Train Coach Washing: ರೈಲನ್ನು ಎಷ್ಟು ನಿಮಿಷಗಳಲ್ಲಿ ಕ್ಲೀನ್ ಮಾಡಲಾಗುತ್ತದೆ? ನಿಮಗೆ ಗೊತ್ತೆ?: ವಿಡಿಯೋ ನೋಡಿ
ಬೆಂಗಳೂರು, ಫೆಬ್ರವರಿ 19: ಭಾರತೀಯ ರೈಲ್ವೆ ಸಚಿವಾಲಯವು ಆಗಾಗ ತನ್ನ ವ್ಯಾಪ್ತಿಯಲ್ಲಿನ ಅತ್ಯಂತ ಸುಂದರ ಮತ್ತು ಆಕರ್ಷಕ ರೈಲ್ವೆ ನಿಲ್ದಾಣ, ಪರಿಸರ ಮಧ್ಯೆದ ರೈಲು ಸಂಚಾರ, ರೈಲುಗಳ ಚೆಂದದ ಫೋಟೋವನ್ನು ಹಂಚಿಕೊಳ್ಳುತ್ತದೆ. ಅದೇ ರೀತಿ ಈ ಭಾರಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express Train) ಸೇರಿದಂತೆ ರೈಲುಗಳನ್ನು ಸ್ವಯಂಚಾಲಿತ ಕೋಚ್ ತೊಳೆಯುವ ಘಟಕದ ಮಹತ್ವದ ಮಾಹಿತಿ, ವಿಡಿಯೋ ಹಂಚಿಕೊಂಡಿದೆ.
ರೈಲ್ವೆ ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ನಲ್ಲಿ ರೈಲ್ವೆಯ ಆಸಕ್ತಿದಾಯಕ ಸಂಗತಿಗಳು, ಬೆಳವಣಿಗೆಗಳ ಫೋಟೊ, ವಿಡಿಯೋ ಸಾಕಷ್ಟು ವೈರಲ್ ಆಗುತ್ತವೆ. ಇದೀಗ ರೈಲುಗಳ ಸ್ವಚ್ಛತೆಯಲ್ಲಿ ಗುಣಮಟ್ಟ ಕಾಯ್ದುಕೊಂಡಿದ್ದರ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋ ನೋಡಿದರೆ, ಅದರಲ್ಲಿ ರೈಲ್ವೆ ಕೋಚ್ ವಾಷಿಂಗ್ ಪ್ಲಾಂಟ್‌ಗಳನ್ನು 73 ಸ್ಥಳಗಳಲ್ಲಿ ಸ್ಥಾಪಿಸಲಾದ್ದು, ಇದು ನೀರು ಮತ್ತು ಹಣದ ಬಳಕೆಯನ್ನು ಕಡಿಮೆ ಮಾಡಲು ಇಲಾಖೆಗೆ ಸಹಾಯ ಮಾಡುತ್ತದೆ. ಸುಮಾರು 15-20 ನಿಮಿಷಗಳಲ್ಲಿ 24 ಕೋಚ್‌ಗಳ ಹೊರಭಾಗವನ್ನು ತೊಳೆಯುವ ಸಾಮರ್ಥ್ಯ ಹೊಂದಿವೆ. ಇದು ವಿಡಿಯೋದಲ್ಲಿ ಕಾಣುತ್ತದೆ.
ಸ್ವಯಂಚಾಲಿತ ಕೋಚ್ ವಾಶಿಂಗ್ ಪ್ಲಾಂಟ್
ಕಳೆದ ವರ್ಷ ಇಂತದ್ದೇ ಒಂದು ವಿಡಿಯೋ ಹರಿದಾಡಿತ್ತು. ಕೋರ್ಚ ಸ್ವಚ್ಛಗೊಳಿಸುವ ಸಾಧನವು ಹೆಚ್ಚಿನ ಒತ್ತಡದ ನೀರಿನ ಜೆಟ್‌ಗಳು ಮತ್ತು ಅಡ್ಡ ಮತ್ತು ಲಂಬವಾಗಿ ತಿರುಗುವ ಬ್ರಷ್‌ಗಳಂತಹ "ಅತ್ಯುತ್ತಮ ವೈಶಿಷ್ಟ್ಯಗಳನ್ನು" ಹೊಂದಿವೆ ಎಂದು ರೈಲ್ವೇ ಹೇಳಿಕೊಂಡಿತ್ತು. ಇವು 'ಸ್ವಯಂಚಾಲಿತ ಕೋಚ್ ವಾಶಿಂಗ್ ಪ್ಲಾಂಟ್‌ಗಳಾಗಿದ್ದು, ಪರಿಸರ ಸ್ನೇಹಿ ಮತ್ತು ದಕ್ಷಗೆ ಒಳಗೊಂಡಿವೆ. ಅಗತ್ಯ ರೀತಿಯಲ್ಲಿ ಕೋಚ್ ಸ್ವಚ್ಛಗೊಳಿಸುತ್ತದೆ.
