ಪಾಕಿಸ್ತಾನದ ಶೆಲ್ ದಾಳಿಗೆ ಪ್ರತಿ ದಾಳಿ, 7 ಪಾಕ್ ಯೋಧರ ಸಾವು
ಜಮ್ಮು ಕಾಶ್ಮೀರ, ಜನವರಿ 15: ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನವು ಭಾರತೀಯ ಸೇನೆ ಮೇಲೆ ಮೋಟಾರ್ ಶೆಲ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ 7 ಪಾಕಿಸ್ತಾನ ಯೋಧರನ್ನು ಹೊಡೆದುರುಳಿಸಿದೆ.
ಗಡಿ ನಿಯಂತ್ರಣ ರೇಖೆ ಬಳಿಯ ಮೇಧರ್ ಸೆಕ್ಟರ್ ಸಮೀಪದ ಕೋಟ್ಲಿ ಪ್ರದೇಶದಲ್ಲಿ ಈ ದಾಳಿ, ಪ್ರತಿದಾಳಿಗಳು ನಡೆದಿವೆ. ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನದ ನಾಲ್ಕು ಸೇನಾ ನೆಲೆಗಳು ಸುಟ್ಟು ಭಸ್ಮವಾಗಿವೆ.
ನಿನ್ನೆಯಷ್ಟೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು, ಆದರೆ ಇದರಿಂದ ಬುದ್ಧಿ ಕಲಿಯದ ಪಾಕ್ ಇಂದು ಅಪ್ರಚೋದಿತ ದಾಳಿ ಆರಂಭಿಸಿತ್ತು. ಆದರೆ ಪಾಕಿಸ್ತಾನದ ದಾಳಿಯಿಂದ ಭಾರತೀಯ ಯೋಧರ ಜೀವಕ್ಕೆ ಯಾವುದೇ ಹಾನಿ ಆಗಿಲ್ಲ.

ಇಂದು ಮುಂಜಾನೆ ಭಾರತೀಯ ಯೋಧರು 6 ಮಂದಿ ಭಯೋತ್ಪಾದಕರನ್ನು ಪರಲೋಕಕ್ಕೆ ಕಳಿಸಿದ್ದರು, ಅದಾಗಿ ಮೂರು ಗಂಟೆ ಅವಧಿಯಲ್ಲಿ 7 ಮಂದಿ ಪಾಕಿಸ್ತಾನದ ಯೋಧರನ್ನು ಹೊಡೆದುರುಳಿಸಿದ್ದಾರೆ. ಇಂದು ಸೇನಾ ದಿವಸವಾಗಿದ್ದು, ಇಂದೇ ಭಾರತೀಯ ಸೇನೆ ದೇಶದ ವಿರುದ್ಧ ದಾಳಿ ಮಾಡಿದವರನ್ನು ಹೊಡೆದುರುಳಿಸಿದೆ.











Click it and Unblock the Notifications