ರೈಲ್ವೆ ಜನರಲ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಏ.1ರಿಂದ ಡಿಜಿಟಲ್ ಪಾವತಿ ಸೌಲಭ್ಯ
ಬೆಂಗಳೂರು, ಮಾರ್ಚ್ 21: ಭಾರತೀಯ ರೈಲ್ವೆ ಇಲಾಖೆಯು ಎಸಿ ಕೋಚ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಟಿಕೆಟ್ ಬುಕ್ಕಿಂಗ್ ಅನ್ನು ಆನ್‌ಲೈನ್ ಮೂಲಕ ಮಾಡಬೇಕಿದೆ. ಸಾಮಾನ್ಯ ಸಾಮಾನ್ಯ ಪ್ರಯಾಣಿಕರು ಟಿಕೆಟ್ (General Ticket Booking) ಅನ್ನು ಕೌಂಟರ್‌ನಲ್ಲಿ ನಗದು ಹಣ ನೀಡಿ ಪಡೆಯಬೇಕಿದೆ. ಮುಂದಿನ ವರ್ಷದಿಂದ ಈ ಸಾಮಾನ್ಯ ಟಿಕೆಟ್‌ನ ಈ ನಿಯಮದಲ್ಲಿ ಕೆಲವು ಬದಲಾವಣೆ ತರಲಾಗುವುದು ಎಂದು ಇಲಾಖೆ ಅಪ್ಡೇಟ್ ನೀಡಿದೆ.
ಭಾರತೀಯ ರೈಲ್ವೇಯು ತನ್ನ ಸಾಮಾನ್ಯ ಪ್ರಯಾಣಿಕರಿಗೆ (General Passenger) ಟಿಕೆಟ್ ಪಡೆಯುವಾಗ ನಗದು ರೂಪದ ಹಣದ ನಿಯಮದ ಜೊತೆಗೆ ಆನ್‌ಲೈನ್ ಮೂಡ್‌ಗೆ ಬದಲಾಗಲಿದೆ. ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆ ಮುಂದಾಗಿದೆ.

ಯುಪಿಐ, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಿ
ರೈಲ್ವೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ತನ್ನ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಅಂತಹ ಒಂದು ಬದಲಾವಣೆಯು ಶೀಘ್ರದಲ್ಲೇ ದೇಶದ ಎಲ್ಲಾ-ಜನಪ್ರಿಯ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿ ವೇದಿಕೆಯ ತ್ವರಿತ ಪ್ರತಿಕ್ರಿಯೆಯನ್ನು (QR) ಬಳಸಿಕೊಂಡು ಸಾಮಾನ್ಯ ಟಿಕೆಟ್‌ಗಳಿಗೆ ಪಾವತಿಸಲು ಅವಕಾಶ ಕಲ್ಪಿಸಲಿದೆ.
ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಮುಂದಿನ ತಿಂಗಳು ಏಪ್ರಿಲ್ 1 ರಿಂದ ಸಾಮಾನ್ಯ ಪ್ರಯಾಣಿಕರು (ಜನರಲ್ ಪ್ಯಾಸೆಂಜರ್) ಸಹ ಮೊಬೈಲ್ ನಲ್ಲಿ UPI ಪಾವತಿ ವಿಧಾನ ಬಳಸಿಕೊಂಡು ಭಾರತೀಯ ರೈಲ್ವೇಸ್ ನೆಟ್‌ವರ್ಕ್‌ನಲ್ಲಿ ಸಾಮಾನ್ಯ ದರ್ಜೆಯ ರೈಲು ಬುಕಿಂಗ್‌ಗಳಿಗೆ ಪಾವತಿಸಲು ಅವಕಾಶ ದೊರೆಯಲಿದೆ.

