SWR: ಬೆಂಗಳೂರಿಗೆ ಸಂಪರ್ಕಿಸುವ ಹಲವು ರೈಲುಗಳ ಸಂಚಾರ ದಿಢೀರ್ ರದ್ದು! ಮಾರ್ಗ ಬದಲಾವಣೆ

ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಒಂದೆರಡು ರೈಲುಗಳ ಮಾರ್ಗ ಬದಲಾವಣೆ ಸಹ ಮಾಡಲಾಗಿದೆ ಎಂದು ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ.

ರಾಮ್‌ಪುರ್‌ಹತ್ ಮತ್ತು ಸ್ವಾಧಿನ್‌ಪುರ ನಿಲ್ದಾಣಗಳ ನಡುವೆ ಹಾಗೂ ಮುರಾರೈ ಮತ್ತು ಛತ್ರ ನಿಲ್ದಾಣಗಳ ನಡುವೆ ಈಸ್ಟರ್ನ್ ರೈಲ್ವೆ ಅಧಿಕಾರಿಗಳು ತುರ್ತು ರೈಲ್ವೆ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಅದರಿಂದ ಕೆಲವು ರೈಲುಗಳ ಸಂಚಾರ ಮೇಲೆ ಪರಿಣಾಮ ಬೀರಿದೆ. ರದ್ದಾದ, ಮಾರ್ಗ ಬದಲಾದ ರೈಲುಗಳ ಪಟ್ಟಿ ಇಲ್ಲಿದೆ.

South Western Railway

ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ

* ಗುವಾಹಟಿ -ಎಸ್‌ಎಮ್‌ವಿಟಿ (SMVT) ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12510) ನವೆಂಬರ್ 24 ರಿಂದ ಹೊರಡಲಿತ್ತು. ವಾರದಲ್ಲಿ ಮೂರು ಬಾರಿ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.

* ವಾರದಲ್ಲಿ ಮೂರು ಸಲ ಸಂಚರಿಸುವಎಸ್‌ಎಮ್‌ವಿಟಿ (SMVT) ಬೆಂಗಳೂರು -ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12509) ರೈಲು ನವೆಂಬರ್ 27ರಂದು ಹೊರಡಬೇಕಿತ್ತು. ಈ ರೈಲನ್ನು ಸಹ ರದ್ದುಗೊಳಿಸಲಾಗಿದೆ.

ರದ್ದಾದ ರೈಲುಗಳು ಮತ್ತು ಮಾರ್ಗ ಬದಲಾವಣೆ

ಚಕ್ರಧರ್‌ಪುರ ವಿಭಾಗದ ಜಾರ್ಸುಗುಡ ಯಾರ್ಡ್‌ನಲ್ಲಿ ಕೈಗೊಳ್ಳಲಾಗುತ್ತಿರುವ 'ಯಾರ್ಡ್ ಮರು ರೂಪಿಸುವಿಕೆ' (yard remodelling) ಕಾಮಗಾರಿಯ ಕಾರಣದಿಂದಾಗಿ, ಸೌತ್ ಈಸ್ಟರ್ನ್ ರೈಲ್ವೆಯು ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಅವುಗಳ ಮಾರ್ಗ ಬದಲಾವಣೆ ಮಾಡಿದೆ.

* 2026 ನವೆಂಬರ್ 12ರಂದು ಹೊರಡಬೇಕಿದ್ದ ಟಾಟಾನಗರ್ - ಎಸ್‌ಎಮ್‌ವಿಟಿ (SMVT) ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12889) ಸಂಚಾರ ರದ್ದುಗೊಳಿಸಲಾಗಿದೆ.

* 2026 ನವೆಂಬರ್ 14ರಂದು ಹೊರಡಬೇಕಿದ್ದ ಎಸ್‌ಎಮ್‌ವಿಟಿ (SMVT) ಬೆಂಗಳೂರು - ಟಾಟಾನಗರ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12890).

* 2026 ಡಿಸೆಂಬರ್ 12 ರಂದು ಹೊರಡಬೇಕಿದ್ದ ರೈಲು ಹತಿಯಾ - ಎಸ್‌ಎಮ್‌ವಿಟಿ (SMVT) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (18637) ಸ್ಥಗಿತಗೊಳಿಸಲಾಗಿದೆ.

* ಎಸ್‌ಎಮ್‌ವಿಟಿ (SMVT) ಬೆಂಗಳೂರು - ಹತಿಯಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 18638) ಡಿಸೆಂಬರ್ 15 ರಂದು ಸಂಚಾರ ಮಾಡಬೇಕಿದ್ದು, ಕಾಮಗಾರಿ ಕಾರಣದಿಂದ ಈ ರೈಲು ಸಂಚಾರ ಸೇವೆ ನೀಡುವುದಿಲ್ಲ.

* 2026 ಡಿಸೆಂಬರ್ 13 ರಿಂದ ವಾರಕ್ಕೆ ಎರಡು ಬಾರಿ ಸಂಚರಿಸಬೇಕಿದ್ದ ಹತಿಯಾ - ಎಸ್‌ಎಮ್‌ವಿಟಿ (SMVT) ಬೆಂಗಳೂರು ರೈಲು (12835).

* ಡಿಸೆಂಬರ್ 15 ರಂದು ಸಂಚಾರ ಮಾಡಬೇಕಿದ್ದ SMVT ಬೆಂಗಳೂರು-ಹಾಟಿಯಾ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (12836) ಸೇವೆ ರದ್ದಾಗಿದೆ.

* 2026 ಡಿಸೆಂಬರ್ 11 ರಂದು ಸೇವೆಗೆ ಅಣಿಯಾಗಿದ್ದ ವಾಸ್ಕೋ ಡ ಗಾಮಾ-ಜಸಿಡಿಹ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (17321) ಸೇವೆ ರದ್ದುಗೊಳಿಸಲಾಗಿದೆ.

* 2026 ಡಿಸೆಂಬರ್ 14 ರಂದು ಹೊರಡಬೇಕಿದ್ದ ಜಸಿಡಿಹ್-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (17322) ಸೇವೆ ಸಿಗುವುದಿಲ್ಲ.

ರೈಲು ಮಾರ್ಗ ಬದಲಾವಣೆ

ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (18112) ಇದೇ ಡಿಸೆಂಬರ್ 13 ರಂದು ಪ್ರಯಾಣ ಆರಂಭಿಸಬೇಕಿತ್ತು. ವಿಜಯನಗರಂ ಮೂಲಕ ಇಚ್ಛಾಪುರಂ-ಜಖಾಪುರ-ನಯಾಗಢ-ಡಂಗೋಪೋಸಿ-ಟಾಟಾನಗರ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾಯಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕಾನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+