ಭಾರತದಲ್ಲಿ ಎಷ್ಟು ಮಂದಿ ಮೇಲೆ 3 ಕೊರೊನಾ ಲಸಿಕೆಗಳ ಪ್ರಯೋಗ?
ನವದೆಹಲಿ, ಆಗಸ್ಟ್ 25: ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, 1750 ಮಂದಿ ಸ್ವಯಂ ಸೇವಕರು ಈ ಪ್ರಯೋಗದಲ್ಲಿ ಭಾಗಿಯಾಗಲಿದ್ದಾರೆ.
Recommended Video
ಈ ಕುರಿತು ಐಸಿಎಂಆರ್ ಮಾಹಿತಿ ನೀಡಿದೆ, ಡಾ. ಬಲರಾಮ್ ಭಾರ್ಗವ್ ಮಾತನಾಡಿ, ಸೀರಮ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ ಲಸಿಕೆ, ಭಾರತ್ ಬಯೋಎನ್‌ಟೆಕ್‌ನ ಕೋವ್ಯಾಕ್ಸಿನ್ ಹಾಗೂ ಜೈಡಸ್ ಕ್ಯಾಡಿಲ್ಲಾದ ಝೈಕೋವ್ ವಿ ಲಸಿಕೆಯ ಬಗ್ಗೆ ಭರವಸೆ ಮೂಡಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಂತ 2(ಬಿ) ಹಾಗೂ ಮೂರನೇ ಪ್ರಯೋಗ ನಡೆಸುತ್ತಿದೆ. 1700 ಮಂದಿ ಈ ಟ್ರಯಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ್ ಬಯೋಎನ್‌ಟೆಕ್ ಎರಡನೇ ಹಂತದ ಪ್ರಯೋಗವನ್ನು ಆರಂಭಿಸಬೇಕಿದೆ. ಝೈಡಸ್ ಲಸಿಕೆಯ ಎರಡನೇ ಪ್ರಯೋಗ 50 ಮಂದಿಯ ಮೇಲೆ ನಡೆದಿದೆ.

ಮೊದಲೇ ಹಂತದಲ್ಲಿ ಕಡಿಮೆ ಜನರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ಹೆಚ್ಚು ಮಂದಿ, ಮೂರನೇ ಹಂತದಲ್ಲಿ ಇನ್ನೂ ಅಧಿಕ ಮಂದಿ ಮೇಲೆ ಪ್ರಯೋಗ ನಡೆಯುತ್ತದೆ. ಭಾರತದಲ್ಲಿ ನಡೆಯುತ್ತಿರುವ ಪ್ರಯೋಗದಲ್ಲಿ 1700 ಮಂದಿ ಭಾಗವಹಿಸಿದ್ದಾರೆ.
ಸ್ಪುಟ್ನಿಕ್ 5 ಲಸಿಕೆ ಕುರಿತು ಭಾರತ ಹಾಗೂ ರಷ್ಯಾ ಮಾತುಕತೆ ನಡೆಸುತ್ತಿದೆ, ಶೀಘ್ರ ಒಂದು ನಿರ್ಧಾರಕ್ಕೆ ಬರಲಿವೆ.












Click it and Unblock the Notifications