ಚಿಲ್ಲರೆ ಸಮಸ್ಯೆ ತಪ್ಪಲಿದೆ
ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಸುಲಭಗೊಳಿಸಲು ಇಲಾಖೆಯ ಈ ನಿರ್ಧಾರ ಸಹಕಾರಿಯಾಗಲಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಖರೀದಿ ವೇಳೆ ಚಿಲ್ಲರೆ ಸಮಸ್ಯೆ ತಪ್ಪಲಿದೆ.
ಸಾಮಾನ್ಯ ಪ್ರಯಾಣಿಕರಿಂದ ಟಿಜಿಟಲ್ ವ್ಯವಸ್ಥೆ ಬಳಕೆ
ಇನ್ನೂ ರೈಲ್ವೇ ನೆಟ್‌ವರ್ಕ್‌ನಲ್ಲಿ ಸಾಮಾನ್ಯ ರೈಲು ಟಿಕೆಟ್‌ನಲ್ಲಿ ಪ್ರಯಾಣಿಸಲು ಆಗಮಿಸುವವರು ಟಿಕೆಟ್ ಬುಕಿಂಗ್‌ಗೆ ನಗದು ರೂಪದಲ್ಲಿ ಹಣ ನೀಡಬೇಕೆಂದಿಲ್ಲ. ನೀವು ಗೂಗಲ್ ಪೇ, ಯುಪಿಐ ಆಧಾರಿತ ಅಪ್ಲಿಕೇಷನ್‌ಗಳನ್ನು ಬಳಸಿಕೊಂಡು ಟಿಜಿಟಲ್ ಪಾವತಿ ಮಾಡಬಹುದು. ಇದರಿಂದ ಚಿಲ್ಲರೆ ಸಮಸ್ಯೆ ತಪ್ಪಲಿದೆ. ಜೊತೆಗೆ ಭವಿಷ್ಯದಲ್ಲಿ ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೆ ಟಿಕೆಟ್ ಖರೀದಿ ವೇಳೆ ಟಿಜಿಟಲ್ ವ್ಯವಸ್ಥೆ ಬಳಸಲಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಆನ್‌ಲೈನ್‌ನಲ್ಲಿ ಬುಕ್ ಮಾಡಿರದ ಟಿಕೆಟ್ ಕೌಂಟ್‌ನಲ್ಲಿ ಲಭ್ಯ
ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದಿರಿಸದೇ ಇರುವ ಟಿಕೆಟ್ ಗಳನ್ನು ಕೌಂಟರ್‌ಗಳಲ್ಲಿ ನೀಡುವ ಸೌಲಭ್ಯಗಳನ್ನು ರೈಲ್ವೇ ಒದಗಿಸಲಿದೆ. ಅಂದರೆ ಸಾಮಾನ್ಯ ದಿನಗಳಲ್ಲಿ ಅಷ್ಟಾಗಿ ಆನ್‌ಲೈನ್‌ನಲ್ಲಿ ಎಸಿ, ಸ್ಲಿಪಿರ್ ಇನ್ನಿತರ ಟಿಕೆಟ್ ಗಳು ಭರ್ತಿಯಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿರದ ಟಿಕೆಟ್‌ಗಳನ್ನು ನೀವು ಕೌಂಟರ್‌ನಲ್ಲೂ ಪಾವತಿಸಿ ಪಡೆಯಬಹುದಾಗಿದೆ.
ಈ ಕುರಿತು ಮಾಹಿತಿಯನ್ನು ನೀವು ಏಪ್ರಿಲ್ 1ರ ನಂತರ ರೈಲು ನಿಲ್ದಾಣಗಳಲ್ಲಿ ಪರಿಶೀಲಿಸಬಹುದು. ಮೊಬೈಲ್‌ಗೆ ಲಿಂಕ್ ಆದ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೆ ಸಾಕು. ನೀವು ರೈಲಿನ ಜನರಲ್ ಟಿಕೆಟ್ ಖರೀದಿಸಿ ಓಡಾಡಬಹುದು. ಚಿಲ್ಲರೆ ಚಿಂತೆ, ನಗದು ವಹಿವಾಟಿನ ಚಿಂತೆ ತಪ್ಪಲಿದೆ.











Click it and Unblock the Notifications