Indian Railway: ವೈರಲ್ ಆಯ್ತು ರೈಲ್ವೆ ಇಲಾಖೆ ಮೀಮ್ಸ್: ಅದರಲ್ಲೇನಿದೆ?
ಬೆಂಗಳೂರು, ಜನವರಿ 04: ರೈಲ್ವೆ ಇಲಾಖೆ, ರೈಲು ನಿಲ್ದಾಣಗಳ ಆಕರ್ಷಕ ಫೋಟೊಗಳನ್ನು ಹಂಚಿಕೊಳ್ಳಲು, ಮಾಹಿತಿ ನೀಡಲು ಬಳಕೆಯಾಗುತ್ತಿದ್ದ ರೈಲ್ವೇ ಸಚಿವಾಲಯವು ಸಾಮಾಜಿಕ ಜಾಲತಾಣ X ಹ್ಯಾಂಡಲ್ ಪೋಸ್ಟ್ ಮಾಡಿರುವ 'ಮೀಮ್ಸ್' (Memes) ಎಲ್ಲೆಡೆ ಹರಿದಾಡುತ್ತಿದೆ. ಪ್ರಯಾಣಿಕರ ಕುರಿತ ಪೋಸ್ಟ್ ಗೆ ನೆಟ್ಟಿಗರು ಮನಸೋತಿದ್ದಾರೆ.
ರೈಲ್ವೆ ಸಚಿವಾಲಯ ತನ್ನ ಸೋಷಿಯಲ್ ಹ್ಯಾಂಡಲ್ ಅನ್ನು ತನ್ನ ಇಲಾಖೆ ವ್ಯಾಪ್ತಿಯಲ್ಲಿ ಆಗುವ ಬೆಳವಣಿಗಳ ಮಾಹಿತಿ ನೀಡಲು ಬಳಸುತ್ತಿತ್ತು. ಇದೀಗ ಅದನ್ನು ಪ್ರಯಾಣಿಕರ ಒಳಿತಿಗಾಗಿ, ಜಾಗೃತಿಗಾಗಿ ಬಳಕೆ ಮಾಡುತ್ತಿದೆ. ಟ್ರೆಂಡಿಂಗ್ ಮೀಮ್‌ಗಳು ಮತ್ತು ವೈರಲ್ ನುಡಿಗಟ್ಟುಗಳನ್ನು ಪೋಸ್ಟ್ ಮಾಡುತ್ತಿದೆ.

