• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲು ಪ್ರಯಾಣ ದರ ಹೆಚ್ಚಳಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆ

|

ನವದೆಹಲಿ, ಡಿಸೆಂಬರ್ 27: ರೈಲು ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಕೆಲವೇ ದಿನಗಳಲ್ಲಿ ರೈಲು ಪ್ರಯಾಣ ದರವನ್ನು ಏರಿಸಲಾಗುತ್ತಿದೆ.

ಪ್ರತಿ ಕಿ.ಮೀ ಗೆ 5-40 ಪೈಸೆ ಪ್ರಯಾಣ ದರ ಹೆಚ್ಚಳ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಈ ಪ್ರಯಾಣ ದರ ಹೆಚ್ಚಳವು ರೈಲ್ವೆಯ ಸಾಮಾನ್ಯ, ಸ್ಲೀಪರ್, ಎಸಿ ಎಲ್ಲ ದರ್ಜೆಗೂ ಅನ್ವಯ ಆಗಲಿದೆ.

166 ವರ್ಷದ ಇತಿಹಾಸದಲ್ಲಿಯೇ ವಿಶಿಷ್ಟ ಸಾಧನೆ ಮಾಡಿದ ಭಾರತೀಯ ರೈಲ್ವೆ

ಟಿಕೆಟ್ ದರ ಮಾತ್ರವಲ್ಲದೆ ಪಾಸ್ ದರವನ್ನೂ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸಬ್ ಅರ್ಬನ್ ಸೇರಿದಂತೆ ಎಲ್ಲ ಮಾದರಿಯ ರೈಲುಗಳ ಟಿಕೆಟ್ ಮತ್ತು ಪಾಸ್ ದರದಲ್ಲಿ ಹೆಚ್ಚಳ ಆಗಲಿದೆ.

ಟಿಕೆಟ್ ದರ ಹೆಚ್ಚಳಕ್ಕೆ ಕಳೆದ ತಿಂಗಳೇ ಪ್ರಧಾನಿ ಕಾರ್ಯಾಲಯದ ಒಪ್ಪಿಗೆ ಪಡೆಯಲಾಗಿದ್ದು, ಹೊಸ ವರ್ಷದ ಮೊದಲ ವಾರದಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವುದು ಬಹುತೇಕ ಪಕ್ಕಾ ಆಗಿದೆ.

ರೈಲ್ವೆ ಇಲಾಖೆ ಆದಾಯ ಗಣನೀಯವಾಗಿ ಕುಸಿದಿರುವ ಕಾರಣ ಈ ದರ ಏರಿಕೆ ಅನಿವಾರ್ಯವಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ

ಅಂದಾಜಿನ ಪ್ರಕಾರ ಭಾರತೀಯ ರೈಲ್ವೆಯು ಹಣಕಾಸು ವರ್ಷದಲ್ಲಿ ಈ ವರೆಗೆ 1.18 ಲಕ್ಷ ಕೋಟಿ ಹಣ ಗಳಿಸಬೇಕಿತ್ತು. ಆದರೆ 99,223 ಕೋಟಿ ಹಣ ಮಾತ್ರವೇ ಗಳಿಸಿದೆ. ಈ ಹಣಕಾಸು ವರ್ಷದಲ್ಲಿ ಈವರೆಗೆ 19,412 ಕೋಟಿ ರೂಪಾಯಿ ಹಣ ಆದಾಯದಲ್ಲಿ ಖೋತಾ ಆಗಿದೆ.

ರೈಲ್ವೆ ಇಲಾಖೆಯ ಖರ್ಚು ಸಹ ಭಾರಿ ಏರಿಕೆಯಾಗಿದ್ದು ವರ್ಷದಲ್ಲಿ 1.01 ಕೋಟಿ ಖರ್ಚು ಆಗಿದೆ. ಅಂದಾಜು ವಾರ್ಷಿಕ ಖರ್ಚು 97,265 ಕೋಟಿ ಊಹಿಸಲಾಗಿತ್ತು.

English summary
Indian railways plans to hike railway ticket price hike. PM office nobs to price hike. New price will come to action from January first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X