ಇಸ್ರೇಲ್‌ನಲ್ಲಿ ಭಾರತೀಯ ನಟಿಯ ತಂಗಿ, ಸೋದರ ಮಾವ ಬರ್ಬರ ಹತ್ಯೆ
ಮುಂಬೈ, ಅಕ್ಟೋಬರ್ 10: ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ನಿಯರ ಸಂಘರ್ಷದಿಂದಾಗಿ ಸಾವಿರಾರು ಮಂದಿ ಭಾರತೀಯರು ಉದ್ದಪೀಡಿತ ನೆಲದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಭಾರತೀಯ ನಟಿಯೊಬ್ಬರ ಸಂಬಂಧಿಕರ ಬರ್ಬರ ಹತ್ಯೆಯಾಗಿದೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ನುಶ್ರತ್ ಭರುಚ್ಚ ಇಸ್ರೇಲ್‌ಗೆ ತೆರಳಿ ಕೆಲಕಾಲ ಅಲ್ಲಿ ಸಿಲುಕಿಕೊಂಡು ಬಳಿಕ ತಕ್ಷಣ ವಾಪಾಸ್ ಆಗಿದ್ದರು. ಇದೀಗ ಮತ್ತೊಬ್ಬ ನಟಿಯ ಕುಟುಂಬದ ಸದಸ್ಯರು ಯುದ್ಧಪೀಡಿತ ನೆಲದಲ್ಲಿ ಹತರಾಗಿದ್ದಾರೆ.

ಹಿಂದಿ ಕಿರುತೆರೆ ನಾಗಿನ್ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿರುವ ಮಧುರಾ ನಾಯ್ಕ್ ಅವರು ತನ್ನ ಸೋದರಿ ತಂಗಿ ಮತ್ತು ಸೋದರ ಮಾವನವರು ಭೀಕರವಾಗಿ ಕೊಲೆಯಾಗಿದ್ದಾರೆ ಎಂದು ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇಸ್ರೇಲ್‌ನಲ್ಲಿ ತಮ್ಮ ಸಂಬಂಧಿಕರನ್ನು ಅವರ ಮಕ್ಕಳ ಕಣ್ಣುಗಳ ಮುಂದೆಯೇ ಕೊಲ್ಲಲಾಗಿದೆ. ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಟೊ ಮಧುರಾ ನಾಯ್ಕ್ ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ "ನನ್ನ ಸಹೋದರಿ ಮತ್ತು ಅವಳ ಪತಿಯನ್ನು ಪ್ಯಾಲೆಸ್ತೀನ್ ಉಗ್ರರು ಮಕ್ಕಳ ಮುಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ ಯಹೂದಿ ಆಗಿರುವ ಮಧುರಾ ತನ್ನ ಸಹೋದರಿ ಹತ್ಯೆ ವಿಚಾರ ಹಂಚಿಕೊಂಡ ಬಳಿಕ ಅನೇಕರು ನಟಿ ಯಹೂದಿ ಆಗಿರುವುದಕ್ಕೆ ಅವರ ಮೇಲೆ ನಾನಾ ಕಮೆಂಟ್ ಮಾಡುತ್ತಿದ್ದಾರೆ ಎಂದು ಮಧುರಾ ಹೇಳಿದ್ದಾರೆ.
ನಾನು ಯಾವುದೇ ರೀತಿಯ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ. ಇಸ್ರೇಲ್‌ನಲ್ಲಿರುವ ಜನರಿಗಾಗಿ ಮತ್ತು ಬಲಿಪಶುಗಳ ಕುಟುಂಬಗಳಿಗಾಗಿ ಪ್ರಾರ್ಥಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಅವರು ಕಸೌತಿ ಜಿಂದಗಿ ಕೇ, ಉತ್ತರಾನ್, ಪ್ಯಾರ್ ಕಿ ಯೇ ಏಕ್ ಕಹಾನಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂನ್? ಮುಂತಾದ ಹಿಂದಿ ಧಾರವಾಹಿಗಳಲ್ಲಿ ನಟಿಸಿದ್ದಾರೆ.












Click it and Unblock the Notifications