ಅದೇ ರೀತಿ ಬುಧವಾರ, ಭಾರತೀಯ ರೈಲ್ವೇಯು 'ಬೈತ್ನೆ ಕಾ ತಾರಿಕಾ ಥೋಡಾ ಕ್ಯಾಶುಯಲ್ ಹೈ' ಪದಗುಚ್ಛವನ್ನು ಬಳಸಿದ ಫೋಟೊ ಫೋಸ್ಟ್ ಮಾಡಿದೆ. ರೈಲು ಪ್ರಯಾಣಿಕರನ್ನು ಸುರಕ್ಷಿತವಾಗಿ ಪ್ರಯಾಣಿಸಲು ಮತ್ತು ರೈಲಿನ ಬಾಗಿಲಲ್ಲಿ ಕುಳಿತುಕೊಳ್ಳದಂತೆ ಒತ್ತಾಯಿಸಿರುವ ಮೀಮ್ಸ್ ಇದಾಗಿದೆ. ಇದು ಇದೀಗ ವೈರಲ್ ಆಗುತ್ತಿದೆ.
ಫೋಟೊದಲ್ಲಿ ಕಾಣಿಸುತ್ತಿರುವ ದೃಶ್ಯವಿದು
ಪೋಸ್ಟ್ ನಲ್ಲಿ ರೈಲ್ವೆ ಇಲಾಖೆಯು, 'ನೀವು ಜವಾಬ್ದಾರಿಯುತ ರೈಲು ಯಾತ್ರಿಕರಾಗಿರಿ ಮತ್ತು ಬಾಗಿಲಲ್ಲಿ ಕುಳಿತು ಪ್ರಯಾಣಿಸಬೇಡಿ' ಎಂದು ಬರೆದುಕೊಂಡಿದೆ. ಅಲ್ಲದೇ ಪೋಸ್ಟ್ ನಲ್ಲಿ ರೈಲು ಬಾಗಿಲಿನಲ್ಲೇ ಕುಳಿತು ಪ್ರಯಾಣ ಮಾಡುತ್ತಿರುವ ಪ್ರಯಾಣಿಕರ ಫೋಟೊ ಹಾಕಲಾಗಿದೆ. ಚಿತ್ರದಲ್ಲಿ ರೈಲಿನೊಳಗೆ ನೀವು ಕುಳಿತುಕೊಳ್ಳುವ ರೀತಿ ತುಂಬಾ ಚೆನ್ನಾಗಿದೆ ಎಂಬ ಹಿಂದಿ ನುಡಿಯನ್ನು ಇಂಗ್ಲಿಷ್‌ನಲ್ಲಿ ಬರೆದದ್ದು ಕಾಣಿಸುತ್ತದೆ.
Be a #ResponsibleRailYatri and do not travel while sitting at the door. pic.twitter.com/XCsqwSUs5I
— Ministry of Railways (@RailMinIndia) January 3, 2024
ಕೆಲವರು ಈ ಪೋಸ್ಟ್‌ನಿಂದ ಖುಷಿ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರಯಾಣಿಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುವಂತೆ ರೈಲ್ವೆ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ. ನೀವು ''ಜವಾಬ್ದಾರಿಯುತ ರೈಲ್ವೇ ಆಗಿರಿ, ಪ್ರಯಾಣಿಕರಿಗೆ ಹೆಚ್ಚಿನ ರೈಲುಗಳು ಹಾಗೂ ಆಸನ ವ್ಯವಸ್ಥೆಯನ್ನು ಪರಿಚಯಿಸಿ'' ಎಂದು ಕೆಲವು ಬರೆದಿದ್ದಾರೆ. ಸಮಯಕ್ಕೆ ಸರಿಯಾಗಿ ರೈಲುಗಳ ಸೇವೆ ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಡೋರ್ ಲಾಕ್ ವ್ಯವಸ್ಥೆ ಅಳಡಿಕೆಗೆ ಮನವಿ
ಮತ್ತೊಬ್ಬ ನೆಟ್ಟಿಗರು ''ರೈಲು ನಿಲ್ದಾಣದಿಂದ ಸ್ವಲ್ಪ ನಿಗದಿತ ವೇಗದಲ್ಲಿ ಸಾಗಿದ ಬಳಿಕ ಪ್ರಯಾಣಿಕರ ಹಿತ ದೃಷ್ಟಿಯಿಂದ ಬಾಗಿಲುಗಳು ಲಾಕ್ ಆಗುವ ಸರಳ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು' ಎಂದು ಸಲಹೆ ನೀಡಿದ್ದಾರೆ.

ಜನರು ಈ ರೀತಿ ಪ್ರಯಾಣ ಮಾಡುವುದನ್ನು ನೋಡಲು ಬೇಸರ ಅನ್ನಿಸುತ್ತದೆ. ಇಂತಹ ಸಮಸ್ಯೆಗಳು, ಸಂಭವನೀಯ ಪರಿಹಾರಗಳನ್ನು ಅರ್ಥಮಾಡಿಕೊಳ್ಳಲು ಈ ಕಾಯ್ದಿರಿಸದ ಮತ್ತು ಎಸಿ ಅಲ್ಲದ ವಿಭಾಗಗಳಲ್ಲಿ ಗಮನಿಸಲು ಅಧಿಕಾರಿಗಳನ್ನು ನೇಮಿಸುವಂತೆ ನೆಟ್ಟಿಗರಲ್ಲಿ ಒಬ್ಬರು ಕೇಳಿಕೊಂಡಿದ್ದಾರೆ.
ಟ್ರೆಂಡಿಂಗ್ ಬಳಕೆ ಇದೇ ಮೊದಲೇನಲ್ಲ
ರೈಲ್ವೇ ಸಚಿವಾಲಯ ವೈರಲ್ ಟ್ರೆಂಡ್ ಅನ್ನು ಬಳಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಒಂದು ವಾರಗಳ ಹಿಂದೆ ವೈರಲ್ ಆಗಿದ್ದ ಸೋ ಬ್ಯೂಟಿಫುಲ್, ಸೋ ಎಲಿಗಂಟ್" ಅನ್ನು ರೈಲ್ವೆ ಇಲಾಖೆ ಜಾಗೃತಿಗಾಗಿ ಬಳಸಿಕೊಂಡಿತ್ತು. ಇದೀಗ ಬಾಗಿಲಲ್ಲಿ ಕುಳಿತುಕೊಳ್ಳದಂತೆ ಜಾಗೃತಿ ಮೂಡಿಸಲು ಮೀಮ್ಸ್ ಬಳಸಿಕೊಂಡಿದೆ.












Click it and Unblock the Notifications