India weather: ಫೆಬ್ರವರಿ 27ರಂದು ದೇಶದ ಈ ಭಾಗಗಳಲ್ಲಿ ಮಳೆ ಮುನ್ಸೂಚನೆ
India weather: ಇದೀಗ ಚಳಿಗಾಲ ಇದ್ದು, ಇದರ ನಡುವೆಯೂ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಬಿಸಿಲು ಇರುತ್ತಿದೆ. ಇನ್ನು ಉತ್ತರ ಭಾರತದ ಭಾಗದಲ್ಲಿ ಮಾತ್ರ ಹಿಮಪಾತವಾಗುತ್ತಿದ್ದು, ಭೀಕರ ಚಳಿಗೆ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಇದರ ನಡುವೆಯೂ ಫೆಬ್ರವರಿ 27ರಂದು ಹಲವೆಡೆ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಸುರಿಯಲಿದೆ ಎಂದು ಇಲ್ಲಿ ತಿಳಿಯಿರಿ.
ಫೆಬ್ರವರಿ 27ರಂದು ಮಧ್ಯ ಭಾರತದಲ್ಲಿ ಗುಡುಗು, ಆಲಿಕಲ್ಲು, ಮಿಂಚಿನ ಜೊತೆ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಫೆಬ್ರವರಿ 29ರಿಂದ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪಕ್ಕದ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿವಿಧ ಪ್ರದೇಶಗಳಲ್ಲಿ ಹಿಮಪಾತದ ವರದಿ: ಭಾನುವಾರ (ಫೆಬ್ರವರಿ 25) ಮನಾಲಿಯಲ್ಲಿ 4 ಸೆಂಟಿ ಮೀಟರ್, ಕಲ್ಪಾದಲ್ಲಿ 3.5 ಸೆಂಟಿ ಮೀಟರ್, ಸಾಂಗ್ಲಾದಲ್ಲಿ 3.2 ಸೆಂ.ಮೀ., ಖದ್ರಾಲದಲ್ಲಿ 2 ಸೆಂ.ಮೀ., ಮತ್ತು ಸರಹನ್‌ನಲ್ಲಿ 1 ಸೆಂ.ಮೀಟರ್ ಮಳೆಯಾಗಿದೆ. ಇನ್ನು ಶಿಮ್ಲಾ, ಕುಫ್ರಿ, ಡಾಲ್ಹೌಸಿ, ಕೀಲಾಂಗ್, ಕುಕುಮ್ಸೇರಿ ಮತ್ತು ಗೊಂಡ್ಲಾದಲ್ಲಿ ಹಿಮಪಾತವಾದ ವರದಿಯಾಗಿದೆ.
ಇನ್ನು ಹವಾಮಾನ ಇಲಾಖೆಯು, ಫೆಬ್ರುವರಿ 25 ರಿಂದ ಮಾರ್ಚ್ 1ರವರೆಗೆ ಎತ್ತರದ ಪ್ರದೇಶದ ಹಲವೆಡೆ ಹಿಮಪಾತ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಫೆಬ್ರವರಿ 26, 27 ಮತ್ತು 29ರಂದು ಮಧ್ಯ ಬೆಟ್ಟಗಳ ಕೆಲವು ಸ್ಥಳಗಳಲ್ಲಿ ಮತ್ತು ಮಾರ್ಚ್‌ನಲ್ಲಿ ಹಲವೆಡೆ ಮಳೆಯಾಗುವ ಮುನ್ಸೂಚನೆ ನೀಡಿದೆ.
ಹಾಗೆಯೇ ನಾಳೆ (ಫೆಬ್ರವರಿ 27) ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು












Click it and Unblock the Notifications