Indian Railways BIG Update: 196 ವಿಶೇಷ ರೈಲು- ಮಾರ್ಗ ಸೇರಿ ಇತರ ವಿವರ ತಿಳಿಯಿರಿ

ಭಾರತೀಯ ರೈಲ್ವೇಯು ಹಬ್ಬದ ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಪ್ರಮುಖ ನಗರಗಳಲ್ಲಿನ ವಿವಿಧ ಸ್ಥಳಗಳ ನಡುವೆ ಸಂಪರ್ಕವನ್ನು ಒದಗಿಸಲು ಮುಂದೆ ಬಂದಿದೆ. 196 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.

ನವದೆಹಲಿ, ಮಾರ್ಚ್‌ 07: ಭಾರತೀಯ ರೈಲ್ವೇಯು ಹಬ್ಬದ ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಪ್ರಮುಖ ನಗರಗಳಲ್ಲಿನ ವಿವಿಧ ಸ್ಥಳಗಳ ನಡುವೆ ಸಂಪರ್ಕವನ್ನು ಒದಗಿಸಲು ಮುಂದೆ ಬಂದಿದೆ. 196 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಭಾರತೀಯ ರೈಲ್ವೇಯು ಹಬ್ಬದ ಋತುವಿನಲ್ಲಿ 196 ವಿಶೇಷ ರೈಲುಗಳ 491 ಟ್ರಿಪ್‌ಗಳನ್ನು ಕೊಡುಗೆಯಾಗಿ ನೀಡಲಿದೆ.

ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೊಸ ವಿಶೇಷ ರೈಲುಗಳು: ರೈಲ್ವೇ ಸಚಿವಾಲಯದ ಹೇಳಿಕೆಯ ಪ್ರಕಾರ, ಭಾರತದಾದ್ಯಂತ ಪ್ರಮುಖ ನಗರಗಳನ್ನು ಸಂಪರ್ಕಿಸಲು ವಿಶೇಷ ರೈಲುಗಳು ಸಂಚರಿಸಲಿವೆ.

 ಪ್ರಮುಖವಾಗಿ ಈ ನಗರಗಳ ನಡುವೆ ಸಂಚರಿಸಲಿವೆ

ಪ್ರಮುಖವಾಗಿ ಈ ನಗರಗಳ ನಡುವೆ ಸಂಚರಿಸಲಿವೆ

ದೆಹಲಿ - ಪಾಟ್ನಾ
ದೆಹಲಿ- ಭಾಗಲ್ಪುರ
ದೆಹಲಿ- ಮುಜಾಫರ್‌ಪುರ
ದೆಹಲಿ- ಸಹರ್ಸಾ
ಗೋರಖ್‌ಪುರ- ಮುಂಬೈ
ಕೋಲ್ಕತ್ತಾ- ಪುರಿ
ಗುವಾಹಟಿ- ರಾಂಚಿ
ನವದೆಹಲಿ- ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ
ಜೈಪುರ- ಬಾಂದ್ರಾ ಟರ್ಮಿನಸ್
ಪುಣೆ- ದಾನಾಪುರ

