ಜಗತ್ತಿನಲ್ಲಿ 5 ಲಕ್ಷ ಕೊರೊನಾವೈರಸ್ ಸಾವಿನ ಪ್ರಕರಣ ದಾಖಲಿಸಿದ 3ನೇ ರಾಷ್ಟ್ರ ಭಾರತ!

ನವದೆಹಲಿ, ಫೆಬ್ರವರಿ 4: ಭಾರತವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ 5 ಲಕ್ಷಕ್ಕೂ ಹೆಚ್ಚು ಸಾವಿನ ಪ್ರಕರಣಗಳನ್ನು ದಾಖಲಿಸಿದ ಜಗತ್ತಿನ ಮೂರನೇ ರಾಷ್ಟ್ರವಾಗಿದೆ. ಗುರುವಾರ ಒಂದೇ ದಿನ 1,000ಕ್ಕೂ ಹೆಚ್ಚು ಸಾವಿನ ಪ್ರಕರಣಗಳನ್ನು ದಾಖಲಿಸುವ ಮೂಲಕ ಭಾರತದಲ್ಲಿ ಸಾವಿನ ಸಂಖ್ಯೆ 5 ಲಕ್ಷದ ಗಡಿ ದಾಟಿದೆ.

ಯುನೈಟೆಡ್ ಸ್ಟೇಟ್ಸ್ ಮಾತ್ರ 9.2 ಲಕ್ಷಕ್ಕೂ ಹೆಚ್ಚು ಕೊರೊನಾವೈರಸ್ ಸಾವಿನ ಪ್ರಕರಣಗಳನ್ನು ವರದಿ ಮಾಡಿದ್ದು, ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಬ್ರೆಜಿಲ್ ನಲ್ಲಿ 6.31 ಲಕ್ಷ ಸಾವಿನ ಪ್ರಕರಣ ವರದಿ ಆಗಿವೆ. 5 ಲಕ್ಷ ಸಾವಿನ ಪ್ರಕರಣಗಳನ್ನು ವರದಿ ಮಾಡುವ ಮೂಲಕ ಭಾರತ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 3.3 ಲಕ್ಷ ಸಾವಿನ ಪ್ರಕರಣಗಳನ್ನು ವರದಿ ಮಾಡಿರುವ ರಷ್ಯಾ ನಾಲ್ಕನೇ ಸ್ಥಾನದಲ್ಲಿದ್ದರೆ ಮೆಕ್ಸಿಕೋ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಭಾರತದಲ್ಲಿ 2020ರ ಜುಲೈ 1ರಂದು ಒಟ್ಟು 4 ಲಕ್ಷ ಕೊವಿಡ್-19 ಸಾವಿನ ಪ್ರಕರಣಗಳು ವರದಿಯಾಗಿದ್ದವು. ಅಂದಿನಿಂದ 217 ದಿನಗಳ ನಂತರದಲ್ಲಿ ಈ ಸಾವಿನ ಸಂಖ್ಯೆಯು 4 ರಿಂದ 5 ಲಕ್ಷದ ಗಡಿ ದಾಟಿದೆ. ಒಂದು ಲಕ್ಷ ಸಾವಿನ ಪ್ರಕರಣಗಳನ್ನು ವರದಿ ಮಾಡುವುದಕ್ಕೆ 217 ದಿನಗಳ ಸುದೀರ್ಘ ಅವಧಿಯನ್ನು ಗಮನಿಸಿದಾಗ ಕೊವಿಡ್-19 ಸಾವಿನ ಪ್ರಮಾಣ ಕಡಿಮೆ ಆಗಿರುವುದು ಕಂಡು ಬರುತ್ತದೆ.

