Vande Bharat Sleeper: ಟ್ರ್ಯಾಕ್‌ಗೆ ಇಳಿಯಲಿವೆ 200 ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು, ಡಿಸೆಂಬರ್ 27: ಭಾರತೀಯ ರೈಲು ಸಾರಿಗೆಯಲ್ಲಿ ಪ್ರಯಾಣಿಕರಿಗೆ ಐಶಾರಾಮಿ ಪ್ರಯಾಣ ಸೇವೆ ನೀಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಹೊಸ ಮಾದರಿ ರೈಲು ಸೇವೆ ಸಜ್ಜಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗೆ ಇಳಿಯಲಿವೆ. ಈಗಾಗಲೇ ಪ್ರಾಯೋಗಿಕ ಸಂಚಾರ, ಪರೀಕ್ಷೆಗಳು ಪೂರ್ಣಗೊಂಡಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಆರಂಭಕ್ಕೆ ದಿನಗಣನೇ ಆರಂಭವಾಗಿದೆ. ಇದರ ಬೆನ್ನಲ್ಲೆ ಭಾರತೀಯ ರೈಲ್ವೆ ಇಲಾಖೆ 200 ರೈಲು ಪರಿಚಯಿಸಲು ಸಜ್ಜಾಗಿದೆ.

ದೇಶದ ಮೂಲೆ ಮೂಲೆಗಳಲ್ಲಿ ಪಟ್ಟಣ ಪ್ರದೇಶಗಳಿಗೂ ರೈಲು ಸಾರಿಗೆ ಸಂಪರ್ಕವಿದೆ. ದೂರದ ಪ್ರಯಾಣಕ್ಕೆ ಅನುಕೂಲಕ ಸಾರಿಗೆ ನೀಡುವ ವಂದೇ ಭಾರತ್ ಎಕ್‌ಪ್ರೆಸ್‌ ಸ್ಲೀಪರ್ ರೈಲು ಕಾರ್ಯಾಚರಣೆಗೆ ದಿನಗಣನೆ ಸಜ್ಜಾಗಿದೆ. ಆರಂಭಿಕ ಹಂತದಲ್ಲಿ ಕೆಲವೇ ಕೆಲವು ರೈಲು ಟ್ರ್ಯಾಕ್‌ಗೆ ಇಳಿಸಲು ಸಜ್ಜಾಗಿದ್ದ ಕೇಂದ್ರ ಸರ್ಕಾರ ಇದೀಗ 200 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲು ಮುಂದಾಗಿದೆ.

Indian Railways to launch 200 Vande Bharat Sleeper Trains When operations features schedule

ಭಾರತೀಯ ರೈಲ್ವೆಯು 200 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ದೇಶದ ವಿವಿಧ ಪ್ರಮುಖ ನಗರಗಳ ಮಧ್ಯೆ ಆರಂಭಿಸಲು ಸಜ್ಜಾಗಿದೆ. ಪ್ರಯಾಣಿಕರಿಗೆ ಐಶಾರಾಮಿ ಆರಾಮದಾಯಕ ಅನುಭವ ನೀಡಲಿದೆ. ಹೊಸ ಸ್ಲೀಪರ್ ರೈಲುಗಳು ದೀರ್ಘ ಹಾಗೂ ಮಧ್ಯಮ ದೂರದ ಮಾರ್ಗಗಳನ್ನು ಕ್ರಮಿಸಲು, ಮುಖ್ಯವಾಗಿ ರಾತ್ರಿ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ಪ್ರಮುಖ ರೈಲುಗಳಾಗಲಿವೆ.

ವಿಬಿ ಸ್ಲೀಪರ್ ರೈಲು: ಸಿಮ್ಯುಲೇಶನ್ ಪ್ರಯೋಗ

ಬೆಂಗಳೂರು ಮೂಲಕ BEML ಕಂಪನಿಯು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಲಾಗಿದೆ. ಈ ರೈಲು ಚೆನ್ನೈನಿಂದ ಸಿಮ್ಯುಲೇಶನ್ ಪರೀಕ್ಷೆಗೆ ಕಳುಹಿಸಲಾಗಿದೆ. ಮಧ್ಯಪ್ರದೇಶಕ್ಕೆ ಚೆನ್ನೈನಿಂದ ರೈಲು ಎರಡು ವಾರಗಳ ಹಿಂದೆ ಕಳುಹಿಸಲಾಗಿದೆ. ಲಕ್ನೋದಲ್ಲಿನ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (RDSO) ಮೇಲ್ವಿಚಾರಣೆ ಮಾಡಲಿದೆ.

ವಿವಿಧ ಪರೀಕ್ಷೆಗಳು ನಡೆಯಲಿದ್ದು, ಗಂಟೆಗೆ 130 ಕಿಮೀಯಿಂದ 180 ಕೀಮೀವರೆಗೂ ರೈಲು ಓಡಿಸುವ ಮೂಲಕ ಸುರಕ್ಷತೆ, ದಕ್ಷತೆ ಪರೀಕ್ಷೆ ಮಾಡಲಾಗುತ್ತದೆ. ಒಟ್ಟು 16 ಕೋಚ್‌ಗಳನ್ನು ಒಳಗೊಂಡಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗಲಿದೆ. ಬಳಿಕವೇ ದೇಶದಲ್ಲಿ ಜನವರಿ ಹೊತ್ತಿಗೆ ಸಾರ್ವಜನಿಕ ಸೇವೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ದೇಶದಲ್ಲಿ ಒಂದೇ ಭಾರಿಗೆ ಬರೋಬ್ಬರಿ 200 ಸ್ಲೀಪರ್ ರೈಲುಗಳನ್ನು ಪರಿಚಯಿಸುವ ಯೋಜನೆ ಬೃಹತ್ ಉಪಕ್ರಮವಾಗಿದೆ. ಸದ್ಯ ಹೊಸ ವರ್ಷಕ್ಕೆ 10 ವಂದೇ ಭಾರತ್ ಸ್ಲೀಪರ್ ರೈಲುಗಳು ಕಾರ್ಯಾಚರಣೆಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಈ ವಂದೇ ಭಾರತ್ ಸ್ಲೀಪರ್ ರೈಲುಗಳು ವಿಶೇಷ ರೀತಿಯಲ್ಲಿ ವಿನ್ಯಾಸಗೊಂಡಿವೆ. ವೇಗದ ಪ್ರಯಾಣ ಸೇವೆ ಒದಗಿಸಲಿವೆ. ರೈಲು ಸೇವೆಯಲ್ಲಿ ಸ್ಲೀಪರ್ ರೈಲುಗಳು ಕ್ರಾಂತಿ ಉಂಟು ಮಾಡುವ ನಿರೀಕ್ಷೆ ಇವೆ. ಜನವರಿಯಲ್ಲಿ ಹತ್ತು ರೈಲುಗಳು ಸೇವೆಗೆ ನೀಯೋಜನೆಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+