 ಯಾವ ವಿಭಾಗಗಳಿಂದ ಎಷ್ಟು ರೈಲು

ಯಾವ ವಿಭಾಗಗಳಿಂದ ಎಷ್ಟು ರೈಲು

ಸೆಂಟ್ರಲ್ ರೈಲ್ವೆ- 122 ಅಧಿಸೂಚಿತ ಟ್ರಿಪ್‌ಗಳೊಂದಿಗೆ 29 ರೈಲುಗಳು

ಪೂರ್ವ ಕೇಂದ್ರ ರೈಲ್ವೇ- 58 ಅಧಿಸೂಚಿತ ಟ್ರಿಪ್‌ಗಳೊಂದಿಗೆ 16 ರೈಲುಗಳು

ಪೂರ್ವ ರೈಲ್ವೆ- 14 ಅಧಿಸೂಚಿತ ಟ್ರಿಪ್‌ಗಳೊಂದಿಗೆ 8 ರೈಲುಗಳು

ಉತ್ತರ ಮಧ್ಯ ರೈಲ್ವೆ- 10 ಅಧಿಸೂಚಿತ ಟ್ರಿಪ್‌ಗಳೊಂದಿಗೆ 4 ರೈಲುಗಳು

ಈಶಾನ್ಯ ರೈಲ್ವೆ- 22 ಅಧಿಸೂಚಿತ ಟ್ರಿಪ್‌ಗಳೊಂದಿಗೆ 10 ರೈಲುಗಳು

ವಾಯುವ್ಯ ರೈಲ್ವೆ- 38 ಅಧಿಸೂಚಿತ ಟ್ರಿಪ್‌ಗಳೊಂದಿಗೆ 14 ರೈಲುಗಳು

ಈಶಾನ್ಯ ಫ್ರಾಂಟಿಯರ್ ರೈಲ್ವೆ- 22 ಅಧಿಸೂಚಿತ ಟ್ರಿಪ್‌ಗಳೊಂದಿಗೆ 6 ರೈಲುಗಳು

ಉತ್ತರ ರೈಲ್ವೆ- 75 ಅಧಿಸೂಚಿತ ಟ್ರಿಪ್‌ಗಳೊಂದಿಗೆ 35 ರೈಲುಗಳು

ದಕ್ಷಿಣ ಮಧ್ಯ ರೈಲ್ವೆ- 6 ಅಧಿಸೂಚಿತ ಟ್ರಿಪ್‌ಗಳೊಂದಿಗೆ 6 ರೈಲುಗಳು

ಆಗ್ನೇಯ ರೈಲ್ವೆ - 9 ಅಧಿಸೂಚಿತ ಟ್ರಿಪ್‌ಗಳೊಂದಿಗೆ 9 ರೈಲುಗಳು

ಆಗ್ನೇಯ ಮಧ್ಯ ರೈಲ್ವೆ- 2 ಅಧಿಸೂಚಿತ ಟ್ರಿಪ್‌ಗಳೊಂದಿಗೆ 2 ರೈಲುಗಳು

ದಕ್ಷಿಣ ರೈಲ್ವೆ- 1 ಅಧಿಸೂಚಿತ ಟ್ರಿಪ್‌ನೊಂದಿಗೆ 1 ರೈಲು

ನೈಋತ್ಯ ರೈಲ್ವೆ- 10 ಅಧಿಸೂಚಿತ ಟ್ರಿಪ್‌ಗಳೊಂದಿಗೆ 8 ರೈಲುಗಳು

ಪಶ್ಚಿಮ ಕೇಂದ್ರ ರೈಲ್ವೆ- 18 ಅಧಿಸೂಚಿತ ಟ್ರಿಪ್‌ಗಳೊಂದಿಗೆ 12 ರೈಲುಗಳು

ಪಶ್ಚಿಮ ರೈಲ್ವೆ- 84 ಅಧಿಸೂಚಿತ ಟ್ರಿಪ್‌ಗಳೊಂದಿಗೆ 36 ರೈಲುಗಳು

 ಪ್ರಯಾಣಿಕರ ಸುರಕ್ಷತೆಗೆ ವಿಶೇಷ ವ್ಯವಸ್ಥೆ

ಪ್ರಯಾಣಿಕರ ಸುರಕ್ಷತೆಗೆ ವಿಶೇಷ ವ್ಯವಸ್ಥೆ

ಪ್ರಯಾಣಿಕರ ಭದ್ರತೆಗಾಗಿ ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚುವರಿ ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರೈಲುಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ನಿಲ್ದಾಣಗಳಲ್ಲಿ ತುರ್ತು ಕರ್ತವ್ಯಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಆದ್ಯತೆಯ ಮೇರೆಗೆ ರೈಲು ಸೇವೆಯ ಯಾವುದೇ ಅಡಚಣೆಗೆ ಹಾಜರಾಗಲು ಸಿಬ್ಬಂದಿಯನ್ನು ವಿವಿಧ ವಿಭಾಗಗಳಲ್ಲಿ ನಿಯೋಜಿಸಲಾಗಿದೆ.ಇದಲ್ಲದೆ, ಪ್ಲಾಟ್‌ಫಾರ್ಮ್ ಸಂಖ್ಯೆಗಳೊಂದಿಗೆ ರೈಲುಗಳ ಆಗಮನ ಮತ್ತು ನಿರ್ಗಮನದ ಆಗಾಗ್ಗೆ ಮತ್ತು ಸಮಯೋಚಿತ ಪ್ರಕಟಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
 ಬಣ್ಣಗಳ ಹಬ್ಬಕ್ಕೆ ಭಾರೀ ತಯಾರಿ

ಬಣ್ಣಗಳ ಹಬ್ಬಕ್ಕೆ ಭಾರೀ ತಯಾರಿ

ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುವ ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ, ವಸಂತೋತ್ಸವ ಅಥವಾ ಪ್ರೀತಿಯ ಹಬ್ಬ ಎಂದೂ ಕರೆಯಲಾಗುತ್ತದೆ, ಇದು ಹಿಂದೂ ಧರ್ಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ದೇವರು ರಾಧಾ ಮತ್ತು ಕೃಷ್ಣನ ಶಾಶ್ವತ ದೈವಿಕ ಪ್ರೀತಿಯ ದ್ಯೋತಕವಾಗಿದೆ. ಈ ಹಬ್ಬವು ದುಷ್ಟರ ಮೇಲಿನ ಉತ್ತಮರ ವಿಜಯವೆಂಬ ಸಂಕೇತವನ್ನೂ ಸೂಚಿಸುತ್ತದೆ. ಇದು ಹಿರಣ್ಯಕಶಿಪುವಿನ ಮೇಲೆ ವಿಷ್ಣುವಿನ ವಿಜಯವನ್ನು ಸಾರುತ್ತದೆ. ಭಾರತೀಯ ಉಪಖಂಡದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿಯು ಭಾರತದಲ್ಲಿ ವಸಂತ (ಋತು) ಆಗಮನ, ಚಳಿಗಾಲದ ಅಂತ್ಯದಲ್ಲಿ ಆಚರಿಸಲಾಗುತ್ತಿದೆ. ಇದು ಪ್ರೀತಿಯ ಅರಳುವಿಕೆಯನ್ನು ಸೂಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+