Maintaining high standards of Cleanliness. 🚆🧼 pic.twitter.com/a1pl3yWlh8
— Ministry of Railways (@RailMinIndia) February 17, 2024
ಕೆಲವೇ ನಿಮಿಷಗಳಲ್ಲಿ ರೈಲು ಸ್ವಚ್ಚ, ವಿವರ
ರೈಲ್ವೆ ಕೋಚ್ ಹೊರ ಭಾಗ ತೊಳೆದಂತೆ ಒಳಗಿನ ಭಾಗ ತೊಳೆಯಲು ಸೂಕ್ಷ್ಮ ಸಾಧನೆಗಳು ಇವೆ. ಕೇವಲ 14 ನಿಮಿಷಗಳಲ್ಲಿ ಒಂದು ಇಡೀ ರೈಲನ್ನು ಶುಚಿಗೊಳಿಸುವ ಭಾರತೀಯ ರೈಲ್ವೆ ಪರಿಕಲ್ಪನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದಲ್ಲಿನ 29 ವಂದೇ ಭಾರತ್ ರೈಲುಗಳ ಶುಚಿಗಾಗಿ ಅವುಗಳ ಗಮ್ಯಸ್ಥಾನದ ನಿಲ್ದಾಣಗಳಲ್ಲಿ ಶುಚಿತ್ವದ ಘಟಕ ಆರಂಭವಾಗಿವೆ. ಸರತಿಯಂತೆ ಅತೀ ಕಡಿಮೆ ಅವಧಿಯಲ್ಲಿ ರೈಲುಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿನ ಕಸ ತ್ವರಿತ ವಿಲೇವಾರಿ
ಇನ್ನೂ ರೈಲುಗಳನ್ನು ನೀರಿನಿಂದ ತ್ವರಿತವಾಗಿ ಸ್ವಚ್ಛಗೊಳಿಸಿದ ರೈಲಿನ ಒಳಭಾಗ ಮತ್ತು ಹೊರಭಾಗಗಳನ್ನು ಒಣಗಿಸಲು ಮತ್ತು ಒರೆಸಿ ಒಣಗಿಸಲು ಕೋಚ್ಗಳಿಗೆ ಸಿಬ್ಬಿಂದ ಇರುತ್ತಾರೆ. ಇದೇ ವೇಳೆ ಟ್ರೈನಿನ ಒಳಗಿನ ತ್ಯಾಜ್ಯ ವನ್ನು ಚೀಲದಲ್ಲಿ ಸಂಗ್ರಹಿಸಲಾಗುತ್ತದೆ. ಸೂಕ್ತ ಕಡೆಗಳಲ್ಲಿ ರೈಲ್ವೆ ಸಿಬ್ಬಂದಿ ಕಸ ವಿಲೇವಾರಿ ಮಾಡುತ್ತಾರೆ.
ಇನ್ನೂ ಸ್ವಚ್ಛಗೊಳಿಸುವ ಉಪಕ್ರಮವು ಜಪಾನ್‌ನ ಒಸಾಕಾ ಮತ್ತು ಟೋಕಿಯೊದಂತಹ ವಿವಿಧ ನಿಲ್ದಾಣಗಳಲ್ಲಿ ಕೇವಲ ಏಳೇ ನಿಮಿಷದಲ್ಲಿ ರೈಲು ಕೋಚ್ ತೊಳೆದು ಶುಚಿಗೊಳಿಸಲಾಗುತ್ತದೆ. ಅದನ್ನು ಬಿಟ್ಟರೆ ಭಾರತದಲ್ಲೇ ಇಂಥದ್ದೊಂದು ಘಟಕದಲ್ಲಿ ಹದಿನಾಲ್ಕು ನಿಮಿಷದಲ್ಲಿ ಕೋಚ್ ಸ್ವಚ್ಛಗೊಳಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಇನ್ನೂ ಕಾರ್ಮಿಕರು ಹಸ್ತಚಾಲಿತವಾಗಿ ರೈಲ್ವೆ ಕೋಚ್ ಕ್ಲೀನ್ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚು ಸಮಯದ ಜತೆಗೆ ಅಧಿಕ ನೀರಿನ ಅಗ್ಯತ್ಯ ವಿರುತ್ತದೆ.












Click it and Unblock the Notifications