e-commerce ವಹಿವಾಟು 63000 ಕೋಟಿ ರೂ. ಗೆ

2012ರ ಡಿಸೆಂಬರ್ ಅಂತ್ಯಕ್ಕೆ ದೇಶದಲ್ಲಿ e-commerce ಪ್ರಮಾಣ 47,349 ಕೋಟಿ ರೂ. ಇತ್ತು. ಅದೀಗ ಶೇ. 33ರಷ್ಟು ಭಾರಿ ಪ್ರಮಾಣದ ಬೆಳವಣಿಗೆ ಸಾಧಿಸುತ್ತಿದೆ ಎಂದು IMAI- IMRB ಅಧ್ಯಯನ ತಿಳಿಸಿದೆ.
ಮನೆಯಲ್ಲಿ ಅಗತ್ಯವಿರುವ ದವಸ ಧಾನ್ಯಗಳಿಂದು ಹಿಡಿದು ಕಚೇರಿ ಉಪಕರಣಗಳು, ವೈದ್ಯಕೀಯ ಕ್ಷೇತ್ರ, ಗ್ರಾಹಕ ಉತ್ಪನ್ನಗಳ ಖರೀದಿ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ e-commerce ಹಾಸುಹೊಕ್ಕಿದೆ. ಸ್ವಲ್ಪಮಟ್ಟಿಗೆ ಹೇಳಬೇಕೆಂದರೆ e-commerce ಕ್ಷೇತ್ರಕ್ಕೆ ಬೇಡಿಕೆಯನ್ನು ಪೂರೈಸುವುದು ಕಷ್ಟಸಾಧ್ಯವಾಗುತ್ತಿದೆ.
ಆನ್ ಲೈನ್ ಮೂಲಕ ಖರೀದಿದಾರರ ಸಾಮರ್ಥ್ಯವೂ ಹೆಚ್ಚಾಗುತ್ತಿದೆ. ಆನ್ ಲೈನ್ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸುತ್ತಿದ್ದಾರೆ. 2012ರಲ್ಲಿ ಗ್ರಾಹಕರು ಸರಾಸರಿ 10,000 ರೂ. ಖರ್ಚು ಮಾಡುತ್ತಿದ್ದರು. ಈ ವರ್ಷ ತಲಾ ಸಾಮರ್ಥ್ಯ 14,000 ರೂ. ಗೆ ತಲುಪುವ ಆಶಯವಿದೆ ಎಂದು IMAI- IMRB ಅಧ್ಯಯನದಲ್ಲಿ ಅಂದಾಜಿಸಲಾಗಿದೆ.
e-commerce ಹೆಚ್ಚಾಗಿ ಪ್ರವಾಸೋದ್ಯಮದಲ್ಲಿ ಕಂಡುಬರುತ್ತಿದೆ. e-commerce ಮೂಲಕ ರೈಲು, ವಿಮಾನ, ಬಸ್ ಟಿಕೆಟ್ ಖರೀದಿ ನಡೆಯುತ್ತಿದೆ. ಜತೆಗೆ ಹೋಟೆಲ್ ಮತ್ತು ಟೂರ್ ಪ್ಯಾಕೇಜ್ ಸಹ ನಡೆಯುತ್ತಿದೆ.
ಹಾಗೆಯೇ ವಿಮಾ ಕಂತು ತುಂಬುವುದು, ಮೊಬೈಲ್, ಮೊಬೈಲ್ ಕರೆನ್ಸಿ, ವಿದ್ಯುತ್, ದೂರವಾಣಿ ಬಿಲ್ ಪಾವತಿ, ಷೇರು ವಹಿವಾಟು ಹೀಗೆ ಎಲ್ಲ ವಿಭಾಗಗಳಲ್ಲೂ e-commerceಗೆ ಮಣೆ ಹಾಕಲಾಗಿದೆ. ಸಿನಿಮಾ ಟಿಕೆಟ್ ಖರೀದಿ, ಆಹಾರ ಸೇವೆ ಇವೇ ಮುಂತಾದ ಕ್ಷೇತ್ರಗಳಲ್ಲೂ e-commerce ತನ್ನ ಇರುವನ್ನು ಕಂಡುಕೊಂಡಿದೆ.












Click it and Unblock the Notifications