India Weather: ಉತ್ತರ ಭಾರತದಲ್ಲಿ ಶೀತ ಅಲೆ ಎಚ್ಚರಿಕೆ: ಕರ್ನಾಟಕದಲ್ಲಿ ತಗ್ಗಿದ ಚಳಿ- ದೇಶದಾದ್ಯಂತ ಹವಾಮಾನ ತಿಳಿಯಿರಿ
ಡಿಸೆಂಬರ್ ತಿಂಗಳು ಕಳೆಯುತ್ತಿದ್ದಂತೆ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚಳಿ ತೀವ್ರಗೊಂಡಿದೆ. ಹೀಗಾಗಿ ಹಲವೆಡೆ ಭಾರತೀಯ ಹವಾಮಾನ ಇಲಾಖೆ (IMD) ಶೀತ ಅಲೆ ಮತ್ತು ಮಂಜಿನ ಎಚ್ಚರಿಕೆಯನ್ನು ನೀಡಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರ ಡಿಸೆಂಬರ್ 22 ರಂದು ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗುವ ಮುನ್ಸೂಚನೆ ನೀಡಲಾಗಿದೆ. ಪೂರ್ವ ರಾಜಸ್ಥಾನ, ಜಾರ್ಖಂಡ್, ಪಂಜಾಬ್, ಹರಿಯಾಣ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಬಿಹಾರದ ವಿವಿಧ ಪ್ರದೇಶಗಳಲ್ಲಿ ತಡರಾತ್ರಿ ಮತ್ತು ಬೆಳಿಗ್ಗೆ ದಟ್ಟವಾದ ಮಂಜು ಆವರಿಸುತ್ತಿದ್ದು ಈ ಸಮಯದಲ್ಲಿ ಜನ ಮನೆ ಬಿಟ್ಟು ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಪ್ರದೇಶದಲ್ಲಿ ಡಿಸೆಂಬರ್ 26 ರಿಂದ 28 ರ ನಡುವೆ ಮಳೆ
ಐಎಂಡಿ ಪ್ರಕಾರ ಡಿಸೆಂಬರ್ 26 ಮತ್ತು 28 ರ ನಡುವೆ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಆ ನಂತರ ಉತ್ತರ ಪ್ರದೇಶದಲ್ಲಿ ಚಳಿಗಾಲದ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಯುಪಿಯಲ್ಲಿ ಇಂದು ಹವಾಮಾನ ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಡಿಸೆಂಬರ್ 23, 24 ಮತ್ತು 25 ರಂದು ಸಹ ಹವಾಮಾನ ಸ್ಪಷ್ಟವಾಗಿರುತ್ತದೆ. ಡಿಸೆಂಬರ್ 26 ರಂದು ಮಳೆಯ ನಂತರ ಹವಾಮಾನದಲ್ಲಿ ಬದಲಾವಣೆಯ ನಿರೀಕ್ಷೆಗಳಿವೆ. ಇದರ ದೊಡ್ಡ ಪರಿಣಾಮ ಪಶ್ಚಿಮ ಯುಪಿಯಲ್ಲಿ ಕಂಡುಬರುತ್ತದೆ.
ಕರ್ನಾಟಕದಲ್ಲಿ ತಗ್ಗಿದ ಚಳಿಯ ಪ್ರಮಾಣ
ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿದೆ. ಕಳೆದ ಕೆಲ ದಿನಗಳಿಂದ ಚಳಿ ಕಡಿಮೆಯಾಗುತ್ತಿದ್ದು ಭಾನುವಾರವೂ ಚಳಿ ಹೆಚ್ಚಾಗಿರಲಿಲ್ಲ. ಇಂದು ಅಲ್ಲಲ್ಲಿ ಮಂಜಿನ ವಾತಾವರಣ ಕಂಡು ಬಂದಿದ್ದು ಹೇಳಿಕೊಳ್ಳುವಂತಹ ಚಳಿ ಇರಲಿಲ್ಲ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ದಿನದ ಕೆಲ ಸಮಯದಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಸಂಜೆಯ ನಂತರ ಶುಭ್ರವಾದ ಆಕಾಶ ಇರುತ್ತದೆ. ಇನ್ನೂ ಇಂದು ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಐಎಂಡಿ ಪ್ರಕಾಋ ಇಂದು ಯಾವುದೇ ಮಳೆ ಮುನ್ಸೂಚನೆ ಇಲ್ಲ. ಆದರೆ ಡಿಸೆಂಬರ್ 23,24,25 ಹಾಗೂ 26ರಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 22) ತಾಪಮಾನ 25.12 ಸೆಲ್ಸಿಯಸ್ ಇದೆ. ಸಾಪೇಕ್ಷ ಆರ್ದ್ರತೆ 52% ಮತ್ತು ಗಾಳಿಯ ವೇಗ ಗಂಟೆಗೆ 52 ಕಿ.ಮೀ. ಸೂರ್ಯ ಬೆಳಿಗ್ಗೆ 06:37 ಕ್ಕೆ ಉದಯಿಸುತ್ತಾನೆ ಮತ್ತು ಸಂಜೆ 05:58 ಕ್ಕೆ ಅಸ್ತಮಿಸುತ್ತಾನೆ. ನಾಳೆ ಸೋಮವಾರ (ಡಿಸೆಂಬರ್ 23) ಬೆಂಗಳೂರು ಅನುಕ್ರಮವಾಗಿ 19.57 °C ಮತ್ತು 26.54 °C ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ.
ಇಂದಿನ ಮುನ್ಸೂಚನೆಯ ಪ್ರಕಾರ ಆಕಾಶ ಮೋಡದಿಂದ ಕೂಡಿರುತ್ತದೆ. ಇನ್ನೂ ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟ 91.0 (AQI) ಇದೆ. ಇದು ನಗರದಲ್ಲಿ ಉತ್ತಮ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತದೆ. ಉಸಿರಾಟದ ಸಮಸ್ಯೆಗಳಿರುವ ಜನರು ವಿಶೇಷವಾಗಿ ಹೊರಾಂಗಣ ಚಟುವಟಿಕೆಗಳನ್ನು ಯೋಜಿಸುವಾಗ ಜಾಗರೂಕರಾಗಿರಿ.
Photo credit:This is an AI generated aticle image through WISE












Click it and Unblock the Notifications