ಕೊವಿಡ್-19 ಲಸಿಕೆ ವಿತರಣೆಯಿಂದ ಸಾವು ಇಳಿಕೆ

ಕೊವಿಡ್-19 ಲಸಿಕೆ ವಿತರಣೆಯಿಂದ ಸಾವು ಇಳಿಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದ್ದವು. ಅದಾಗ್ಯೂ, ಕೊವಿಡ್-19 ಲಸಿಕೆ ವಿತರಣೆಗೆ ವೇಗ ನೀಡಲಾಗಿದ್ದು, ತದನಂತರ ಸಾವಿನ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಲಸಿಕೆ ವಿತರಣೆಯು ಸಾವಿನ ಪ್ರಮಾಣವನ್ನು ತಗ್ಗಿಸಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ತಿಂಗಳಾಂತ್ಯದ ವೇಳೆಗೆ ಸಾವಿನ ಸಂಖ್ಯೆ ಇಳಿಕೆಯಾಗಿದ್ದು, ತದನಂತರದಲ್ಲಿ ಓಮಿಕ್ರಾನ್ ಮೂರನೇ ಅಲೆಯ ಭೀತಿಯನ್ನು ಹುಟ್ಟಿಸುತ್ತಿದೆ. ಜನವರಿ 3ರಿಂದ ಒಂದು ವಾರದ ಸರಾಸರಿ ಸಾವಿನ ಪ್ರಕರಣಗಳ ಸಂಖ್ಯೆ 600 ಗಡಿ ದಾಟುತ್ತಿದೆ. ಎರಡನೇ ಅಲೆಯಲ್ಲಿ ಒಂದು ವಾರದ ಸಾವಿನ ಸರಾಸರಿ ಸಂಖ್ಯೆ 1,176ಕ್ಕಿಂತ ಹೆಚ್ಚಾಗಿತ್ತು. ಆದರೆ ಈಗ ಸಾವಿನ ಪ್ರಮಾಣ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ.

ಕೊವಿಡ್-19 ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ

ಕೊವಿಡ್-19 ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ.1.42ರಷ್ಟಿತ್ತು. ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಸಾವಿನ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.1.36ರಷ್ಟಿತ್ತು. ಆದರೆ ಮೂರನೇ ಅಲೆಯಲ್ಲಿ ಸಾವಿನ ಸರಾಸರಿ ಪ್ರಮಾಣ ತೀರಾ ಕಡಿಮೆಯಾಗಿದ್ದು, ಶೇ.0.16ರಷ್ಟಿರುವುದು ಗೊತ್ತಾಗಿದೆ. ಕಳೆದ 2020ರ ಮಾರ್ಚ್ 12 ರಿಂದ ಅಕ್ಟೋಬರ್ 2ರವರೆಗೆ ಅಂದರೆ 204 ದಿನಗಳ ನಂತರ ಮೊದಲ ಒಂದು ಲಕ್ಷ ಕೊವಿಡ್-19 ಸಾವಿನ ಪ್ರಕರಣಗಳು ವರದಿಯಾಗಿದ್ದವು. 2020ರ ಅಕ್ಟೋಬರ್ 12 ರಿಂದ 207 ದಿನಗಳಲ್ಲಿ ಸಾವಿನ ಪ್ರಕರಣಗಳ ಸಂಖ್ಯೆ ಎರಡು ಲಕ್ಷಕ್ಕೆ ಏರಿಕೆ ಆಯಿತು. ಅಲ್ಲಿಂದ ಮುಂದಿನ 24 ದಿನಗಳಲ್ಲೇ ಸಾವಿನ ಸಂಖ್ಯೆ ಎರಡರಿಂದ ಮೂರು ಲಕ್ಷಕ್ಕೆ ಹೆಚ್ಚಿತು. 2021ರ ಮೇ 23 ರಿಂದ ಜುಲೈ 1ರ ವೇಳೆಗೆ ಅಂದರೆ 39 ದಿನಗಳಲ್ಲಿ ಮೂರು ಲಕ್ಷದಿಂದ ಸಾವಿನ ಸಂಖ್ಯೆ 4 ಲಕ್ಷಕ್ಕೆ ಏರಿಕೆ ಆಯಿತು. ತದನಂತರದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗಿದ್ದು, 4 ರಿಂದ ಸಾವಿನ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಲು 217 ದಿನಗಳನ್ನು ತೆಗೆದುಕೊಳ್ಳಲಾಗಿದೆ.

ದೇಶದಲ್ಲಿ ಒಂದೇ ದಿನ 1100 ಮಂದಿ ಸಾವು

ದೇಶದಲ್ಲಿ ಒಂದೇ ದಿನ 1100 ಮಂದಿ ಸಾವು

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಒಂದೇ ದಿನ 1.40 ಲಕ್ಷಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 149,394 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,100 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 246,674 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 41,952,712ಕ್ಕೆ ಏರಿಕೆಯಾಗಿದೆ. ಈ ಪೈಕಿ 40,017,088 ಸೋಂಕಿತರು ಗುಣಮುಖರಾಗಿದ್ದರೆ, 500,087 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 1,435,537 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 388,980,985 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 5,733,114 ಮಂದಿ ಪ್ರಾಣ ಬಿಟ್ಟಿದ್ದಾರೆ. 308,274,298 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 74,973,573 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+