲಾಖೆಯು 'ಕವಚ 4.0' ಹೊಸ ಮಾದರಿ ಪರಿಚಯಿಸಲಿದೆ. ಇದಕ್ಕೆ ಹಳೆಯ ಕವಚ ಮಾದರಿಯ ರೈಲುಗಳು ಅಪ್‌ಗ್ರೇಡ್ ಆಗಲಿವೆ.

ಸುರಕ್ಷಿತ ರೈಲು ಕಾರ್ಯಾಚರಣೆಗೆ ಈ ಅತ್ಯಾಧುನಿಕ ಕವಚ ವ್ಯವಸ್ಥೆ ಅಗತ್ಯವಾಗಿದೆ. ಈ ವ್ಯವಸ್ಥೆಯನ್ನು ರೈಲು ಇಂಜಿನ್‌ಗೆ ಅಳವಡಿಕೆ ಆಗಲಿದೆ. 'ಕವಚ 4.0' ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ದೇಶದ ಕೆಲವು ಪ್ರಮುಖ ಮಾರ್ಗಗಳಲ್ಲಿ ಓಡಾಡುವ ರೈಲುಗಳಿಗೆ ಅಳವಡಿಸಲು ನಿರ್ಧರಿಸಿದೆ. ಇದರಿಂದ ರೈಲುಗಳ ಕಾರ್ಯಾಚರಣೆ, ದಕ್ಷತೆ ಹೆಚ್ಚಲಿದೆ ಎಂಬ ರೈಲ್ವೆ ಇಲಾಖೆ ತಿಳಿಸಿದೆ.

Indian Railways will deploy to All Trains Kavach 4 0 Automatic Train Protection System

ಸುಧಾರಿತ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಾಗಿರುವ ಈ ಕವಚ ಅಪಘಾತ ತಡೆಗೆ, ಕಾರ್ಯಾಚರಣೆ ವೇಳೆ ಲೋಕೋ ಪೈಲಟ್ (ಮಾನವ ದೋಷ) ದೋಷವನ್ನು ತಡೆಯಲು ಸಹಾಯ ಮಾಡುತ್ತದೆ. ಸುರಕ್ಷಿತ ರೈಲು ಡೆರಹಿತ ರೈಲು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ. ಅಧಿಕಾರಿಗಳ ಪ್ರಕಾರ, ಕವಾಚ್‌ನ ಹಿಂದಿನ ಆವೃತ್ತಿಗಳನ್ನು ಹೊಂದಿರುವ ಎಲ್ಲಾ ಇಂಜಿನ್‌ಗಳನ್ನು ಕವಚ 4.0 ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ.

ಈ ಹೊಸ ಕವಚ 4.0 ವ್ಯವಸ್ಥೆ ಅಳವಡಿಕೆಗೆ ಮಾಲ್ಡಾ ಟೌನ್‌ನಿಂದ ದಿಬ್ರುಗಢದವರೆಗೆ ಸುಮಾರು 1,966 ಕಿಲೋ ಮೀಟರ್‌ ಮಾರ್ಗದಲ್ಲಿ ಚಲಿಸುವ ರೈಲುಗಳಿಗೆ ಅಳವಡಿಸಲು ತಿರ್ಮಾನಿಸಲಾಗಿದೆ. ರೈಲ್ವೆ ಕಾರ್ಯಾಚರಣೆ ಸುಧಾರಣೆಗೊಳ್ಳಲಿದೆ. ಸುರಕ್ಷತೆಯಲ್ಲಿ ಮತ್ತಷ್ಟು ನಿಖರತೆ ಕಂಡುಕೊಂಡಂತಾಗಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳು ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಇಲಾಖೆ ಕವೇಲ ಕವಚ 4.0 ಮಾತ್ರವಲ್ಲದೇ ವಿವಿಧ ಸುಧಾರಿತ ವ್ಯವಸ್ಥೆಗಳನ್ನು ಪರಿಚಯಿಸುತ್ತಿದೆ. ಎಂಜಿನ್‌ನಲ್ಲಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆಯಿಂದ ಲೊಕೊಮೊಟಿವ್ ಡೇಟಾವನ್ನು ಸಿಗ್ನಲಿಂಗ್ ಸಿಸ್ಟಮ್‌ಗಳೊಂದಿಗೆ ಸಿಂಕ್ರೊನೈಸ್ ಮಾಡಲಿದೆ. ರೈಲುಗಳು ಸದ್ಯ ಎಲ್ಲಿವೆ, ರೈಲು ಸಂಚಾರದ ದಿಕ್ಕು, ಮೇಲ್ವಿಚಾರಣೆ ಮಾಡುತ್ತದೆ. ನಿಖರ ಮಾಹಿತಿ ನಿಲ್ದಾಣಗಳಿಗೆ ಒದಗಿಸುತ್ತದೆ.

ಒಟ್ಟಾರೆಯಾಗಿ ಭಾರತೀಯ ರೈಲ್ವೆಯಲ್ಲಿ ಕವಚ ಸಮಗ್ರ ಸುರಕ್ಷತೆ ಒದಗಿಸಲಿದೆ. ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ, ದಕ್ಷ ಕಾರ್ಯಾಚರಣೆ ನೀಡಲಿದೆ. ಭವಿಷ್ಯದಲ್ಲಿ ದೇಶದ ಎಲ್ಲ ರೈಲುಗಳಿಗೂ ಈ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆ ಆಗಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+