2027ರ ಜನವರಿಯಿಂದ ಕರ್ನಾಟಕದ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ, ಹೆಸರು ಬದಲಾವಣೆ!
ಬೆಂಗಳೂರು: ರಾಜ್ಯದಿಂದ ಹೊರಡುವ ಹಾಗೂ ವಿವಿಧ ಮಾರ್ಗದಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಹೆಸರು ಮತ್ತು ರೈಲು ಸಂಚಾರದಲ್ಲಿ ಮುಂದಿನ ವರ್ಷ 2027ರಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಸೇರಿದಂತೆ ಆಯಾ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.
* ಮುಂಬೈ-ಹೊಸಪೇಟೆ ಸೂಪರ್‌ಫಾಸ್ಟ್ ರೈಲು ಇನ್ನು ಮುಂದೆ ಮೇಲ್/ಎಕ್ಸ್‌ಪ್ರೆಸ್ ಆಗಿ ಸಂಚಾರ ಮಾಡಲಿದೆ. ಹೌದು, ರೈಲು ಸಂಖ್ಯೆ 11139/11140 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಮುಂಬೈ-ಹೊಸಪೇಟೆ-ಸಿಎಎಂಟಿ ಮುಂಬೈ ಸೂಪರ್‌ಫಾಸ್ಟ್ ರೈಲನ್ನು ಮೇಲ್/ಎಕ್ಸ್‌ಪ್ರೆಸ್ ರೈಲಾಗಿ ಬದಲಾಯಿಸಿರುವುದಾಗಿ ಮಧ್ಯ ರೈಲ್ವೆ ತಿಳಿಸಿದೆ.

ಈ ಬದಲಾವಣೆಯು2027 ಜನವರಿ 01 ರಿಂದ ಎರಡೂ ಕಡೆಗಳಿಂದ ಅಂದರೆ ಸಿಎಸ್‌ಎಂಟಿ ಮುಂಬೈ ಮತ್ತು ಹೊಸಪೇಟೆಯಿಂದ ಅನ್ವಯವಾಗಲಿದೆ. ರೈಲು ಸಂಖ್ಯೆಗಳಲ್ಲಿ (11139/11140) ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಚಿಗುಡ-ಅಶೋಕಪುರಂ ರೈಲು ಪರಿಷ್ಕರಣೆ
ಕಾಚಿಗುಡ-ಅಶೋಕಪುರಂ-ಕಾಚಿಗುಡ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12785/12786) ಸಂಖ್ಯೆಯನ್ನು 17685/17686 ಎಂದು ಪರಿಷ್ಕರಿಸಲಾಗಿದೆ. ಸೂಪರ್‌ಫಾಸ್ಟ್ ರೈಲನ್ನು ಮೇಲ್/ಎಕ್ಸ್‌ಪ್ರೆಸ್ ರೈಲಾಗಿ ಬದಲಾಯಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ಇನ್ನೂ ಈ ಮೇಲಿನ ರೈಲು ಪರಿಷ್ಕರಣೆ, ಬದಲಾವಣೆಯು 2027 ಜನವರಿ 02 ರಿಂದ ಎರಡೂ ಕಡೆಗಳಿಂದ ಅಂದರೆ ಕಾಚಿಗುಡ ಮತ್ತು ಅಶೋಕಪುರಂನಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.
* ಉಂಜಲೂರು ನಿಲ್ದಾಣದಲ್ಲಿ ಟುಟಿಕೋರಿನ್-ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ರೈಲು ಸಂಖ್ಯೆ 16235/16236 ಟುಟಿಕೋರಿನ್-ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರೈಲಿಗೆ ನಿರ್ದಿಷ್ಟ ದಿನಾಂಕಗಳಂದು ಉಂಜಲೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ನೀಡಲಿದೆ ಎಂದು ದಕ್ಷಿಣ ರೈಲ್ವೆ ನಿರ್ಧರಿಸಿದೆ. ನಿಲುಗಡೆ ಸಮಯ ಹೀಗಿದೆ.
ರೈಲು ತಾತ್ಕಾಲಿಕ ನಿಲುಗಡೆ ಸಮಯ
* 2026 ಡಿಸೆಂಬರ್ 31 ಮತ್ತು 2027 ಜನವರಿ 01 ರಂದು ಹೊರಡುವ ರೈಲು (6235) ಟುಟಿಕೋರಿನ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲು ಉಂಜಲೂರು ನಿಲ್ದಾಣಕ್ಕೆ 23:13 ಗಂಟೆಗೆ ಆಗಮಿಸಿ, 23:14 ಗಂಟೆಗೆ ನಿರ್ಗಮಿಸಲಿದೆ.
* 2026 ಡಿಸೆಂಬರ್ 30 ಮತ್ತು 31 ರಂದು ಹೊರಡುವ ಮೈಸೂರು-ಟುಟಿಕೋರಿನ್ ದೈನಂದಿನ ಎಕ್ಸ್‌ಪ್ರೆಸ್ ರೈಲು (16236) ಉಂಜಲೂರು ನಿಲ್ದಾಣಕ್ಕೆ 04:09 ಗಂಟೆಗೆ ಆಗಮಿಸಿ, 04:10 ಗಂಟೆಗೆ ನಿರ್ಗಮಿಸಲಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

Vande Bharat Express: ಬೆಂಗಳೂರು-ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ: ರೂಟ್, ವೇಳಾಪಟ್ಟಿ ಇಲ್ಲಿದೆ" title="@

Click it and Unblock the Notifications
