Railway Revenue: ರೈಲ್ವೆ ಆದಾಯ FY 2023-24 ನಲ್ಲಿ ₹2.56 ಲಕ್ಷ ಕೋಟಿ ಏರಿಕೆ: ಅಂಕಿ ಸಂಖ್ಯೆ
ನವದೆಹಲಿ, ಏಪ್ರಿಲ್ 03: ಹೊಸ ಹೊಸ ರೈಲುಗಳನ್ನು ಪರಿಚಯಿಸುವ ಮೂಲಕ ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಯ ಹಿಂದಿನ ಆರ್ಥಿಕ ವರ್ಷದಲ್ಲಿ ಅತ್ಯಧಿಕ ಆದಾಯ ಗಳಿಸಿದೆ. ಈ ಮೂಲಕ ಮತ್ತೊಂದು ಮಹತ್ವ ಆರ್ಥಿಕ ಹೆಜ್ಜೆ ಇರಿಸಿದೆ.
ಭಾರತೀಯ ರೈಲ್ವೇಯು ಕಳೆದ ಹಣಕಾಸು ವರ್ಷವಾದ 2023-24 ರಲ್ಲಿ 2.56 ಲಕ್ಷ ಕೋಟಿ ರೂಪಾಯಿಗಳ ಅತ್ಯಧಿಕ ಆದಾಯ ಗಳಿಕೆ ಮಾಡಿದೆ. ಅಂದರೆ ಒಟ್ಟು ಶೇಕಡಾ 6.66 ರಷ್ಟು ಆದಾಯ ಏರಿಕೆ ಕಂಡಿದೆ ಎಂದು ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸರಕು ಸಾಗಾಣೆಯಲ್ಲೂ ರೈಲ್ವೆ ಸಾಧನೆ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ರೈಲ್ವೆ ಹಿಂದಿನ ವರ್ಷ 2022-2023ರ ಹಣಕಾಸು ವರ್ಷದ ಆದಾಯ 2.40 ಲಕ್ಷ ಕೋಟಿ ರೂಪಾಯಿ ಆಗಿತ್ತು. ನಮ್ಮ ರೈಲ್ವೆಯು ಸರಕು ಸಾಗಾಣೆಯಲ್ಲಿ 1,591 ಮಿಲಿಯನ್ ಟನ್‌ಗಳಷ್ಟು (MTs) ಹೆಚ್ಚಿನದ್ದನ್ನು ದಾಖಲಿಸಿದೆ. ಇದು ಕಳೆದ ವರ್ಷ ಸರಕು ಸಾಗಾಣೆ ಮಾಡಿದ್ದ ಪ್ರಮಾಣಕ್ಕಿಂತ (1,512 MT) ಅಧಿಕ ಎಂದು ಅವರು ಮಾಹಿತಿ ನೀಡಿದರು.
5,300 ಕಿ.ಮೀ. ಟ್ರ್ಯಾಕ್ ಅಳವಡಿಕೆ
ಭಾರತೀಯ ರೈಲ್ವೆಯು ಕಳೆದ ಒಂದೇ ವರ್ಷದಲ್ಲಿ ಹೊಸದಾಗಿ 5,300 ಕಿಲೋ ಮೀಟರ್ ಟ್ರ್ಯಾಕ್‌ಗಳನ್ನು ಅಳವಡಿಸಿದೆ. ಇದರೊಂದಿಗೆ ಒಂದು ವರ್ಷದಲ್ಲಿ 551 ಡಿಜಿಟಲ್ ನಿಲ್ದಾಣಗಳನ್ನು ಸ್ಥಾಪಿಸುವಲ್ಲಿ ರೈಲ್ವೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಮಂಡಿಸಿದ ಮಧ್ಯಂತರ ಬಜೆಟ್ ಅನ್ವಯ, ಭಾರತೀಯ ರೈಲ್ವೇಯು 2024-25 ರ ಹಣಕಾಸು ವರ್ಷದಲ್ಲಿ 2.52 ಲಕ್ಷ ಕೋಟಿ ರೂಪಾಯಿಯಷ್ಟು ಕ್ಯಾಪೆಕ್ಸ್ ಪುಶ್ ಪಡೆಯಲಿದೆ ಎಂದು ತಿಳಿಸಿದರು.

ಐಇಬಿಆರ್ ಸಂಪನ್ಮೂಲ ಕುಸಿತ?
ಕೇವಲ ಒಂದು ವರ್ಷದ ಹಿಂದೆ ನಿಗದಿಪಡಿಸಿದ 2.4 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಈ ಕ್ಯಾಪೆಕ್ಸ್ ಪುಶ್ ಮುಂದಿನ ದಿಗನಳಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗುತ್ತಿದೆ. ರೈಲ್ವೆ ಸಚಿವಾಲಯದ ವಿವಿಧ ಹಣಕಾಸುವ ಮೂಲಗಳಿಂದ ಸಂಗ್ರಹಿಸಿದ ಆರ್ಥಿಕ ಐಇಬಿಆರ್ ಸಂಪನ್ಮೂಲವು ಕಳೆದ 2023-24 ಆರ್ಥಿಕ ವರ್ಷಕ್ಕಿಂತ (52,783 ಕೋಟಿ ರೂ.) ಈ ವರ್ಷ 2024-25 ರಲ್ಲಿ 13,000 ಕೋಟಿಗೆ ಇಳಿಕೆ ಆಗಲಿದೆ.
ರೈಲ್ವೆ ಸಚಿವಾಲಯವು ಕ್ರೂಢೀಕೃತ ಆದಾಯ ಹಣವನ್ನು ಚಾಲ್ತಿಯಲ್ಲಿರುವ ಯೋಜನೆಗಳಾ ರೈಲು ನಿಲ್ದಾಣ ಅಭಿವೃದ್ಧಿ, ಸಿಗ್ನಲಿಂಗ್ ವ್ಯವಸ್ಥೆ ಸುಧಾರಣೆ, ಟ್ರ್ಯಾಕ್ ವಿದ್ಯುದೀಕರಣ, ನಿಲ್ದಾಣ ಸೌಲಭ್ಯ ಬಲಪಡಿಸುವುದು, ಪ್ರಯಾಣಿಕರಿಗೆ ಇನ್ನಷ್ಟು ಸುರಕ್ಷತೆ ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆ ಆಗಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications