Railways: ರೈಲ್ವೆ ಜಾಲದಲ್ಲಿ ಬೆಂಕಿ ಅವಘಡ ತಡೆಗೆ ಹೈಟೆಕ್ ಕ್ರಮ; 170 ವೈದ್ಯಕೀಯ ಘಟಕ ಸೇರಿ ಏನೇನಿವೆ?

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಸಂಚಾರ ವೇಳೆ ರೈಲಿನಲ್ಲಿ ಬೆಂಕಿ ಅವಘಡ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಆರಾಮದಾಯಕ ಪ್ರಯಾಣದ ಜೊತೆಗೆ ಅಗ್ನಿ ಸುರಕ್ಷತೆಗೆ ಆದ್ಯತೆ ನೀಡಿದೆ. ಆಕಸ್ಮಿಕವಾಗಿ ಸಂಭವಿಸುವ ಆಗ್ನಿಯಂತಹ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶೇಷ ಸಿಬ್ಬಂದಿ, ಸಹಾಯವಾಣಿ, ಬಹುಹಂತದ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರಿಸಿದರು. ಬೆಂಕಿ ಸೇರಿದಂತೆ ಯಾವುದೇ ಅಸಾಮಾನ್ಯ ಘಟನೆಯ ಸಂದರ್ಭದಲ್ಲಿ ಭಾರತೀಯ ರೈಲ್ವೆ ಸದ ತ್ವರಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪ್ರತಿಕ್ರಿಯಿಸಲು ಇಲಾಖೆ ಸಿದ್ಧವಾಗಿದೆ. ಅಗ್ನಿ ಅವಘಡದಂತ ತುರ್ತು ಪರಿಸ್ಥಿತಿಯ ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತರಬೇತಿ ಪಡೆದ ರೈಲ್ವೆ ಸಿಬ್ಬಂದಿ ಇರಲಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಭಾರತೀಯ ರೈಲ್ವೆ ತನ್ನದೇ ಆದ ವ್ಯವಸ್ಥೆ, ಸಾಧನಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ತಕ್ಷಣವೇ ಸ್ಪಂದಿಸುತ್ತದೆ. ಅಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸುತ್ತದೆ. ಈ ಮೂಲಕ ಪ್ರಯಾಣಿಕರ ಜೀವ ರಕ್ಷಣೆಗೆ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅವರು ವಿವರಿಸಿದರು.

Indian Railways

ರೈಲ್ವೆಯಿಂದ ಹೈಟೆಕ್ ಅಗ್ನಿ ಸುರಕ್ಷತಾ ಕ್ರಮಗಳು

ಮೊದಲ (ಪ್ರಾಥಮಿಕ) ಹಂತದಲ್ಲಿ ಜೀವ ಉಳಿಸುವುದು, ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಮತ್ತು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡುವುದು ಈ ಹೊಸ ಕ್ರಮಗಳ ಉದ್ದೇಶವಾಗಿದೆ. ಭಾರತೀಯ ರೈಲ್ವೆಯು 177 ಅಪಘಾತ ಪರಿಹಾರ ರೈಲುಗಳು (ARTಗಳು), 100 ಹೆಚ್ಚಿನ ಸಾಮರ್ಥ್ಯದ 140T ಬ್ರೇಕ್‌ಡೌನ್ ಡೀಸೆಲ್-ಹೈಡ್ರಾಲಿಕ್ ಕ್ರೇನ್‌ಗಳು ಮತ್ತು 170 ಅಪಘಾತ ಪರಿಹಾರ ವೈದ್ಯಕೀಯ ಸಲಕರಣೆ (ARME) ಸ್ಕೇಲ್-I ಜಾಲವನ್ನು ಹೊಂದಿದೆ.

ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ಅಪಘಾತಗಳಿಗೆ ARME ಗಳ ಸ್ಕೇಲ್-II, ಪೋರ್ಟಬಲ್ ವೈದ್ಯಕೀಯ ಕಿಟ್‌ಗಳನ್ನು ಒದಗಿಸಲಾಗಿದೆ. ಇವುಗಳಿಂದ ತತ್‌ಕ್ಷಣದ ವೈದ್ಯಕೀಯ ನೆರವು ಲಭಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ತ್ವರಿತ ಜವಾಬ್ದಾರಿ ವಹಿಸಲಾಗುತ್ತದೆ. ಅವರೆಲ್ಲರು ತರಬೇತಿ ಪಡೆದ ಸಿಬ್ಬಂದಿಗಳಾಗಿದ್ದಾರೆ ಎಂದು ಹೇಳಿದರು.

ರೈಲುಗಳ ಸಂಚಾರ ವೇಳೆ ಯಾವುದೇ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ತನ್ನ ವ್ಯವಸ್ಥೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆಯು ಆಗಾಗ ಅಣಕು ಪ್ರದರ್ಶನ ಸಹ ಮಾಡುತ್ತಿದೆ. ಈ ಮೂಲಕ ಪ್ರಯಾಣಿಕರಿಗೆ ಸುರಕ್ಷತಾ ಖಚಿತತೆ ಒದಗಿಸಲಾಗುತ್ತಿದೆ. 2025-26ರ ಅವಧಿಯಲ್ಲಿ ಅಹಮದಾಬಾದ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ವಿಭಾಗಗಳಲ್ಲಿ ಅಂತಹ ನಾಲ್ಕು ಅಣಕು ಪ್ರದರ್ಶನ ಒಳಗೊಂಡಂತೆ ಒಟ್ಟು 71ಅಣಕು ಕಸರತ್ತು ನಡೆಸಲಾಗಿದೆ ಎಂದು ಮಾಹಿತಿ ಕೊಟ್ಟರು.

ರೈಲ್ವೆ ಇಲಾಖೆಯ ಕ್ರಮಗಳ ಮುಖ್ಯಾಂಶಗಳು

* ಅಗ್ನಿ ಅವಘಡಗಳ ಸಂದರ್ಭದಲ್ಲಿ ಬಳಸಲು ರೈಲ್ವೆ ನಿಲ್ದಾಣಗಳಿಗೆ ಪೋರ್ಟಬಲ್ ಅಗ್ನಿಶಾಮಕ ಸಾಧನಗಳನ್ನು ಒದಗಿಸಲಾಗಿದೆ.

* ಅಗ್ನಿ ಅವಘಡಗಳ ಬಳಸಲು ಮರಳು ಮತ್ತು ನೀರಿನಿಂದ ಕೂಡಿದ ಅಗ್ನಿಶಾಮಕ ಬಕೆಟ್‌ಗಳನ್ನು ರೈಲ್ವೆ ನಿಲ್ದಾಣಗಳಿಗೆ ಒದಗಿಸಲಾಗಿದೆ.

* ದೊಡ್ಡ ರೈಲ್ವೆ ನಿಲ್ದಾಣಗಳಲ್ಲಿ, ಪ್ರಯಾಣಿಕರ ಸಾಮಾನುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.

* ಭಾರತೀಯ ರೈಲ್ವೆಯ ಎಲ್ಲಾ ಬೋಗಿಗಳಲ್ಲಿ ಕನಿಷ್ಠ ಎರಡು ಅಗ್ನಿಶಾಮಕ ಸಾಧನಗಳನ್ನು ಒದಗಿಸಲಾಗುತ್ತದೆ.

* ಪವರ್ ಕಾರ್‌ಗಳು ಮತ್ತು ಪ್ಯಾಂಟ್ರಿ ಕಾರುಗಳ ಆಗ್ನಿ ಬಾಧಿತವಾಗುವ ಪ್ರದೇಶಗಳಲ್ಲಿ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ. ನೀರು ಚಿಮ್ಮುವ ವ್ಯವಸ್ಥೆ ಇರಲಿದೆ.

* ಹಾಲಿ ನಿಯಮಗಳ ಪ್ರಕಾರ ಬೋಗಿಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆ ಇದೆ.

* ಬೆಂಕಿಯ ಸಂದರ್ಭದಲ್ಲಿ ಸ್ಥಳಾಂತರಿಸಲು ಬೋಗಿಗಳಲ್ಲಿ ತುರ್ತು ಕಿಟಕಿಗಳ ವ್ಯವಸ್ಥೆ ಮಾಡಲಾಗಿದೆ.

* ಸುಧಾರಿತ ಅಗ್ನಿ ಸುರಕ್ಷತೆಗಾಗಿ ಸೀಟುಗಳು/ಬರ್ತ್‌ಗಳು, ಪ್ಯಾನೆಲ್‌ಗಳು, ನೆಲಹಾಸು, ನಿರೋಧಕ, ಶೌಚಾಲಯಗಳು ಇತ್ಯಾದಿಗಳಿಗೆ ಬೋಗಿಗಳಲ್ಲಿ ಜಾಗತಿಕ ಅಗ್ನಿಶಾಮಕ ಮಾನದಂಡಗಳ ಪ್ರಕಾರ ಅಗ್ನಿಶಾಮಕ ವಸ್ತುಗಳ ಬಳಕೆಗೆ ಅವಕಾಶ.

* ಬೋಗಿಗಳಲ್ಲಿ ಅಗ್ನಿ ನಿರೋಧಕ ಇ-ಬೀಮ್ ಕೇಬಲ್ ಬಳಕೆ.

* ವಿದ್ಯುತ್ ದೋಷಗಳು/ಉಲ್ಬಣಗಳಿಂದ ಹಾನಿಯನ್ನು ತಡೆಗಟ್ಟಲು ವಿದ್ಯುತ್ ಸರ್ಕ್ಯೂಟ್‌ಗಳಲ್ಲಿ ಫ್ಯೂಸ್‌ಗಳು, ಮಿನಿಯೇಚರ್ ಸರ್ಕ್ಯೂಟ್ ಬ್ರೇಕರ್ (MCBs) ಮತ್ತು ಮೋಟಾರ್ ಪ್ರೊಟೆಕ್ಷನ್ ಸರ್ಕ್ಯೂಟ್ ಬ್ರೇಕರ್‌ಗಳು (MPCBs) ಮೂಲಕ ವಿವಿಧ ಹಂತದ ರಕ್ಷಣಾ ವ್ಯವಸ್ಥೆ.

* ವಿದ್ಯುತ್ ಕ್ಯಾಬಿನೆಟ್‌ಗಳಲ್ಲಿ ಏರೋಸಾಲ್ ಆಧಾರಿತ ಅಗ್ನಿ ನಿಗ್ರಹ ವ್ಯವಸ್ಥೆಯನ್ನು ಒದಗಿಸುವುದು.

* ಅಮೃತ್ ಭಾರತ್ ಮತ್ತು ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಹೊಸ ತಂತ್ರಜ್ಞಾನವುಳ್ಳ ಸಾಮಗ್ರಿಗಳ ಅಳವಡಿಕೆ.

* ಬೆಂಕಿ ಅವಘಡ ವೇಳೆ ಪ್ರಯಾಣಿಕರಿಗೆ "ಮಾಡಬೇಕಾದ" ಮತ್ತು "ಮಾಡಬಾರದ" ವಿಷಯಗಳ ಬಗ್ಗೆ ಜಾಗೃತಿ ಮತ್ತು ಎಚ್ಚರಿಕೆ ಪ್ರದರ್ಶನಗಳ ವ್ಯವಸ್ಥೆ ಮಾಡಲಾಗಿದೆ.

* ವಂದೇ ಭಾರತ್‌ನ ಪ್ರತಿ ಕೋಚ್‌ನಲ್ಲಿ 4 ತುರ್ತು ಟಾಕ್ ಬ್ಯಾಕ್ ಯೂನಿಟ್‌ಗಳ ವ್ಯವಸ್ಥೆ ಇದೆ. ಇದರಿಂದ ಪ್ರಯಾಣಿಕರು ರೈಲು ವ್ಯವಸ್ಥಾಪಕರು/ ಲೋಕೋಪೈಲಟ್‌ಗಳೊಂದಿಗೆ ಸಂವಹನ ನಡೆಸಬಹುದಾಗಿದೆ.

* ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ಪ್ರಯಾಣಿಕರು ರೈಲ್ ಮದದ್ ಸಹಾಯವಾಣಿಗೆ 139 ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+